ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಥೆ: ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಐಸಿಯು ಬೆಡ್ ಮೀಸಲಾತಿ!

|
Google Oneindia Kannada News

ನವದೆಹಲಿ, ಜೂನ್ 15: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಈವರೆಗೂ ಲಭ್ಯವಾಗಿಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ವಿಧಿಯಿಲ್ಲ.

Recommended Video

ಮುಂಜಾಗ್ರತೆ ಕ್ರಮವಾಗಿ ಮಕ್ಕಳಿಗೆ ಬೆಡ್ ಹಾಗೂ ವೆಂಟಿ ಲೆಟರ್ ವ್ಯವಸ್ಥೆ ಮಾಡಲಾಗಿದೆ!

ದೇಶದಲ್ಲಿ ಸಾಮಾನ್ಯವಾಗಿ ಕೊವಿಡ್-19 ರೋಗಿಗಳ ಚಿಕಿತ್ಸೆಗೆ ನಿಗದಿಪಡಿಸಿರುವ ತುರ್ತು ನಿಗಾ ಘಟಕದ ಹಾಸಿಗೆಗಳಲ್ಲಿ ಶೇ.10ರಷ್ಟು ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲು ಇರಿಸುವಂತೆ ಕೊರೊನಾವೈರಸ್ ಕೇಂದ್ರ ಕಾರ್ಯ ಪಡೆ ಸಮಿತಿಯು ಶಿಫಾರಸ್ಸು ಮಾಡಿದೆ.

 ಮಕ್ಕಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರದ ಮೊದಲ ಕ್ರಮವೇನು? ಮಕ್ಕಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರದ ಮೊದಲ ಕ್ರಮವೇನು?

18 ವರ್ಷದೊಳಗಿನ ಯುವಕರು ಹಾಗೂ ಮಕ್ಕಳಿಗೆ ಕೊವಿಡ್-19 ಲಸಿಕೆಯನ್ನು ನೀಡುವ ತುರ್ತು ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಹಲವು ನಗರಗಳ ಹಿರಿಯ ಶಿಶುವೈದ್ಯರನ್ನು ಒಳಗೊಂಡ ತಂಡಯು ಸಲಹೆ ನೀಡಿದೆ.

ಶೇ.10ರಷ್ಟು ಕೊವಿಡ್-19 ಐಸಿಯು ಹಾಸಿಗೆ

ಶೇ.10ರಷ್ಟು ಕೊವಿಡ್-19 ಐಸಿಯು ಹಾಸಿಗೆ

"ನಾವು ಹೇಳುವುದೇನೆಂದರೆ, ವಯಸ್ಕ ಕೊವಿಡ್-19 ರೋಗಿಗಳಿಗೆ ನಿಗದಿಪಡಿಸಿರುವ ತುರ್ತು ನಿಗಾ ಘಟಕದ ಹಾಸಿಗೆಗಳಲ್ಲಿ ಶೇ.10ರಷ್ಟು ಹಾಸಿಗೆಯನ್ನು ಮಕ್ಕಳಿಗಾಗಿ ಮೀಸಲು ಇರಿಸಬೇಕು. ಇದರ ಜೊತೆ ಸುಸಜ್ಜಿತ ಐಸೋಲೇಷನ್ ವ್ಯವಸ್ಥೆಯುಳ್ಳ ಕೊವಿಡ್-19 ವಾರ್ಡ್ ಗಳಲ್ಲಿ ಶೇ.20ರಷ್ಟು ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲು ಇರಿಸುವುದು. ಇಲ್ಲಿ ಕೊರೊನಾವೈರಸ್ ಸೋಂಕಿತ ಮಕ್ಕಳ ಜೊತೆಗೆ ಒಬ್ಬ ಪೋಷಕರು ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಬೇಕು," ಎಂದು ತಜ್ಞರ ತಂಡ ನೀಡಿರುವ ಶಿಫಾರಸ್ಸಿನ 19ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳಿಗೆ ಕೊರೊನಾವೈರಸ್ ನಂತರವೂ ಸಮಸ್ಯೆ

