ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2021: ಡೈಮಂಡ್ಸ್‌ ಬಳಸಿ ಅಧಿಕ ರಿಯಾಯಿತ ಪಡೆಯಿರಿ

Google Oneindia Kannada News

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್‌ 2021 ರಲ್ಲಿ ಈ ಹಬ್ಬದ ಸೀಸನ್‌ನಲ್ಲಿ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್‌ ಈ ತಿಂಗಳ ಕೊನೆಯವರೆಗೂ ಇರಲಿದೆ. ಪ್ರಮುಖ ವಿಭಾಗದ ಉತ್ಪನ್ನಗಳಿಗೆ ಈ ಹಬ್ಬದ ಸಂಭ್ರಮದ ಹಿನ್ನೆಲೆ ಅಮೆಜಾನ್‌ನಲ್ಲಿ ರಿಯಾಯಿತಿ ನೀಡಲಾಗಿದೆ.

ಇನ್ನು ಅಮೆಜಾನ್‌ ಜನರಿಗೆ ಈ ಹಬ್ಬದ ಕೊಡುಗೆಯನ್ನು ನೀಡುವ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಕೂಡಾ ಅಮೆಜಾನ್‌ ಜೊತೆಯಾಗಿದೆ. ಹಾಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರು ಅಮೆಜಾನ್‌ನಲ್ಲಿ ಖರೀದಿ ಮಾಡುವ ಉತ್ಪನ್ನಗಳ ಮೇಲೆ ಶೇಕಡ 10 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ಇಲ್ಲಿ ಯಾವುದೇ ವೆಚ್ಚ ವಿಧಿಸದೆಯೇ ಇಎಂಐ ಆಯ್ಕೆ, ವಿನಿಮಯ ಕೊಡುಗೆಗಳು ಹಾಗೂ ಇತರೆ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ.

ಗ್ರಾಹಕರು ಖರೀದಿ ಮಾಡುವ ಸಂದರ್ಭದಲ್ಲಿ ಮತ್ತಷ್ಟು ಉಳಿಕೆ ಮಾಡಲು ಅಮೆಜಾನ್‌ ಹೊಸ ವಿಧಾನವನ್ನು ಗ್ರಾಹಕರಿಗೆ ಪರಿಚಯಿಸಿದೆ. ಅಮೆಜಾನ್‌ ನೀವು ಮಾಡುವ ಎಲ್ಲಾ ಖರೀದಿಗಳಿಗೆ ನಿಮಗೆ ಡೈಮಂಡ್‌ ಅನ್ನು ನೀಡುವುದನ್ನು ನೀವು ಗಮನಿಸಿದ್ದೀರಿ. ಈ ಡೈಮೆಂಡ್‌ಗಳು ನಿಮಗೆ ಅಮೆಜಾನ್‌ನಲ್ಲಿ ದೊರೆಯುವ ಅಂಕಿಗಳು ಆಗಿದ್ದು, ಅದನ್ನು ನೀವು ಬಳಸಿ ಆನ್‌ಲೈನ್‌ ಶಾಪಿಂಗ್‌ ಮಾತ್ರವಲ್ಲದೇ ಗೇಮ್ಸ್‌ ಆಡಬಹುದು, ಮಿನಿಟಿವಿ ನೋಡಬಹುದು ಹಾಗೂ ಬೇರೆ ಹಲವಾರು ಸೌಲಭ್ಯಗಳಿಗೆ ಬಳಸಿಕೊಳ್ಳಬಹುದು.

Amazon Great Indian Festival 2021: Use diamonds to get additional discount

ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೀಸನ್‌ ಸಂದರ್ಭದಲ್ಲಿ ಡೈಮೆಂಡ್‌ ಪಾಯಿಂಟ್‌ ಅನ್ನು ನಿಮ್ಮ ಎಲ್ಲಾ ಖರೀದಿಯ ಸಂದರ್ಭದಲ್ಲಿ ಪಡೆದುಕೊಳ್ಳಬಹುದು. ಹಾಗಾದರೆ ಈ ಡೈಮೆಂಡ್‌ ಅನ್ನು ಬಳಸಿಕೊಳ್ಳುವುದು ಹೇಗೆ?, ತಿಳಿಯಲು ಮುಂದೆ ಓದಿ.

