
108ರಲ್ಲಿ ಪೆಟ್ರೋಲ್ ಖಾಲಿ: ರೋಗಿ ಪ್ರಾಣ ಹೋದರೂ ವಾಹನ ತಳ್ಳಿದ ಕುಟುಂಬಸ್ಥರು
ಜೈಪುರ ನವೆಂಬರ್ 26: ಆಂಬ್ಯುಲೆನ್ಸ್‌ವೊಂದರ ಪೆಟ್ರೋಲ್ ಖಾಲಿಯಾಗಿ ಆಸ್ಪತ್ರೆ ತಲುಪುವುದು ತಡವಾಗಿ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ತನ್ನ ಕುಟುಂಬಸ್ಥರನ್ನು ಉಳಿಸಿಕೊಳ್ಳುವ ಆತುರದಲ್ಲಿ ಕುಟುಂಬ ರೋಗಿ ಸತ್ತರೂ ಆಸ್ಪತ್ರೆಯತ್ತ ಆಂಬ್ಯುಲೆನ್ಸ್ ವಾಹನವನ್ನು ತಳ್ಳುತ್ತಲೇ ಇರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ.
ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ದಾನಪುರ್ ಪ್ರದೇಶದಲ್ಲಿ, ಆಂಬ್ಯುಲೆನ್ಸ್‌ನಲ್ಲಿ ಪೆಟ್ರೋಲ್ ಖಾಲಿಯಾಗಿ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ರೋಗಿಯ ಸೊಸೆ ಆಂಬ್ಯುಲೆನ್ಸ್ ಅನ್ನು ಒಂದು ಕಿಲೋಮೀಟರ್ ದೂರ ತಳ್ಳಿದ್ದಾರೆ. ಆದರೆ ರೋಗಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಇದರಿಂದ ಆರೋಗ್ಯ ಇಲಾಖೆ ಸಂಪೂರ್ಣ ತನಿಖೆ ಆರಂಭಿಸಿದೆ.
ಮಾಹಿತಿಯ ಪ್ರಕಾರ, ಬನ್ಸ್ವಾರದ ದಾನಪುರ ನಿವಾಸಿ 40 ವರ್ಷದ ತೇಜಿಯಾ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಸಂಬಂಧಿಕರು ರಾಜಸ್ಥಾನ ಸರ್ಕಾರದ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಬಂದ ಅಂಬುಲೆನ್ಸ್‌ನಲ್ಲಿ ತೇಜಿಯಾರನ್ನು 108 ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಯಲ್ಲಿ ಬನ್ಸ್ವಾರಾದಿಂದ ಸುಮಾರು 10 ಕಿಮೀ ದೂರದಲ್ಲಿರುವ ರತ್ಲಂ ರಸ್ತೆಯ ಟೋಲ್ ಬಳಿ ಆಂಬ್ಯುಲೆನ್ಸ್ ನಿಂತಿದ್ದರ ಸಮಯದಲ್ಲಿ ರೋಗಿ ಸಾವನ್ನಪ್ಪಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿದ್ದ ಪೆಟ್ರೋಲ್ ಖಾಲಿಯಾಗಿದೆ ಎಂದು ಕುಟುಂಬಸ್ಥರಿಗೆ ತಿಳಿದುಬಂದಿದೆ. ವಾಹನ ಇಳಿದ ಅವರು ಸರಿಸುಮಾರು ಒಂದು ಕಿ.ಮೀ ವಾಹನವನ್ನು ತಳ್ಳಿದ್ದಾರೆ. ಅವರ ಕಷ್ಟವನ್ನು ನೋಡಲಾಗದೇ ನೆರೆಹೊರೆಯವರೂ ಅವರ ಸಹಾಯಕ್ಕೆ ಬಂದಿದ್ದಾರೆ. ಅಷ್ಟೆಲ್ಲಾ ಕಷ್ಟಪಟ್ಟರೂ ಕೊನೆಗೆ ರೋಗಿ ಉಳಿಯಲೇ ಇಲ್ಲ. ಇದರಿಂದ ಕುಟುಂಬಕ್ಕೆ ಸಿಡಿಲುಬಡಿದಂತಾಗಿದೆ.
Rajasthan | A patient, in Banswara, died in an ambulance allegedly due to a delay caused because of lack of fuel in it due to which the vehicle stopped in between. Relatives of patients were also seen pushing the ambulance on the way. (25.11) pic.twitter.com/7vuD3hrC0H
— ANI MP/CG/Rajasthan (@ANI_MP_CG_RJ) November 26, 2022

ಆಂಬ್ಯುಲೆನ್ಸ್ ರಸ್ತೆಯಲ್ಲಿ ನಿಂತಾಗ ರೋಗಿಯ ಮಗಳು, ಅಳಿಯ ಮತ್ತು ಇತರ ಜನರು ಆಂಬುಲೆನ್ಸ್ ಅನ್ನು ಒಂದು ಕಿಲೋಮೀಟರ್ ವರೆಗೂ ತಳ್ಳಿದರು. ಆದರೆ ತಳ್ಳುವುದರಲ್ಲೇ ಸಮಯ ಹೋಗಿ ತೇಜಿಯಾ ಆರೋಗ್ಯ ಹದಗೆಟ್ಟಿದ್ದರಿಂದ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ನಮಗೆ ತಿಳಿದುಬಂದಿದ್ದು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಬನ್ಸ್ವಾರಾ ಸಿಎಂಎಚ್ಒ ಹೇಳುತ್ತಾರೆ. ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ನಿರ್ಲಕ್ಷ್ಯದ ಬಗ್ಗೆ ತಿಳಿದುಕೊಳ್ಳಲಾಗುವುದು. 108 ಆಂಬ್ಯುಲೆನ್ಸ್‌ಗಳನ್ನು ಖಾಸಗಿ ಏಜೆನ್ಸಿಯವರು ನಿರ್ವಹಿಸುತ್ತಿದ್ದಾರೆ. ಆಂಬ್ಯುಲೆನ್ಸ್ ನಿರ್ವಹಣೆಯ ಜವಾಬ್ದಾರಿ ಅವರ ಮೇಲಿದೆ ಎಂದರು.