ಉತ್ತರಪ್ರದೇಶ: ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ 10 ರೂ.ಗೆ ಯೋಗಿ 'ಥಾಲಿ'

ಅಲಹಾಬಾದ್, ಸೆಪ್ಟೆಂಬರ್ 3: ಕರ್ನಾಟಕದಲ್ಲಿ 'ಇಂದಿರಾ ಕ್ಯಾಂಟೀನ್', 'ಅಪ್ಪಾಜಿ ಕ್ಯಾಂಟೀನ್', ತಮಿಳುನಾಡಿನಲ್ಲಿ 'ಅಮ್ಮಾ ಕ್ಯಾಂಟೀನ್' ಹೀಗೆ ವಿವಿಧ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಕಡಿಮೆ ದರದಲ್ಲಿ ಆಹಾರ ಪೂರೈಸುತ್ತಿವೆ.

ಈಗ ಉತ್ತರ ಪ್ರದೇಶದಲ್ಲಿಯೂ ಬಡವರಿಗೆ ಕಡಿಮೆ ಬೆಲೆಯಲ್ಲಿ ಶುದ್ಧ ಸಸ್ಯಹಾರಿ ಊಟ ಒದಗಿಸುವ ಯೋಜನೆ ಆರಂಭವಾಗಿದೆ.

ಅಲಹಾಬಾದ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಸರಿನಲ್ಲಿ 'ಯೋಗಿ ಥಾಲಿ' ಎಂಬ ಹತ್ತು ರೂ. ದರದ ಊಟ ಒದಗಿಸುವ ಯೋಜನೆ ಆರಂಭವಾಗಿದೆ.

allahabad: yogi thali at Rs. 10 for poor people

ಅಲಹಾಬಾದ್ ಮೇಯರ್ ಅಭಿಲಾಷ್ ಗುಪ್ತಾ ಈ ಯೋಜನೆಗೆ ಭಾನುವಾರ ಚಾಲನೆ ನೀಡಿದರು. ಆದರೆ, ಇದು ಸರ್ಕಾರದ ಯೋಜನೆಯಲ್ಲ. ಯೋಗಿ ಆದಿತ್ಯನಾಥ ಅವರ ಅಭಿಮಾನಿಯೊಬ್ಬರು ತಮ್ಮ ಜತೆಗಾರರ ನೆರವಿನೊಂದಿಗೆ ಯೋಗಿ ಥಾಲಿ ಆರಂಭಿಸಿದ್ದಾರೆ.

ಯೋಗಿ ಥಾಲಿ ಅಲಲಹಾಬಾದ್‌ನ ಅಟ್ಟರಸೂಯಿಯಾದಲ್ಲಿನ 'ಬಾಬಾ ದಾ ಡಾಬಾ'ದಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ಅನ್ನ, ಸಾಂಬಾರ್, ಕಾಳುಗಳು, ಎರಡು ತಂದೂರಿ ರೋಟಿ ಅಥವಾ ನಾಲ್ಕು ಕಚೌಡಿ, ಉಪ್ಪಿನಕಾಯಿ, ಹಪ್ಪಳ ಮತ್ತು ಹಸಿ ತರಕಾರಿಗಳನ್ನು ಒಳಗೊಂಡಿದೆ. ಈ ಊಟಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕೂಡ ಬಳಸುವುದಿಲ್ಲ. ಈ ಊಟಕ್ಕೆ 30-40 ರೂ. ವೆಚ್ಚವಾಗುತ್ತದೆ. ಗ್ರಾಹಕರಿಗೆ 50 ರೂ.ಗೆ ಪೂರೈಸುವ ಊಟ ಇದು.

'ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿ ಮಲಗುವಂತಾಗಬಾರದು ಎನ್ನುವುದು ನಮ್ಮ ಉದ್ದೇಶ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳನ್ನು ಜನರು ಶ್ಲಾಘಿಸುತ್ತಿದ್ದಾರೆ. ಹೀಗಾಗಿ ಅವರ ಹೆಸರನ್ನೇ ಇರಿಸಿದ್ದೇವೆ' ಎಂದು ಅಖಿಲ ಭಾರತೀಯ ಖಾತ್ರಿ ಮಹಾಸಭಾದ ಜಿಲ್ಲಾಧ್ಯಕ್ಷರಾಗಿರುವ ಹೋಟೆಲ್ ಮಾಲೀಕ ದಿಲೀಪ್ ಕಾಕೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+