ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 3ರ ತನಕ ಪ್ರಯಾಣಿಕ ರೈಲು ಸಂಚಾರ ರದ್ದು

|
Google Oneindia Kannada News

ಬೆಂಗಳೂರು, ಏಪ್ರಿಲ್ 14 : ಕೊರೊನಾ ತಡೆಯಲು ದೇಶದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೇ 3ರ ತನಕ ಲಾಕ್ ಡೌನ್ ವಿಸ್ತರಣೆ ಮಾಡುವುದಾಗಿ ಮಂಗಳವಾರ ಘೋಷಣೆ ಮಾಡಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮೇ 3ರ ತನಕ ಯಾವುದೇ ಪ್ರಯಾಣಿಕ ರೈಲು ದೇಶದಲ್ಲಿ ಸಂಚಾರ ನಡೆಸುವುದಿಲ್ಲ.

ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ

ಅಗತ್ಯ ವಸ್ತುಗಳ ಸಾಗಣೆಗೆ ಗೂಡ್ಸ್ ರೈಲು, ಕೆಲವು ವಿಶೇಷ ರೈಲುಗಳು ಎಂದಿನಂತೆ ಸಂಚಾರ ನಡೆಸಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಮೇ 4ರಿಂದ ರೈಲು ಸಂಚಾರ ಆರಂಭವಾಗಲಿದೆಯೇ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಬೆಂಗಳೂರು ರೈಲು ನಿಲ್ದಾಣದಲ್ಲಿ 40 ಕ್ವಾರಂಟೈನ್ ಕೋಚ್ ಸಿದ್ಧ ಬೆಂಗಳೂರು ರೈಲು ನಿಲ್ದಾಣದಲ್ಲಿ 40 ಕ್ವಾರಂಟೈನ್ ಕೋಚ್ ಸಿದ್ಧ

All Passenger Train Services Suspended Till May 3

ಮೊದಲು ಏಪ್ರಿಲ್ 14ರ ತನಕ ಪ್ರಯಾಣಿಕ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಈಗ ಲಾಕ್ ಡೌನ್ ವಿಸ್ತರಣೆಯಾದ ಬಳಿಕ ಅದನ್ನು ಮೇ 3ರ ತನಕ ವಿಸ್ತರಣೆ ಮಾಡಿ ರೈಲ್ವೆ ಆದೇಶ ಹೊರಡಿಸಿದೆ.

ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ? ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?

ರೈಲುಗಳ ಮುಂಗಡ ಬುಕ್ಕಿಂಗ್, ರೈಲ್ವೆ ನಿಲ್ದಾಣಗಳ ಬುಕ್ಕಿಂಗ್ ಸೆಂಟರ್, ರೈಲು ನಿಲ್ದಾಣಗಳು, ನಿಲ್ದಾಣದಲ್ಲಿನ ಅಂಗಡಿಗಳು ಮೇ 3ರ ಮಧ್ಯರಾತ್ರಿ ತನಕ ಬಂದ್ ಆಗಿರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಗೂಡ್ಸ್‌ ರೈಲುಗಳ ಸಂಚಾರವನ್ನು ನಡೆಸುತ್ತಿದೆ. ಪ್ರಯಾಣಿಕ ರೈಲುಗಳನ್ನು ಸಹ ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

English summary
After extension of lockdown Indian railways suspended all passenger train services till May 3, 2020. Goods and parcel trains will continue to be in operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X