ರಿಯಾಯಿತಿ ಪಡೆಯಲು ಡೈಮೆಂಡ್‌ ಬಳಸಿಕೊಳ್ಳುವುದು ಹೇಗೆ?

* ನಿಮ್ಮ ಅಮೆಜಾನ್‌ ಆಪ್‌ನ ಹೋಮ್‌ ಪೇಜ್‌ನಲ್ಲಿ ಇರುವ ಡೈಮೆಂಡ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಿ
* ಈ ಡೈಮೆಂಡ್‌ಗಳನ್ನು ಬಳಸಿಕೊಂಡು ನೀವು ಪಡೆಯಬಹುದಾದ ಪಟ್ಟಿಯು ನಿಮಗೆ ದೊರೆಯಲಿದೆ
* ಈ ಡೈಮೆಂಡ್‌ಗಳನ್ನು ನೀಡಿ ನೀವು ಪಡೆಯಬಹುದಾದ ಆಫರ್‌ಗಳಲ್ಲಿ ನಿಮಗೆ ಇಷ್ಟವಾದ ಅಥವಾ ಬೇಕಾದ ಆಯ್ಕೆಯನ್ನು ಕ್ಲಿಕ್‌ ಮಾಡಿ ಕೂಪನ್‌ ಪಡೆಯಿರಿ
* ಕನಿಷ್ಠ ಖರೀದಿಯನ್ನು ನೀವು ದಾಟಿದರೆ ಈ ಕೂಪನ್‌ ನಿಮ್ಮ ಖರೀದಿಗೆ ಅಟೋ ಅಪ್ಲೈ ಆಗಲಿದೆ

ಅಮೆಜಾನ್‌ನಲ್ಲಿ ನೀವು ಈವರೆಗೆ ಸಂಗ್ರಹ ಮಾಡಿರುವ ಡೈಮೆಂಡ್‌ ಅನ್ನು ನೀಡಿ ಕ್ಯಾಷ್‌ಬ್ಯಾಕ್‌ ಆಫರ್‌ ಅನ್ನು ಪಡೆಯಬಹುದಾಗಿದೆ. ಉದಾಹರಣೆಗೆ ನೀವು 1,500 ಡೈಮೆಂಡ್‌ ಬಳಸಿ ಕ್ಯಾಷ್‌ಬ್ಯಾಕ್‌ ಆಫರ್‌ ಪಡೆದರೆ, ಕನಿಷ್ಠ 3 ಸಾವಿರ ರೂಪಾಯಿಗಳ ಖರೀದಿಗೆ ಮುನ್ನೂರು ರೂಪಾಯಿ ಕ್ಯಾಷ್‌ಬ್ಯಾಕ್‌ ಪಡೆಯಲಿದ್ದೀರಿ. ಡೈಮೆಂಡ್‌ ಹೆಚ್ಚಾದಂತೆ ನಿಮ್ಮ ಕ್ಯಾಷ್‌ಬ್ಯಾಕ್‌ ಆಫರ್‌ ಕೂಡಾ ಈ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2021 ರ ಸಂದರ್ಭದಲ್ಲಿ ಅಧಿಕವಾಗಲಿದೆ.

