ಹಿಂದಿ ದೇಶ ನ್ಯಾಯಾಂಗ, ಆಡಳಿತ, ವಿಜ್ಞಾನದ ಭಾಷೆಯಾಗಬೇಕು ಎಂದ ಅಮಿತ್ ಶಾ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಹಿಂದಿ ಭಾಷೆಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹಿಂದಿ ಭಾಷೆಯು ಕೇವಲ ಜನಸಾಮಾನ್ಯರು ಬಳಕೆ ಮಾಡುವ ಭಾಷೆಯಾಗಬಾರದು ಎಂದಿರುವ ಅವರು, ಹಿಂದಿ ಭಾಷೆಯು ದೇಶದ ನ್ಯಾಯಾಂಗ, ಆಡಳಿತ, ಪೊಲೀಸ್ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿ ಬದಲಾಗಬೇಕು ಎಂದು ಹೇಳಿದ್ದಾರೆ. ಈ ಮೂಲಕ ಹಿಂದಿ ಭಾಷೆ - ಭಾರತೀಯ ಭಾಷೆ ಚರ್ಚೆಗೆ ಅಮಿತ್ ಶಾ ಅವರು ಮತ್ತೆ ನಾಂದಿ ಹಾಡಿದ್ದಾರೆ. ಈಚೆಗೆ ಅವರು ಇಂಗ್ಲಿಷ್ ಮಾತನಾಡುವವರು ನಾಚಿಕೆಪಡುವ ಸಮಯ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದರು.

ದೇಶದಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಭಾಷಾ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಭಾಷಾ ವಿವಾದ ಹಾಗೂ ಹಿಂದಿ ಹೇರಿಕೆ ವಿಚಾರವಾಗಿ ದೇಶದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ದೇಶದ ವಿವಿಧ ಕ್ಷೇತ್ರಗಳ ಭಾಷೆಯಾಗಬೇಕು ಎಂದಿದ್ದಾರೆ. ಮುಂದುವರಿದು ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದೂ ಅವರು ಹೇಳಿದ್ದಾರೆ. ಆದರೆ, ಹಿಂದಿ ಕೇವಲ ಮಾತನಾಡುವ ಭಾಷೆಯಾಗಿ ಸೀಮಿತವಾಗಬಾರದು ಅದು ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಮತ್ತು ಪೊಲೀಸರ ಭಾಷೆಯಾಗಿಯೂ ಆಗುವ ಅವಶ್ಯಕತೆ ಇದೆ ಎಂದಿದ್ದಾರೆ.

Amit Shah Calls for Hindi as Language of Judiciary Administration and Science

5ನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿರುವ ಅಮಿತ್ ಶಾ ಅವರು, ಭಾರತೀಯರು ತಮ್ಮ ಭಾಷೆಗಳನ್ನು ಸಂರಕ್ಷಿಸಬೇಕು ಹಾಗೂ ಅಮರವನ್ನಾಗಿ (ಶಾಶ್ವತ) ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಎಲ್ಲರ ಮನೆಯಲ್ಲೂ ಪೋಷಕರು ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಆಗ ಮಾತ್ರ ಭಾಷೆ ಉಳಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಮತ್ತು ಇತರ ಭಾಷೆ: ಇನ್ನು ಹಿಂದಿ ಹಾಗೂ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ. ದಯಾನಂದ ಸರಸ್ವತಿ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ವಿದ್ವಾಂಸರು ಹಿಂದಿಯನ್ನು ಒಪ್ಪಿಕೊಂಡಿದ್ದರು. ಹಿಂದಿಯನ್ನು ಪ್ರಚಾರ ಮಾಡಿದರು. ಗುಜರಾತಿ ಮತ್ತು ಹಿಂದಿ ಸಹಬಾಳ್ವೆ ನಡೆಸಿರುವ ಗುಜರಾತ್, ಎರಡೂ ಭಾಷೆಗಳ ಅಭಿವೃದ್ಧಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ.

ಮಾತೃಭಾಷೆ ಬಳಕೆ: ಇನ್ನು ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ಮಾತೃಭಾಷೆಯ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೇ ಹಿಂದಿ ಭಾಷೆಗೆ ಆದ್ಯತೆ ಕೊಟ್ಟಿದ್ದಾರೆ. ಮಗುವಿನ ಭವಿಷ್ಯಕ್ಕೆ ಮಾತೃಭಾಷೆ ಬಹಳ ಮುಖ್ಯ. ಏಕೆಂದರೆ ಅನೇಕ ಮನಶ್ಶಾಸ್ತ್ರಜ್ಞರು ಹಾಗೂ ಶಿಕ್ಷಣ ತಜ್ಞರು ಮಗು ತನ್ನ ಮಾತೃಭಾಷೆಯಲ್ಲಿ ಯೋಚಿಸುತ್ತದೆ ಎಂದು ದೃಢಪಡಿಸಿದ್ದಾರೆ. ನೀವು ಮಗುವಿನ ಮೇಲೆ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಯನ್ನು ಹೇರಿದರೆ, ಅವರ ಮನಸ್ಸಿನ ಸಾಮರ್ಥ್ಯದ ಶೇಕಡಾ 25 ರಿಂದ 30 ರಷ್ಟು ಅದನ್ನು ಭಾಷಾಂತರಿಸಲು ಬೇಕಾಗುತ್ತದೆ ಎಂದು ಅಮಿತ್ ಶಾ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+