ಮಕ್ಕಳಿಗೆ ಕೊರೊನಾವೈರಸ್ ನಂತರವೂ ಸಮಸ್ಯೆ

"ಕೊರೊನಾವೈರಸ್ ಸೋಂಕು ತಗುಲಿದ ಮಕ್ಕಳು ಗುಣಮುಖರಾದ ನಂತರದಲ್ಲೂ ಹಲವು ರೀತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಥ ಮಕ್ಕಳ ಚಿಕಿತ್ಸೆಗಾಗಿ ಅಗತ್ಯವಿರುವ ಐಸಿಯು ಹಾಸಿಗೆ ಹಾಗೂ ಹೈ ಡಿಪೆಂಡೆನ್ಸಿ ಯುನಿಟ್ ಹಾಸಿಗೆಗಳನ್ನು ವ್ಯವಸ್ಥಿ ಮಾಡಬೇಕು. ಕೊವಿಡ್-19 ವಾರ್ಡ್ ಅಲ್ಲದ ಶಿಶುವೈದ್ಯಕೀಯ ವಿಭಾಗದ ವಾರ್ಡ್ ಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು," ಎಂದು ತಜ್ಞರ ತಂಡ ಸಲಹೆ ನೀಡಿದೆ.

ಯಾವ ವಯಸ್ಸಿನವರಲ್ಲಿ ಕೊರೊನಾವೈರಸ್ ಅಪಾಯ

ಯಾವ ವಯಸ್ಸಿನವರಲ್ಲಿ ಕೊರೊನಾವೈರಸ್ ಅಪಾಯ

ಭಾರತದಲ್ಲಿ ಈವರೆಗೂ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಶೇ.12ರಷ್ಟು ಮಂದಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.3-4ರಷ್ಟು ಮಕ್ಕಳಲ್ಲಿ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾವೈರಸ್ ಸೋಂಕಿನ ಎರಡು ಅಲೆಗಳಲ್ಲಿ ನವಜಾತ ಶಿಶುಗಳನ್ನು ಹೊರತುಪಡಿಸಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 2600 ಮಕ್ಕಳು ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಷ್ಟ್ರೀಯ ದತ್ತಾಂಶದಿಂದ ತಿಳಿದು ಬಂದಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ, ಎನ್ ಸಿಆರ್ ಆಸ್ಪತ್ರೆಗಳಿಂದ ಈ ದತ್ತಾಂಶವನ್ನು ಸಂಗ್ರಹಿಸಲಾಗಿದೆ.

ಕೊವಿಡ್-19 ಸೋಂಕಿತ ಮಕ್ಕಳ ಸಾವಿನ ಪ್ರಮಾಣ

ಕೊವಿಡ್-19 ಸೋಂಕಿತ ಮಕ್ಕಳ ಸಾವಿನ ಪ್ರಮಾಣ

ದೇಶದಲ್ಲಿ ಕೊವಿಡ್-19 ಸೋಂಕಿನ ಎರಡು ಅಲೆಗಳ ಸಂದರ್ಭದಲ್ಲಿ 10 ವರ್ಷದೊಳಗಿನ ಮಕ್ಕಳು ಕೂಡಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗೆ ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ 10 ವರ್ಷದೊಳಗಿನ ಮಕ್ಕಳಲ್ಲಿ ಶೇ.2.4ರಷ್ಟು ಮಕ್ಕಳು ಸಾವಿನ ಮನೆ ಸೇರಿದ್ದಾರೆ. ಶೇ.4ರಷ್ಟು ಮಕ್ಕಳು ಕೊಮೊರ್ಬಿಡಿಟಿಸ್ ತೊಂದರೆಯಿಂದ ಮೃತಪಟ್ಟಿದ್ದಾರೆ. ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರ ಪೈಕಿ ಶೇ.9ರಷ್ಟು ಮಕ್ಕಳಲ್ಲಿ ಹಲವು ರೀತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕೊರೊನಾವೈರಸ್ 3ನೇ ಅಲೆಯು ಮಕ್ಕಳಿಗೆ ಅಪಾಯವೇ?

