ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್
ಭಾರತದ ಬೇಹುಗಾರಿಕಾ ಅಧಿಕಾರಿ ಅಜಿತ್ ಕುಮಾರ್ ಡೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತೊಂದು ಅವಧಿಗೆ ನೇಮಿಸಲಾಗಿದೆ. ಇದು ಕ್ಯಾಬಿನೆಟ್ ದರ್ಜೆ ಹುದ್ದೆಯಾಗಿದೆ.
ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವ ಅಜಿತ್ ಅವರು ಮುಂದಿನ ಐದು ವರ್ಷಗಳ ಕಾಲ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಕೇಂದ್ರ ಸರ್ಕಾರವು ಪ್ರಕಟಿಸಿದೆ.
2014ರಲ್ಲಿ NSA ಸೇರುವುದಕ್ಕೂ ಮುನ್ನ ಗುಪ್ತಚರ ಇಲಾಖೆಯ ನಿರ್ದೇಶಕರಾಗಿ 2004-05ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಸರ್ಜಿಕಲ್ ಸ್ಟ್ರೈಕ್ ಹಿಂದಿನ ಶಕ್ತಿ: ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗಳ ಹಿಂದಿನ ರೂಪುರೇಷೆ ವಿನ್ಯಾಸಗೊಳಿಸಿದವರು ಅಜಿತ್.
2014ರ ಮೇ 30ರಂದು ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ನೇಮಕಗೊಂಡರು. ಜೂನ್ 2014ರಲ್ಲಿ ಇರಾಕಿನ ತಿರ್ಕಿಟ್ ನಲ್ಲಿ ಐಎಸ್ಐಎಸ್ ಉಗ್ರರ ಬಳಿ ಸಿಲುಕಿದ್ದ ಭಾರತದ ನರ್ಸ್ ಗಳನ್ನು ಭಾರತಕ್ಕೆ ಕರೆತರುವಲ್ಲಿ ಅಜಿತ್ ಪಾತ್ರ ಹಿರಿದಾಗಿತ್ತು. ರಹಸ್ಯ ಕಾರ್ಯಾಚರಣೆ ನಡೆಸಿ, ಇರಾಕಿನ ಉನ್ನತ ಅಧಿಕಾರಿಗಳ ನೆರವಿನಿಂದ ಉಗ್ರರ ಕಪಿಮುಷ್ಟಿಯಿಂದ ನರ್ಸ್ ಗಳನ್ನು ಇಲ್ಲಿಗೆ ಕರೆತಂದರು.
ಗುಪ್ತಚರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಾಗ ಪಾಕಿಸ್ತಾನದಲ್ಲಿ ಮುಸ್ಲಿಂನಾಗಿ ನೆಲೆಸಿ, ಭಾರತಕ್ಕೆ ಮಹತ್ವದ ವಿಷಯಗಳನ್ನು ಕಳಿಸುತ್ತಿದ್ದ ಗೂಢಾಚಾರಿಯಾಗಿದ್ದರು.












Click it and Unblock the Notifications