ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವೃದ್ಧೆಗೆ ಗಾಲಿಕುರ್ಚಿ ನಿರಾಕರಿಸಿದ ಏರ್ ಇಂಡಿಯಾ ವಿಮಾನ ಸಿಬ್ಬಂದಿ; ಮುಂದೇನಾಯ್ತು?
Air India: ಸಾಮಾನ್ಯವಾಗಿ ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ವಯಸ್ಸಾದವರಿಗೆ, ಅಂಗವಿಲಕರ ನೆರವಿಗೆ ಅಲ್ಲಿನ ಸಿಬ್ಬಂದಿ ವ್ಹೀಲ್ ಚೇರ್ ನೀಡುವ ಮೂಲಕ ನೆರವಾಗಬೇಕಾಗುತ್ತದೆ. ಆದರೆ ಇದೀಗ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ 82 ವರ್ಷದ ವೃದ್ಧೆಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಗಾಲಿಕುರ್ಚಿ ನೀಡುವುದನ್ನು ನಿರಾಕರಿಸಿದ್ದಾರೆ ಎನ್ನುವ ಗಂಭೀಕರ ಆರೋಪವೊಂದು ಕೇಳಿಬಂದಿದೆ. ಇದೀಗ ಇದೇ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ 82 ವರ್ಷದ ಪ್ರಯಾಣಿಕನೊಬ್ಬ ಬಿದ್ದು, ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ಐಸಿಯುಗೆ ದಾಖಲಾದ ಘಟನೆಯ ಬಗ್ಗೆ ಡಿಜಿಸಿಎ ಏರ್ ಇಂಡಿಯಾದಿಂದ ವರದಿ ಕೋರಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಗಾಲಿಕುರ್ಚಿ ನೆರವು ನೀಡುವುದನ್ನು ನಿರಾಕರಿಸಿದ ಹಿನ್ನೆಲೆ 82 ವರ್ಷದ ವೃದ್ಧೆಯೊಬ್ಬರು ಬಿದ್ದಿದ್ದು, ಮೆದುಳು ಪಾರ್ಶವಾಯುವಿಗೆ ಒಳಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾದ ಬಗ್ಗೆ ವರದಿಯಾಗಿದೆ.
ಈ ಕುರಿತು ವೃದ್ಧೆಯ ಮೊಮ್ಮಗಳು ತನ್ನ ಟ್ವೀಟ್ ಖಾತೆಯಲ್ಲಿ ಬರೆದಕೊಳ್ಳುವ ಮೂಲಕ ಅಳಲು ತೋಡಿಕೊಂಡಿದ್ದಾರೆ. ಬಳಿಕ ವೃದ್ಧೆಗೆ ವ್ಹೀಲ್‌ಚೇರ್ ನೀಡುವಲ್ಲಿ ವಿಳಂಬ ಮಾಡಿದ ಆರೋಪದ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಏರ್ ಇಂಡಿಯಾದಿಂದ ವಿವರವಾದ ವರದಿ ನೀಡುವಂತೆ ಕೋರಿದೆ.
ಮಾರ್ಚ್ 4ರಂದು ಬೆಂಗಳೂರಿಗೆ ಪ್ರಯಾಣಿಸಲು ತನ್ನ ಮೊಮ್ಮಗಳ ಜೊತೆಗೆ ವೃದ್ಧೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆಗ 82 ವರ್ಷದ ಆ ವೃದ್ಧೆಗೆ ಅನುಕೂಲ ಆಗಲೆಂದು ಗಾಲಿಕುರ್ಚಿ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಏರ್ ಇಂಡಿಯಾ ವಿಮಾನ ಸಿಬ್ಬಂದಿ ಗಾಲಿಕುರ್ಚಿ ನೆರವು ಕಲ್ಪಿಸಲಿಲ್ಲ. ಆಗ ಅವರು ವಿಮಾನ ಹತ್ತಲು ನಡೆದು ಹೋಗುವಾಗ ಕುಸಿದು ಬಿದ್ದರು. ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ಏರ್ ಇಂಡಿಯಾ ಕಂಪನಿಗೆ ದೂರು ಸಲ್ಲಿಸಲಾಗಿದೆ.
ಇನ್ನು ಈ ಬಗ್ಗೆ ಯಾವ ಕ್ರಮಗೊಳ್ಳಲಾಗುತ್ತದೆ ಎಂಬುದನ್ನು ಕಾಯುತ್ತಿದ್ದೇ ಎಂದು ವೃದ್ಧೆಯ ಮೊಮ್ಮಗಳು ತಿಳಿಸಿದ್ದಾರೆ. ಇನ್ನು ಈ ಪ್ರಕರಣ ಕುರಿತು ತನಿಖೆ ನಡೆಸಲಾಗಿದೆ. ವಿಮಾನ ಪ್ರಯಾಣ ಆರಂಭಕ್ಕೂ 90 ನಿಮಿಷ ಮೊದಲು ಗಾಲಿಕುರ್ಚಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಪ್ರಯಾಣಿಕರ ದಟ್ಟಣೆ ವೇಳೆ ಕೋರಿಕೆ ಸಲ್ಲಿಸಲಾಗಿದೆ. 15 ನಿಮಿಷದೊಳಗೆ ಗಾಲಿಕುರ್ಚಿ ಕಲ್ಪಿಸಲು ಸಾಧ್ಯವಾಗಿಲ್ಲ. ಆದರೆ, ಒಂದು ಗಂಟೆ ವಿಳಂಬ ಮಾಡಲಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದುದು ಎಂದು ಏರ್ ಇಂಡಿಯಾ ಕಂಪನಿ ತಿಳಿಸುವ ಮೂಲಕ ಆರೋಪವನ್ನು ತಳ್ಳಿಹಾಕಿದೆ.
ವೃದ್ಧೆಗೆ ಗಾಲಿ ಕುರ್ಚಿ ಅಥವಾ ನೆರವು ನೀಡಲು ಸಿಬ್ಬಂದಿ ನಿರಾಕರಿಸಿಲ್ಲ. ಅವರ ಪ್ರಯಾಣ ಮುಗಿಯುವವರೆಗೂ ಅಗತ್ಯವಿರುವ ಸಹಾಯ ನೀಡಿದ್ದಾರೆ. ಮೊಮ್ಮಗಳ ಜೊತೆಯಲ್ಲಿಯೇ ನಡೆದುಕೊಂಡು ಹೋಗುವುದಾಗಿ ಅವರೇ ಹೇಳಿದ್ದಾರೆ. ಆ ವೇಳೆ ಅವರು ಕುಸಿದು ಬಿದ್ದ ತಕ್ಷಣವೇ ನಿಲ್ದಾಣದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿಸಿದೆ.












Click it and Unblock the Notifications