ಬದಲಾದ ತೆರಿಗೆ ನಿಯಮವಾಯಿತು ಕಠಿಣ, ದುರ್ಬಳಕೆ ದಾರಿಯಿತು ಸುಗಮ!

Posted By:
Subscribe to Oneindia Kannada

ಮುಂಬೈ, ಜನವರಿ 23: ಅಪನಗದೀಕರಣದ ಬಿರುಗಾಳಿ ತಮಣಿಯಾಗಿ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಹತೋಟಿಗೆ ಸಿಗುತ್ತಿದೆ. ಲೆಕ್ಕ ಕೊಡದ ಹಣ ಇಟ್ಟುಕೊಂಡವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಲಿ ಹಾಕುತ್ತಿದ್ದಾರೆ. ಆದರೆ ನಿಜಕ್ಕೂ ಗೊಂದಲಕ್ಕೆ ಬಿದ್ದಿರುವವರು ತೆರಿಗೆ ಸಂಬಂಧಿ ಸಲಹೆ ನೀಡುವ ಕಚೇರಿಗಳನ್ನು ನಡೆಸುತ್ತಿರುವವರು ಹಾಗೂ ತೆರಿಗೆ ಸಂಬಂಧಿ ಕೇಸುಗಳಲ್ಲಿ ಬಡಿದಾಡುವವರು.

ಈ ಬಗ್ಗೆ ಎಕನಾಮಿಕ್ ಟೈಮ್ಸ್ ನಲ್ಲಿ ವರದಿ ಪ್ರಕಟವಾಗಿದೆ. ಸ್ನೇಹಿತರಿಂದ ಪಡೆದ ಹಣ, ಅಜ್ಜಿ-ಮುತ್ತಜ್ಜಿಯಿಂದ ಬಳುವಳಿಯಾಗಿ ಬಂದ ಒಡವೆ, ಕೊಡುಗೆ, ಬಂಡವಾಳವಾಗಿ ಹಣ ಪಡೆದ ಸಣ್ಣ ವ್ಯಾಪಾರಿಗಳು, ಮಗಳ ಮದುವೆಗೆ ಮಾಡಿದ ಖರ್ಚು ಈ ಎಲ್ಲವನ್ನೂ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸಬಹುದಾಗಿದೆ. ಒಂದು ವೇಳೆ ಖರ್ಚಿಗೆ ಸಂಬಂಧಿಸಿದ ಹಾಗೆ 'ಸಮಾಧಾನಕರ ಉತ್ತರ'ವನ್ನು ತೆರಿಗೆದಾರ ನೀಡದಿದ್ದಲ್ಲಿ ವಿಪರೀತ ಹೆಚ್ಚಿನ ತೆರಿಗೆ ಕೂಡ ವಿಧಿಸಬಹುದು.[ಪಾನ್ ಬೀಡಾ ಮಾರುವವನ ಖಾತೆಯಲ್ಲಿ 5 ಕೋಟಿ!]

Amended IT law harsh, prone to misuse by taxmen

ಯಾವುದೇ ಆದಾಯ ಅಥವಾ ಖರ್ಚಿನ ಬಗ್ಗೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಅನುಮಾನ ಬಂದಲ್ಲಿ ಶೇ 83ರಷ್ಟು ತೆರಿಗೆ ವಿಧಿಸಬಹುದು. ಈ ಹಿಂದೆ ಇಂಥ ಸನ್ನಿವೇಶದಲ್ಲಿ ಶೇ 35ರಷ್ಟು ತೆರಿಗೆ ಹಾಕಲಾಗುತ್ತಿತ್ತು. "ನಮ್ಮ ಲ್ಲೇ ಮಾತನಾಡಿಕೊಳ್ಳುತ್ತಿದ್ವಿ. ಆದಾಯ ತೆರಿಗೆ ಕಾಯ್ದೆಯಲ್ಲೇ ಪ್ರಬಲವಾದ ಅವಕಾಶವೊಂದಿದೆ.

"ಮತ್ತು ಇಲಾಖೆಯು ಕಪ್ಪುಹಣ ಇರುವವರಿಂದ ತೆರಿಗೆ ವಸೂಲಿಗೆ ಈ ಮಾರ್ಗ ಕಂಡುಕೊಂಡಿದೆ. ಇದರಿಂದ ಕಾಯ್ದೆಯ ದುರ್ಬಳಕೆ ಕೂಡ ಸಾಧ್ಯವಿದೆ' ಎಂದು ಮುಂಬೈನ ಅಕೌಂಟೆಂಟ್ ವೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಪನಗದೀಕರಣದ ನಂತರ ತೆರಿಗೆ ಕಾನೂನು ಬದಲಾಗಿದೆ. ನೋಟಿಸ್ ನೀಡುವುದು, ಪರಿಶೀಲನೆ ನಡೆಸುವುದು ಆಗುತ್ತಿದೆ. ಅದ್ದರಿಂದ ಕಾನೂನು ದುರುಪಯೋಗ ಆಗುವ ಭೀತಿ ಕೂಡ ಕಾಣುತ್ತಿದೆ.[1 ಲಕ್ಷದ ಕ್ರೆಡಿಟ್ ಕಾರ್ಡ್ ಬಿಲ್, ವರ್ಷದಲ್ಲಿ 10 ಲಕ್ಷ ಜಮೆ ಮೇಲೆ ಐಟಿ ಕಣ್ಣು]

ತೆರಿಗೆ ತಪ್ಪಿಸಿದವರು, ಅಮಾನ್ಯವಾದ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮೆ ಮಾಡುವುದಕ್ಕೆ 115BBE ಅಡಿಯಲ್ಲಿ ರಕ್ಷಣೆ ಪಡೆಯಬಹುದಿತ್ತು. ಮೂಲವನ್ನು ಸ್ಪಷ್ಟವಾಗಿ ತಿಳಿಸಿದರೆ ಲೆಕ್ಕ ನೀಡದಿದ್ದ ಹಣ ಕೂಡ ಕಾನೂನು ವ್ಯಾಪ್ತಿಗೆ ಬಂದು ಸಕ್ರಮವಾಗುತ್ತಿತ್ತು. ಆದರೆ ಹಲವು ಪ್ರಕರಣಗಳಲ್ಲಿ ಇದು ತುಂಬ ಸಲೀಸಲ್ಲ ಎನ್ನುತ್ತಾರೆ ತಜ್ಞರು.

ಈ ಹಿಂದೆ 115BBE ಅಡಿಯಲ್ಲಿ ಶೇ 30ರಷ್ಟು ತೆರಿಗೆ ಮತ್ತು ಸರ್ ಚಾರ್ಜ್ ವಿಧಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶೇ 60ರಷ್ಟು ತೆರಿಗೆ, ಶೇ 15ರಷ್ಟು ಸರ್ ಚಾರ್ಜ್ ಮತ್ತು ಶೇ 3ರಷ್ಟು ಸೆಸ್ ಸೇರಿ ಶೇ 77.25ರಷ್ಟು ಆಗುತ್ತದೆ. ಜತೆಗೆ ಶೇ 10ರಷ್ಟು ದಂಡ ಬಿದ್ದು, ಒಟ್ಟಾರೆ ಹಣದ ಶೇ 83.25ರಷ್ಟನ್ನು ಸರಕಾರಕ್ಕೆ ಕಟ್ಟಬೇಕಾಗುತ್ತದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the situation settle on demonetization and the taxman hunts for unexplained money, there is a lurking concern among practitioners and senior levels of the tax office as to how harshly the new law would be used.
Please Wait while comments are loading...