ಅಲಿಘಡದಲ್ಲಿ ಪಟಾಕಿ ಸಿಡಿದು ತಾಯಿ, ಮಗಳ ದುರ್ಮರಣ
ಅಲಿಘಡ, ಅಕ್ಟೋಬರ್ 13: ಒಂದೆಡೆ ಪಟಾಕಿ ನಿಷೇಧದ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದ್ದರೆ, ಅಲಿಘಡದಲ್ಲಿ ತಾಯಿ ಮತ್ತು ಮಗಳು ಪಟಾಕಿ ತಯಾರಿಸುವ ಸಂದರ್ಭದಲ್ಲಿ ಸಾವಿಗೀಡಾದ ಘಟನೆ ನಿನ್ನೆ(ಅ.12) ನಡೆದಿದೆ.
ಮನೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ಸಂದರ್ಭದಲ್ಲಿ ಪಟಾಕಿ ಸ್ಫೋಟಗೊಂದು, ತಾಯಿ ಮತ್ತು ಮಗಳು ಅಸುನೀಗಿದ್ದರೆ, ಮನೆಯಲ್ಲಿದ್ದ ಇತರೆ ಸದಸ್ಯೆರಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ನಂತರ ಪ್ರತಿಕ್ರಿಯೆ ನೀಡಿದ, ಸೆಂಟರ್ ಫಾರ್ ಚೆಸ್ಟ್ ಸರ್ಜರಿ ಅಂಡ್ ಲಂಗ್ ಟ್ರಾನ್ಸ್ ಪ್ಲಾಂಟೇಶನ್ ನ ಚೇರ್ ಮನ್ ಡಾ. ಅರವಿಂದ್ ಕುಮಾರ್, ಪಟಾಕಿಗಳು ಆರೋಗ್ಯಕ್ಕೆ ಮಾರಕ ಮಾತ್ರವಲ್ಲ, ಪ್ರಾಣಕ್ಕೇ ಕುತ್ತು ಎಂದಿದ್ದಾರೆ.
ಒಟ್ಟಿನಲ್ಲಿ ಕೇವಲ ಪರಿಸರ ಮಾಲಿನ್ಯ ತಡೆವ ದೃಷ್ಟಿಯಿಂದ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪಟಾಕಿ ನಿಷೇಧವನ್ನು ಸ್ವಾಗತಿಸುವ ಅಗತ್ಯವಿದೆ.












Click it and Unblock the Notifications