ಕೊರೊನಾವೈರಸ್ 3ನೇ ಅಲೆಯು ಮಕ್ಕಳಿಗೆ ಅಪಾಯವೇ?

ಭಾರತದಲ್ಲಿ ಕೊರೊನಾವೈರಸ್ ಮೂರನೇ ಅಲೆಯು ಮಕ್ಕಳ ಪಾಲಿಗೆ ತೀರಾ ಅಪಾಯಕಾರಿ ಎಂಬುದನ್ನು ದೃಢಪಡಿಯುವ ಯಾವುದೇ ಪುರಾವೆಗಳಿಲ್ಲ. ಆರೋಗ್ಯ ತಜ್ಞರಿಗೆ ಲಭ್ಯವಿರುವ ಮಾಹಿತಿ ಪ್ರಕಾರ, "ಮಕ್ಕಳಲ್ಲಿ ಸೌಮ್ಯ ಪ್ರಭಾವದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಇದರ ಹೊರತಾಗಿ ವಯಸ್ಕರಲ್ಲಿ ಕೊವಿಡ್-19 ಸೋಂಕಿನ ಹರಡುವಿಕೆ, ಆರೋಗ್ಯ ಸಮಸ್ಯೆ ಹಾಗೂ ಸಾವಿನ ಪ್ರಮಾಣವನ್ನು ಹೋಲಿಸಿದ್ದಲ್ಲಿ ಮಕ್ಕಳಿಗೆ ಅಷ್ಟಾಗಿ ಅಪಾಯವಿಲ್ಲ," ಎಂದು ಹೇಳಲಾಗುತ್ತಿದೆ. "ಅದಾಗ್ಯೂ, ನವಜಾತ ಶಿಶುಗಳು ಮತ್ತು ಮಕ್ಕಳು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆಯೇ ಎಂಬ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ," ಎಂದು ತಜ್ಞರು ಸಲಹೆ ನೀಡುತ್ತಾರೆ.

ಭಾರತದಲ್ಲಿ ಕೊವಿಡ್-19 ದಾಖಲೆಯ ಇಳಿಕೆ

ಭಾರತದಲ್ಲಿ ಕೊವಿಡ್-19 ದಾಖಲೆಯ ಇಳಿಕೆ

ಭಾರತದಲ್ಲಿ 75 ದಿನಗಳ ನಂತರ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 60,471 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,17,525 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2726 ಮಂದಿ ಪ್ರಾಣ ಬಿಟ್ಟಿದ್ದಾರೆ.

ದೇಶದಲ್ಲಿ ಒಟ್ಟು 2,95,70,881 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,82,80,472 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,77,031 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 9,13,378 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ತಗ್ಗಿದ ಕೊರೊನಾವೈರಸ್ ತಪಾಸಣೆ ಪ್ರಮಾಣ

ದೇಶದಲ್ಲಿ ತಗ್ಗಿದ ಕೊರೊನಾವೈರಸ್ ತಪಾಸಣೆ ಪ್ರಮಾಣ

ಭಾರತದಲ್ಲಿ ಕೊರೊನಾವೈರಸ್ ಸೋಂಕು ಪರೀಕ್ಷೆ ಪ್ರಮಾಣದಲ್ಲೂ ಇಳಿಕೆ ಕಂಡು ಬಂದಿದೆ. ಪ್ರತಿನಿತ್ಯ 20 ಲಕ್ಷಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ 17,51,358 ಜನರ ಮಾದರಿ ತಪಾಸಣೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 38,13,75,984 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

English summary
Amid Coronavirus Third Wave Fear 10 Per cent ICU beds Reserve For Children: Expert Group Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X