ಅಮರನಾಥ ಯಾತ್ರೆ, ಜಗನ್ನಾಥ ರಥಯಾತ್ರೆ ಅಪ್ದೇಟ್

ಶ್ರೀನಗರ, ಜೂ.29: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಒಂದು ಭಾಗದಲ್ಲಿ ಅಮರನಾಥ ಯಾತ್ರೆ ಆರಂಭಗೊಂಡಿದೆ. ಜತೆಗೆ ದೇಶದ ಇತರೆಡೆ ಭಾನುವಾರ ಜಗನ್ನಾಥ ರಥಯಾತ್ರೆ ಮಹೋತ್ಸವ ಸಾಂಗವಾಗಿ ಸಾಗಿದೆ. ಅಮರನಾಥ್ ವಾರ್ಷಿಕ ಯಾತ್ರೆಯ ಮೊದಲ ದಿನವೇ ಮೂವರು ಬಲಿಯಾಗಿರುವುದು ಮಾತ್ರ ದುರಂತ ಸಂಗತಿ.

ದಕ್ಷಿಣ ಕಾಶ್ಮೀರದಿಂದ ಆರಂಭಗೊಂಡ ಅಮರನಾಥ್ ಯಾತ್ರೆಗೆ ತೆರಳುತ್ತಿದ್ದ ಯಾತ್ರಿಗಳ ಪೈಕಿ ಇಬ್ಬರ ಮೇಲೆ ಭಾರಿ ಗಾತ್ರ ಹಿಮಗಡ್ಡೆಗಳು ಬಿದ್ದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತರನ್ನು ವಾರಣಾಸಿಯ ಸುರೇಶ್ ಯಾದವ್(35) ಹಾಗೂ ಪಂಜಾಬಿನ ಭಟಿಂಡಾದ ತಾರಾ ಸಿಂಗ್ (28) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಯಾತ್ರಾರ್ಥಿ ಸುನಿಲ್(31) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಪುರಿ, ಒಡಿಶಾ, ಅಹಮದಾಬಾದಿನಲ್ಲಿ ಐತಿಹಾಸಿಕ 137ನೇ ಜಗನ್ನಾಥ ಯಾತ್ರೆ ಆರಂಭಗೊಂಡಿದೆ. ಲಕ್ಷಾಂತರ ಮಂದಿ ರಥ ಎಳೆದು ಧನ್ಯತೆ ಅನುಭವಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಟ್ವೀಟ್ ಮಾಡಿ ಭಕ್ತರಿಗೆ ಶುಭ ಹಾರೈಸಿದ್ದಾರೆ. ಅಮರನಾಥ್ ಯಾತ್ರೆ, ಜಗನ್ನಾಥ್ ಯಾತ್ರೆ ಚಿತ್ರಗಳು ಹಾಗೂ ಇನ್ನಷ್ಟು ಮಾಹಿತಿ ಮುಂದೆ ಓದಿ...

ಅಹಮದಾಬಾದಿನ ಯಾತ್ರೆ ನೆನಸಿಕೊಂಡ ಮೋದಿ

ಅಹಮದಾಬಾದಿನ ಯಾತ್ರೆ ನೆನಸಿಕೊಂಡ ಮೋದಿ

ಅಹಮದಾಬಾದಿನ ಯಾತ್ರೆ ನೆನಸಿಕೊಂಡ ಪ್ರಧಾನಿ ಮೋದಿ, ನಾನು ಗುಜರಾತ್ ಸಿಎಂ ಆಗಿದ್ದ ಕಾಲದಲ್ಲಿ ರಥಯಾತ್ರೆ ಸಂದರ್ಭದಲ್ಲಿ ಪಾಹಿದ್ ವಿಧಿ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಳ್ಳುತ್ತಿದೆ. ಜಗನ್ನಾಥ ಎಲ್ಲರಿಗೂ ಒಳ್ಳೆದು ಮಾಡಲಿ, ಒಳ್ಳೆ ಮಳೆ ನೀಡುವ ಮೂಲಕ ರೈತರು ಹಾಗೂ ನಮಗೆ ಶುಭ ತರಲಿ ಎಂದು ಹಾರೈಸಿದ್ದಾರೆ.

