Ajit Pawar: ಸ್ಕೂಟಿ ಚಲಾಯಿಸದವರಿಗೆ ವಿಮಾನ ಕೊಟ್ಟರೆ ಹಿಂಗೇ ಆಗೋದು: ಸೋಷಿಯಲ್ ಮೀಡಿಯಾ ಟ್ರೋಲ್‌ಗೆ ನೆಟ್ಟಿಗರು ಕೆಂಡ

ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಜನವರಿ 28ರ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳು ಅಸಹ್ಯಕರವಾಗಿದೆ. ಪುರುಷ ಪ್ರಧಾನ ಅಥವಾ ಇನ್ನೂ ಹಳೆಯ ಚಿಂತನೆಯಲ್ಲೇ ಇರುವ ಕೆಲವರು ಹೇಗೆಲ್ಲಾ ವರ್ತಿಸುತ್ತಾರೆ ಎನ್ನುವುದಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯೇ ಸಾಕ್ಷಿಯಾಗಿದೆ.

ಜನವರಿ 28, 2026 ರಂದು ಬುಧವಾರ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮತ್ತು ನಾಲ್ವರು ಸಾವನ್ನಪ್ಪಿದರು. ವಿಮಾನವು ಬಾರಾಮತಿಯಲ್ಲಿ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಪತನಗೊಂಡಿತ್ತು. ಅಜಿತ್ ಪವಾರ್ ಮತ್ತು ಸಹ - ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಈ ವಿಮಾನ ಅಪಘಾತ ಸಂಭವಿಸಿದ ಎರಡು ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೀಳು ಮಟ್ಟದ ಟ್ರೋಲ್‌ಗಳು ಶುರುವಾಗಿವೆ. ಮಹಿಳಾ ಪೈಲಟ್ ವಿಮಾನ ಚಲಾಯಿಸಿದರೆ ಇನ್ನೇನು ಆಗುತ್ತದೆ ಎಂದು ಕೆಲವರು ಮಾಡಿರುವ ಟ್ವೀಟ್ ಮತ್ತು ಟ್ರೋಲ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Shambhavi Pathak

ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್ ಸೇರಿದಂತೆ ಇತರ ನಾಲ್ವರು ಪೈಲಟ್ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಸಹ - ಪೈಲಟ್ ಮಹಿಳೆಯಾಗಿದ್ದರು ಎನ್ನುವುದನ್ನೇ ಕೆಲವರು ಟ್ರೋಲ್‌ಗೆ ಬಳಸುತ್ತಿದ್ದಾರೆ.

ಸ್ಕೂಟರ್ ಓಡಿಸಲು ಕಲಿತಿಲ್ಲ

ಅಲೋಕ್‌ ಆನಂದ ಎನ್ನುವ ವ್ಯಕ್ತಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆ ಹುಡುಗಿ ವಿಶೇಷವಾಗಿ X ಕ್ರೋಮೋಸೋಮ್ ಇನ್ನೂ ಸ್ಕೂಟರ್ ಓಡಿಸಲು ಕಲಿತಿಲ್ಲ. ಅವಳಿಗೆ ವಿಮಾನ ನೀಡಿದರೆ, ಹೀಗಾಗುತ್ತದೆ. ಶಾಂಭವಿ ಕ್ಷಮಿಸಿ ಆದರೆ ಪುರುಷ ಪ್ರಧಾನ ಉದ್ಯೋಗಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವುದು ಒಂದು ರೀತಿಯ ಆತ್ಮಹತ್ಯಾ ಕೆಲಸ. ಇದಕ್ಕೆ ಸರ್ಕಾರ ವಿಶೇಷ ಗಮನ ನೀಡಬೇಕು ಎಂದಿದ್ದಾನೆ. ಈ ಟ್ವೀಟ್‌ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂಕಿತ್ ಮಾಯಾಂಕ್ ಎನ್ನುವವರು, ಅಲೋಕ್ ಆನಂದ್‌ ಟ್ವೀಟ್ ನೋಡಿ, ಒಬ್ಬ ಸಾಮಾನ್ಯ ಭಾರತೀಯ ಪುರುಷ ಮತ್ತು ಹೆಮ್ಮೆಯ ಆಂಧಭಕ್ತ. ಅಜಿತ್ ಪವಾರ್ ಅವರೊಂದಿಗೆ ಹಾರಾಟ ನಡೆಸುವಾಗ ಯುವ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವನು ಅವಳನ್ನು ದೂಷಿಸಲು, ಅವಳನ್ನು ನಿಂದಿಸಲು ಮತ್ತು ಮಹಿಳೆಯರ ಬಹಿಷ್ಕಾರಕ್ಕೆ ಕರೆ ನೀಡಲು ಮುಂದಾಗಿದ್ದಾನೆ. ಸಾಂಭವಿ ಮೊದಲ ಅಧಿಕಾರಿ ಎಂದು ಅವನಿಗೆ ತಿಳಿದಿಲ್ಲ ಆದರೆ ಕ್ಯಾಪ್ಟನ್ ಒಬ್ಬ ಪುರುಷ, ಇಬ್ಬರೂ ಅಲೋಕ್‌ಗಿಂತ ಭಿನ್ನವಾಗಿ ಪ್ರತಿಭಾನ್ವಿತರಾಗಿದ್ದರು. ಅಲೋಕ್ ನಂತೆ ಇರಬೇಡಿ. ಮಹಿಳೆಯರನ್ನು ಗೌರವಿಸಿ ಎಂದು ತಿವಿದಿದ್ದಾರೆ.

Shambhavi Pathak

ಮತ್ತೊಬ್ಬ ನೆಟ್ಟಿಗ ಸಾರ್, ಪುರುಷ ಪ್ರಧಾನ ಉದ್ಯೋಗಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವುದು ಒಂದು ರೀತಿಯ ಹೀನ ಕೆಲಸ, ಇದಕ್ಕೆ ಸರ್ಕಾರ ವಿಶೇಷ ಗಮನ ನೀಡಬೇಕು ಎಂದಿದ್ದಾನೆ. ವರುಣ್ ತ್ಯಾಗಿ ಎನ್ನುವವನು ಸ್ಕೂಟಿ ಓಡಿಸುವುದಕ್ಕೂ ಬರದ ಮಹಿಳೆ ವಿಮಾನ ಓಡಿಸಬಾರದು ಪೈಲಟ್ ಮಾಡಿದ ತಪ್ಪು ಎಂದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+