ಮುಲಾಯಂ ಸೈಕಲ್ ಕಸಿದುಕೊಂಡ ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಗುರುತಾದ 'ಸೈಕಲ್' ಈಗ ಅಖಿಲೇಶ್ ಬಣದ ಪಾಲಾಗಿದೆ. ಮುಲಾಯಂ ಅವರು, ತಮ್ಮ ಬಣಕ್ಕಾಗಿ ಹೊಸ ಚಿಹ್ನೆಯನ್ನು ಹುಡುಕಿಕೊಳ್ಳಬೇಕಿದೆ.
ನವದೆಹಲಿ,
ಜನವರಿ 16: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಗುರುತಾದ 'ಸೈಕಲ್' ಈಗ ಅಖಿಲೇಶ್ ಬಣದ ಪಾಲಾಗಿದೆ. ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದ ಮೇಲೆ, ಎರಡೂ ಬಣದ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ ಹಾಗೂ ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಇಬ್ಬರೂ ಪಕ್ಷದ ಚಿಹ್ನೆಯು ತಮಗೇ ಸಿಗಬೇಕೆಂದು ಕಿತ್ತಾಡಿದ್ದರು. id="toptextpromo"> id='are-slot-1' class='oiad oi-axt oiadv'>id='top-searched-articles'>
ಆನಂತರ
ಅದು ಚುನಾವಣಾ ಆಯೋಗದ ಮೆಟ್ಟಿಲೇರಿತ್ತು. ಇದೀಗ, ಆಯೋಗವು ಈ ಚಿಹ್ನೆಯನ್ನು ಅಖಿಲೇಶ್ ಬಣಕ್ಕೆ ಸಿಗಬೇಕೆಂದು ತೀರ್ಪು ನೀಡಿದೆ. ಇದೀಗ, ಮುಲಾಯಂ ಅವರು, ತಮ್ಮ ಬಣಕ್ಕಾಗಿ ಹೊಸ ಚಿಹ್ನೆಯನ್ನು ಹುಡುಕಿಕೊಳ್ಳಬೇಕಿದೆ.











Click it and Unblock the Notifications