ಅಮರನಾಥ್ ಯಾತ್ರೆಯಲ್ಲಿ ಭಕ್ತರು

ಅಮರನಾಥ್ ಯಾತ್ರೆಯಲ್ಲಿ ಭಕ್ತರು

ಸುಮಾರು 44 ದಿನಗಳ ಅಮರನಾಥ್ ಯಾತ್ರೆ ಬಾಲ್ಟಾಲ್ ಹಾದಿಯಿಂದ ಶನಿವಾರ ಆರಂಭಗೊಂಡಿದ್ದು, ಮೊದಲ ಕಂತಿನಲ್ಲಿ 10,000 ಮಂದಿ ಭಕ್ತಾದಿಗಳು ಗುಹಾಂತರ ದೇಗುಲದಲ್ಲಿ ಹಿಮ ರೂಪಿ ಪರಮಶಿವನನ್ನು ಕಾಣಲು ತೆರಳುತ್ತಿದ್ದಾರೆ.

ಜಗನ್ನಾಥನ ಜತೆ ಸೋದರಿ, ಸೋದರ

ಜಗನ್ನಾಥನ ಜತೆ ಸೋದರಿ, ಸೋದರ

ಜಗನ್ನಾಥ ದೇವನ ಜತೆ ಹಿರಿಯಣ್ಣ ಬಲದೇವ ಹಾಗೂ ತಂಗಿ ದೇವಿ ಸುಭದ್ರಾ ವಿಗ್ರಹಗಳು ರಥಯಾತ್ರೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. 18 ಆನೆಗಳು, 100 ಟ್ರಕ್ ಗಲು 30 ಕ್ಕೂಅಧಿಕ ಧಾರ್ಮಿಕ ಸಂಘಟನೆಗಳ ತಂಡ, 18 ಸಂಗೀತ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.

ಅಮರನಾಥ್ ಯಾತ್ರೆಯಲ್ಲಿ ಭಕ್ತರು

ಅಮರನಾಥ್ ಯಾತ್ರೆಯಲ್ಲಿ ಭಕ್ತರು

ಸಾಮಾನ್ಯವಾಗಿ ಪಹಲ್ ಗಾಮ್ ಭಾಗದಿಂದ ಸಾಗುತ್ತಿದ್ದ ಯಾತ್ರಾರ್ಥಿಗಳು ಈ ಬಾರಿಯಿಂದ ಬಾಲ್ಟಲ್ ಮಾರ್ಗದಿಂದ ತೆರಳುತ್ತಿದ್ದಾರೆ. ಪ್ರಾಕೃತಿಕ ವೈಪರೀತ್ಯಗಳ ನಡುವೆಯೂ ಅಮರನಾಥ್ ಯಾತ್ರೆ ಆಗಸ್ಟ್ 10ಕ್ಕೆ ಸಂಪನ್ನಗೊಳಿಸಲಾಗುವುದು ಎಂದು ಅಮರನಾಥ್ ದೇಗುಲದ ಸಮಿತಿ ಹೇಳಿದೆ.

ಜಗನ್ನಾಥನ ಜತೆ ಸೋದರಿ, ಸೋದರ

ಜಗನ್ನಾಥನ ಜತೆ ಸೋದರಿ, ಸೋದರ

ಜಗನ್ನಾಥ ದೇವನ ಜತೆ ಹಿರಿಯಣ್ಣ ಬಲದೇವ ಹಾಗೂ ತಂಗಿ ದೇವಿ ಸುಭದ್ರಾ ವಿಗ್ರಹಗಳು ರಥಯಾತ್ರೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. 18 ಆನೆಗಳು, 100 ಟ್ರಕ್ ಗಲು 30 ಕ್ಕೂಅಧಿಕ ಧಾರ್ಮಿಕ ಸಂಘಟನೆಗಳ ತಂಡ, 18 ಸಂಗೀತ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+