ಭಾರತದಲ್ಲಿ ಮಧ್ಯಮ ಮತ್ತು ಸಣ್ಣ ಉದ್ಯಮಗಳನ್ನು ಸಕ್ರಿಯಗೊಳಿಸಲು ಅಮೆಜಾನ್ 1 ಬಿಲಿಯನ್ ಡಾಲರ್ ಮೀಸಲಿಟ್ಟಿದೆ ಮತ್ತು 2025 ರ ವೇಳೆಗೆ 10 ದಶಲಕ್ಷ ಸಣ್ಣ ಉದ್ಯಮಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಸೇರುವ ನಿರೀಕ್ಷೆಯಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಸಣ್ಣ ಉದ್ಯಮಗಳು ಸಾಮಾನ್ಯ ಸ್ಥಿತಿಗೆ ಮರಳಲು ಅಮೆಜಾನ್ ಸಹ ಸಹಾಯ ಮಾಡಿದೆ. ಕೊರೊನಾವೈರಸ್ ಸಾಂಕ್ರಾಮಿಕ ಕಾರಣ ಕಳೆದ ಕೆಲವು ತಿಂಗಳುಗಳ ನಂತರ ಅಮೆಜಾನ್ ಉಪಕ್ರಮಗಳಲ್ಲಿ ಒಂದು ಸ್ಥಳೀಯ ಅಂಗಡಿಗಳನ್ನು ಒಳಗೊಂಡಿದೆ ಇದು ಭೌತಿಕ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ಆನ್‌ಲೈನ್ ಮಳಿಗೆಗಳನ್ನಾಗಿ ತರುತ್ತದೆ. ಗ್ರಾಹಕರಿಗೆ ಆಫ್‌ಲೈನ್ ಅಂಗಡಿಯಲ್ಲಿನ ಉತ್ಪನ್ನಗಳನ್ನು ಸಾಧ್ಯವಾದಷ್ಟು ಹತ್ತಿರ ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ದಕ್ಷಿಣ ಭಾರತದ ಬಳಕೆದಾರರಿಗಾಗಿ ಅಮೆಜಾನ್ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಶಾಪಿಂಗ್ ಮಾಡಲು ಬೆಂಬಲವನ್ನು ನೀಡಲಿದೆ.

ಕಂಪನಿಯು ದೇಶಾದ್ಯಂತ 200 ವಿತರಣಾ ಸ್ಟೇಷನ್‌ ಸ್ಥಾಪಿಸಿದೆ. ಕಂಪನಿ 350 ನಗರಗಳ 28,000ಕ್ಕೂ ಅಧಿಕ ಹತ್ತಿರದ ಸ್ಟೋರ್‌ಗಳು ಮತ್ತು ಕಿರಾಣಗಳನ್ನು ವಿತರಣಾ ಪಾಲುದಾರರನ್ನಾಗಿ ಸೇರ್ಪಡೆ ಮಾಡಿಕೊಂಡಿದೆ. ಅಮೆಜಾನ್‌ ಇಂಡಿಯಾ ಸ್ಟೋರ್‌ನಿಂದ 2ರಿಂದ 4 ಕಿಲೋಮೀಟರ್‌ ವ್ಯಾಪ್ತಿಯಲ್ಲಿನ ಗ್ರಾಹಕರಿಗೆ ಉತ್ಪನ್ನಗಳನ್ನು ವಿತರಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸ್ಟೋರ್‌ ಮಾಲೀಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಈ ಬಾರಿ ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಗ್ರೇಟ್ ಇಂಡಿಯಾ ಫೆಸ್ಟಿವಲ್ ಶಾಪಿಂಗ್ ಮಾಡುವ ಗ್ರಾಹಕರಿಗೆ ಶೇ. 10ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ. ಜತೆಗೆ ಇತರ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ನೋ ಕಾಸ್ಟ್ ಇಎಂಐ ಆಫರ್ ಇರಲಿದೆ. ಉಳಿದಂತೆ, ಎಕ್ಸ್‌ಚೇಂಜ್, ಹೆಚ್ಚುವರಿ ಕ್ಯಾಶ್‌ಬ್ಯಾಕ್ ಮತ್ತು ಡಿಸ್ಕೌಂಟ್ ಅನ್ನು ಅಮೆಜಾನ್ ಗ್ರಾಹಕರಿಗೆ ನೀಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X