ಬೋಯಿಂಗ್ 737ಮ್ಯಾಕ್ಸ್ ಹಾರಾಟ ರದ್ದು; ಗುರುವಾರ ಏನಾಗಬಹುದು?
ಇಥಿಯೋಪಿಯಾ ಏರ್ ಲೈನ್ಸ್ ನ ಬೋಯಿಂಗ್ ವಿಮಾನ ಮೊನ್ನೆ ಭಾನುವಾರ ಪತನವಾಗಿ, ಆದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದ ಮೇಲೆ ಹಲವು ದೇಶಗಳು ಬೋಯಿಂಗ್ 737ಮ್ಯಾಕ್ಸ್ ಹಾರಾಟವನ್ನು ನಿಲ್ಲಿಸಿವೆ. ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ಮಾತನಾಡಿ, ಈ ವರೆಗೆ ಬೋಯಿಂಗ್ 737ಮ್ಯಾಕ್ಸ್ ಹಾರಾಟ ನಿಲ್ಲಿಸಲಾಗಿದೆ ಎಂದಿದ್ದಾರೆ.
ಅದು ಕೂಡ ಬುಧವಾರ ಸಂಜೆ ನಾಲ್ಕು ಗಂಟೆಯ ಗಡುವಿನೊಳಗೆ ತೆಗೆದುಕೊಂಡ ನಿರ್ಧಾರವಾಗಿತ್ತು. ನಾವು ಏರ್ ಲೈನ್ಸ್ ನವರ ಜತೆ ಚರ್ಚೆ ನಡೆಸಿದ್ದೇವೆ. ಪ್ರಯಾಣಿಕರಿಗೆ ಆಗಬಹುದಾದ ಅನನುಕೂಲವನ್ನು ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ಪ್ರದೀಪ್ ಸಿಂಗ್ ಹೇಳಿದ್ದಾರೆ.
ಸ್ಪೈಸ್ ಜೆಟ್ ನಿಂದ ಬುಧವಾರದಂದು 14 ವಿಮಾನ ರದ್ದು ಮಾಡಲಾಗಿದೆ. ಸ್ಪೈಸ್ ಜೆಟ್ ಪ್ರತಿ ದಿನ 500ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸುತ್ತದೆ. ಅದರಲ್ಲಿ 14 ರದ್ದಾಗಿದೆ. ತಮ್ಮಷ್ಟಕ್ಕೆ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಯಶಸ್ವಿ ಆಗಿದ್ದಾರೆ. ಆದರೆ ಗುರುವಾರ ನಿಜವಾದ ಸವಾಲಿದೆ. ಏಕೆಂದರೆ, ರದ್ದಾದ ವಿಮಾನಗಳ ಪರಿಣಾಮ ದಿನದ ದ್ವಿತೀಯಾರ್ಧದಲ್ಲಿ ಗೊತ್ತಾಗುತ್ತದೆ ಎಂದಿದ್ದಾರೆ.

ಸದ್ಯಕ್ಕೆ ಇರುವ ವಿಮಾನಗಳ ಬಳಕೆಯನ್ನೇ ಸ್ಪೈಸ್ ಜೆಟ್ ಹೆಚ್ಚಿಸಿದೆ. ಗುರುವಾರಕ್ಕೆ 30ರಿಂದ 35 ವಿಮಾನಗಳ ಮೇಲೆ ಪರಿಣಾಮ ಆಗಲಿದೆ. ಸ್ಪೈಸ್ ಜೆಟ್ ಸೇವೆ ನೀಡುತ್ತಿರುವ ಯಾವುದೇ ವಿಮಾನ ನಿಲ್ದಾಣದಲ್ಲಿ ಹಾರಾಟ ವ್ಯತ್ಯಯ ಆಗುವುದಿಲ್ಲ. ಪ್ರಯಾಣಿಕರ ದೂರುಗಳ ಬಗ್ಗೆ ನಿಗಾ ಮಾಡುವ ಸಲುವಾಗಿಯೇ ವಿಶೇಷ ಸೆಲ್ ಸ್ಥಾಪಿಸಲಾಗಿದೆ.
ಅಂತರರಾಷ್ಟ್ರೀಯ ವಿಮಾನಗಳನ್ನು ಸದ್ಯಕ್ಕೆ ಹಾರಾಟ ನಡೆಸಲಿದ್ದೇವೆ ಎಂದು ವಿಸ್ತಾರಾದಿಂದ ತಿಳಿಸಿದ್ದಾರೆ ಎಂದು ಪ್ರದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.












Click it and Unblock the Notifications