ಎಸ್ಎಂ ಕೃಷ್ಣ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ: ಅಮಿತ್ ಶಾ
ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ ನಂತರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಭರವಸೆ
ನವದೆಹಲಿ, ಮಾರ್ಚ್ 22: ಹಿರಿಯ ರಾಜಕಾರಣಿಯಾದ ಎಸ್.ಎಂ. ಕೃಷ್ಣ ಅವರನ್ನು ಬಿಜೆಪಿಯು ಗೌರವಯುತವಾಗಿ ನಡೆಸಿಕೊಳ್ಳಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆ.
ನವದೆಹಲಿಯ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಎಸ್.ಎಂ. ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಆನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ''ದೇಶದಲ್ಲಿ ಬದಲಾವಣೆಯ ಸಮಯ ಬಂದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಎಸ್.ಎಂ. ಕೃಷ್ಣ ಅವರಂಥ ಹಿರಿಯ ರಾಜಕಾರಣಿಗಳು ಬಿಜೆಪಿಗೆ ಆಗಮಿಸಿದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಅಪಾರ ಬಲ ಬಂದಿದೆ. ಅವರನ್ನು ಬಿಜೆಪಿಯು ಗೌರವಯುತವಾಗಿ ನಡೆಸಿಕೊಳ್ಳಲಿದೆ'' ಎಂದು ತಿಳಿಸಿದರು.

ಆನಂತರ, ತಮ್ಮ ಮಾತನ್ನು ಮುಂದುವರಿಸಿ, ''ಕೃಷ್ಣ ಅವರು ಅಪಾರ ರಾಜಕೀಯ ಅನುಭವವ ಉಳ್ಳುವರು. ಹಲವಾರು ಉನ್ನತ ಹುದ್ದೆಗಳಲ್ಲಿ, ಸಚಿವ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದವರು. ಅವರಲ್ಲಿರುವ ಅಪಾರ ರಾಜಕೀಯ ಜ್ಞಾನವು ಬಿಜೆಪಿಗೆ ನೆರವಾಗಲಿದೆ'' ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.












Click it and Unblock the Notifications