ಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ

ನವದೆಹಲಿ, ಜೂನ್ 24: ಭಾರತೀಯ ರೈಲ್ವೆಯ ಆನ್ ಲೈನ್ ಟಿಕೆಟಿಂಗ್ ವ್ಯವಸ್ಥೆ ಐಆರ್ ಸಿಟಿಸಿ ವೆಬ್ ಸೈಟಿಗೆ ಇನ್ನಷ್ಟು ಸೌಲಭ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಏನೆಲ್ಲ ಸೌಲಭ್ಯಗಳು ಸಿಗಲಿವೆ ಎಂಬ ವಿವರ ಮುಂದಿದೆ.

ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ, ಹೋಟೆಲ್ ಬುಕ್ಕಿಂಗ್, ಮುಂಗಡ ಟಿಕೆಟ್ ರದ್ದುಗೊಳಿಸುವಿಕೆ, ಹಿರಿಯ ನಾಗರಿಕರು, ಅಂಗವಿಕಲರು ಹೀಗೆ ವಿವಿಧ ಕೋಟಾಗಳ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದೆ. ಇದಲ್ಲದೆ, 120 ದಿನಗಳು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.

All you need to know about IRCTC premium quota ticket booking

ಪ್ರೀಮಿಯಂ ತತ್ಕಾಲ್ ಕೋಟಾವನ್ನು ರೈಲ್ವೆ ಇಲಾಖೆ ಇತ್ತೀಚೆಗೆ ಪರಿಚಯಿಸಿದ್ದು, ಇದರಲ್ಲಿ ಏಜೆಂಟ್ ಗಳ ನೆರವಿಲ್ಲದೆ ನೇರವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ಇನ್ನು ಮುಖ್ಯವಾಗಿ ಪ್ರಿಮಿಯಂ ಟಿಕೆಟ್ ಬುಕ್ ಮಾಡುವ ಸೇವೆ ಕೂಡ ಐ.ಆರ್.ಸಿ.ಟಿ.ಸಿ. ಇ- ಟಿಕೆಟಿಂಗ್ ವಿಭಾಗದಲ್ಲಿ ದೊರೆಯಲಿದೆ. ಪ್ರೀಮಿಯಂ ತತ್ಕಾಲ್ ಕೋಟಾವನ್ನು ರೈಲ್ವೆ ಇಲಾಖೆ ಇತ್ತೀಚೆಗೆ ಪರಿಚಯಿಸಿದ್ದು, ಇದರಲ್ಲಿ ಏಜೆಂಟ್ ಗಳ ನೆರವಿಲ್ಲದೆ ನೇರವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ತತ್ಕಾಲ್ ಪ್ರೀಮಿಯಂ: dynamic fare pricing ಅಡಿಯಲ್ಲಿ ಉತ್ತಮ ದರದಲ್ಲಿ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಇದರಲ್ಲಿ ಲಭ್ಯ. ಬೆಳಗ್ಗೆ 10 ಗಂಟೆ ಅಥವಾ ನಂತರದಲ್ಲಿ ಮಾತ್ರ ಈ ವ್ಯವಸ್ಥೆ ಬಳಸಲು ಸಾಧ್ಯ. ಸಾಮಾನ್ಯ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಲ್ಲಿ ಇರುವ ಅವಧಿಯಂತೆ ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೂ Advance ರಿಸರ್ವೇಷನ್ ಅವಧಿ ಒಂದೆ ಆಗಿದೆ.

ಹೀಗಾಗಿ, ನೀವು ಪ್ರಯಾಣಿಸುವ ಒಂದು ದಿನ ಮುಂಚಿತವಾಗಿ ವಿಂಡೋಸ್ ತೆರೆಯಲಿದ್ದು, ಟಿಕೆಟ್ ಬುಕ್ ಮಾಡಬಹುದು. ಐಆರ್ ಸಿಟಿಸಿ ನಿಯಮದ ಪ್ರಕಾರ ಪ್ರೀಮಿಯಂ ತತ್ಕಾಲ್ ಕೋಟಾದಡಿ ಇ ಟಿಕೆಟ್ ಮಾತ್ರ ಬುಕ್ ಮಾಡಬಹುದು. ಹೀಗಾಗಿ ಐ ಟಿಕೆಟ್ ಸೌಲಭ್ಯ ಸಿಗುವುದಿಲ್ಲ.

ಮಕ್ಕಳಿಗೂ ವಯಸ್ಕರಿಗೂ ಒಂದೇ ಪ್ರಯಾಣದ ದರ ನಿಗದಿಯಾಗಿದೆ. ಬುಕ್ಕಿಂಗ್ ಸಂದರ್ಭದಲ್ಲಿ ಗುರುತಿನ ಚೀಟಿ ವಿವರ ನೀಡಬೇಕು. ಪ್ರಯಾಣದ ವೇಳೆ ಐಡಿ ಕಾರ್ಡ್ ತೆಗೆದುಕೊಂಡು ಹೋಗಿರಬೇಕು. ಪ್ರೀಮಿಯಂ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಿ ರದ್ದು ಮಾಡಿದರೆ ಟಿಕೆಟ್ ಮೊತ್ತ ರೀಫಂಡ್ ಮಾಡುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+