ಲಾಲೂ ಪ್ರಸಾದ್ ಯಾದವ್ ವಿರುದ್ಧ ಸಂಚು ರೂಪಿಸಿ ಬಂಧಿಸಿತಾ ಸಿಬಿಐ?

Recommended Video

      ಲಾಲೂ ಪ್ರಸಾದ್ ಯಾದವ್ ವಿರುದ್ಧ ಸಂಚು ರೂಪಿಸಿ ಬಂಧಿಸಿತಾ ಸಿಬಿಐ? | Oneindia Kannada

      ನವದೆಹಲಿ, ನವೆಂಬರ್ 20: ಸಿಬಿಐನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದ ಹಲವು ಮಹತ್ವದ ವಿಷಯಗಳು ಹೊರಬರುತ್ತಿವೆ.

      ಇತ್ತೀಚೆಗಷ್ಟೆ ಸಿಬಿಐ ಉಚ್ಛಾಟಿತ ನಿರ್ದೇಶಕ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ಥಾನಾ ವಿರುದ್ಧ (ಸಿವಿಸಿ) ಕೇಂದ್ರ ಜಾಗೃತ ದಳ ತಮ್ಮ ವಿರುದ್ಧ ಸುಪ್ರಿಂಕೋರ್ಟ್‌ಗೆ ತನಿಖೆಯ ವರದಿಯಲ್ಲಿ ಸಲ್ಲಿಸಿದೆ. ಇದಕ್ಕೆ ಉತ್ತರವಾಗಿ ಅಲೋಕ್ ವರ್ಮಾ ಸಹ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

      ಕೇಂದ್ರ ಜಾಗೃತದಳಕ್ಕೆ ಅಲೋಕ್ ವರ್ಮಾ ನೀಡಿರುವ ಮಾಹಿತಿಯನ್ನು ನಂಬುವುದಾದರೆ ಲಾಲು ಪ್ರಸಾದ್ ಯಾದವ್ ಅವರನ್ನು ಐಆರ್‌ಸಿಟಿಸಿ ಪ್ರಕರಣದಲ್ಲಿ ಲಾಲೂ ಅವರನ್ನು ಬೇಕೆಂದೇ ಸಿಕ್ಕಿಸಲಾಗಿದೆ.

      Alok Verma statement front of CVC regarding Lalu Prasad Yadav

      ಅಲೋಕ್ ವರ್ಮಾ ಸಿವಿಸಿಗೆ ನೀಡಿರುವ ಮಾಹಿತಿ ಪ್ರಕಾರ, ಬಿಜೆಪಿಯ ಮುಖಂಡ ಸುಶೀಲ್ ಮೋದಿ, ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಸಿಬಿಐ ಹೆಚ್ಚುವರಿ ನಿರ್ದೇಶಕ ರಾಕೇಶ್ ಅಸ್ಥಾನಾ ಅವರುಗಳು ಸೇರಿ ಲಾಲೂ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿದರು.

      ವರ್ಮಾ ಅವರು ಸಿವಿಸಿಗೆ ನೀಡಿರುವ ಹೇಳಿಕೆಗಳ ಬಗ್ಗೆ ಆಂಗ್ಲ ಸುದ್ದಿ ವೆಬ್‌ತಾಣವೊಂದು ಪ್ರಕಟಿಸಿದ್ದು, ಸುದ್ದಿ ಮೂಲದ ಪ್ರಕಾರ ಲಾಲೂ ಅವರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಷ್ಟೆ ಅಲ್ಲದೆ ವರ್ಮಾ ಅವರು, ಮೋದಿ ಸರ್ಕಾರ ಸಿಬಿಐಗೆ ಅಗೌರವ ತೋರಿದೆ, ಹಾಗೂ ಸಂಸ್ಥೆಯನ್ನು ಬಳಸಿಕೊಂಡಿದೆ ಎಂದು ಸಹ ಆರೋಪ ಮಾಡಿರುವುದಾಗಿ ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+