ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೆ ಅವಘಡ: ಲ್ಯಾಂಡ್‌ ಆದ ತಕ್ಷಣ ಕಾಣಿಸಿಕೊಂಡ ಬೆಂಕಿ

ಹಾಂಗ್‌ಕಾಂಗ್‌ನಿಂದ ದೆಹಲಿಗೆ ಬಂದ ಏರ್ ಇಂಡಿಯಾ AI 315 ವಿಮಾನವು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆದ ನಂತರ ವಿಮಾನದ ಟೈಲ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಸಹಾಯಕ ವಿದ್ಯುತ್ ಘಟಕದಲ್ಲಿ (ಎಪಿಯು) ಬೆಂಕಿ ಹೊತ್ತಿಕೊಂಡಿರುವ ಘಟನೆ ವರದಿಯಾಗಿದೆ. ವಿಮಾನ ನಿಲ್ದಾಣಕ್ಕೆ ಇಳಿದ ತಕ್ಷಣ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ವಿಮಾನ ನಿಲ್ದಾಣ ಮತ್ತು ಏರ್ ಇಂಡಿಯಾ ಸಂಸ್ಥೆ ಮಂಗಳವಾರ ತಿಳಿಸಿದೆ.

ಈ ಬೆಂಕಿ ವಿಮಾನದಿಂದ ಪ್ರಯಾಣಿಕರು ಇಳಿಯುತ್ತಿರುವಾಗ ಪತ್ತೆಯಾಯಿತು. ತಕ್ಷಣ ಎಪಿಯು ನಿಲ್ಲಿಸಿದ ಕಾರಣ, ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ವಿಮಾನದಿಂದ ಇಳಿಯುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಅಪಾಯ ಸಂಭವಿಸಲಿಲ್ಲ. ವಿಮಾನದ ಹಿಂಭಾಗದಲ್ಲಿರುವ ಎಪಿಯು ಸಹಾಯಕ ವಿದ್ಯುತ್ ಉತ್ಪಾದಿಸುವ ಘಟಕವಾಗಿದ್ದು, ಕೆಲವೊಂದು ಅನಿವಾರ್ಯ ಕಾರ್ಯಗಳಿಗಾಗಿ, ಉದಾಹರಣೆಗೆ ಏರ್ ಕಂಡೀಷನಿಂಗ್ ಮುಂತಾದವುದಕ್ಕೆ ವಿದ್ಯುತ್ ನೀಡಲು ಬಳಸಲಾಗುತ್ತದೆ.

air-india-plane-catches-fire-after-landing-at-delhi-airport-no-casualties

ಜುಲೈ 22ರಂದು ಹಾಂಗ್‌ಕಾಂಗ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ವಿಮಾನ AI 315, ಗೇಟ್‌ನಲ್ಲಿ ಇಳಿದು ನಿಲ್ಲಿಸಿದ ಸ್ವಲ್ಪ ಸಮಯದ ನಂತರ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರು ಇಳಿಯಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಸಿಸ್ಟಮ್ ವಿನ್ಯಾಸದ ಪ್ರಕಾರ ಎಪಿಯು ಸ್ವಯಂಚಾಲಿತವಾಗಿ ಸ್ಥಗಿತಗೊಂಡಿತು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ. ಆದರೂ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾಮಾನ್ಯವಾಗಿ ಇಳಿದಿದ್ದು, ಸುರಕ್ಷಿತವಾಗಿದ್ದಾರೆ. ಹೆಚ್ಚಿನ ತನಿಖೆಗಾಗಿ ವಿಮಾನ ಸ್ಥಗಿತಗೊಳಿಸಲಾಗಿದೆ ಮತ್ತು ನಿಯಂತ್ರಕರಿಗೆ ಸೂಕ್ತವಾಗಿ ತಿಳಿಸಲಾಗಿದೆ.

ಬೆಂಕಿ ಕಾಣಿಸಿಕೊಂಡ ಘಟನೆಯಿಂದ ವಿಮಾನದಲ್ಲಿ ಕೆಲವೊಂದು ಹಾನಿ ಸಂಭವಿಸಿದ್ದು, ವಿಮಾನವನ್ನು ಈಗ ಭದ್ರತೆ ಮತ್ತು ಪರಿಶೀಲನೆಗಳಿಗಾಗಿ ಒಳಪಡಿಸಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಬಗ್ಗೆ ವರದಿ ಕೇಳಿದೆ. ಇದು ಕಳೆದ ಎರಡು ದಿನಗಳಲ್ಲಿ ಏರ್ ಇಂಡಿಯಾದ ಮೂರನೇ ಘಟನೆಯಾಗಿದೆ. ಕೋಚಿಯಿಂದ ಮುಂಬೈಗೆ ಬರುವ ಇನ್ನೊಂದು ವಿಮಾನ ರಸ್ತೆ ಮಾರ್ಗದಿಂದ ಬಿದ್ದು ಹಾನಿಗೊಂಡ ಘಟನೆ, ದೆಹಲಿ-ಕೋಲ್ಕತ್ತಾ ಫ್ಲೈಟ್ ತಕ್ಷಣವೇ ಟೇಕ್ ಆಫ್ ರದ್ದು ಘಟನೆಗಳ ಬಳಿಕ ಮತ್ತೆ ಏರ್‌ ಇಂಡಿಯಾ ವಿಮಾನದಲ್ಲೇ ಈ ಘಟನೆ ಸಂಭವಿಸಿರುವುದು ಅಚ್ಚರಿ ಮೂಡಿಸಿದೆ.

ಎಎಐಬಿಯ ಆರಂಭಿಕ ವರದಿಯ ನಂತರ, ಬೋಯಿಂಗ್ ಜೆಟ್‌ಗಳನ್ನು ನಿರ್ವಹಿಸುವ ದೇಶೀಯ ವಿಮಾನಯಾನ ಸಂಸ್ಥೆಗಳು ಎಂಜಿನ್‌ಗಳಿಗೆ ಇಂಧನ ಪೂರೈಕೆಯನ್ನು ನಿಯಂತ್ರಿಸುವ ಸ್ವಿಚ್‌ಗಳನ್ನು ಪರಿಶೀಲಿಸಲು ಸೂಚಿಸಲಾಯಿತು. ಭಾರತದಲ್ಲಿ ನೋಂದಾಯಿಸಲಾದ ಎಲ್ಲ ಬೋಯಿಂಗ್ ವಿಮಾನಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿತ್ತು. ನಂತರ ಏರ್ ಇಂಡಿಯಾ ಪರಿಶೀಲನೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿತ್ತು.

ಕಳೆದ ಆರು ತಿಂಗಳಲ್ಲಿ ಗುರುತಿಸಲಾದ ಐದು ಸುರಕ್ಷತಾ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗೆ ಒಂಬತ್ತು ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ. ರಾಜ್ಯಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಕಳೆದ ಆರು ತಿಂಗಳಲ್ಲಿ ಅಪಘಾತಕ್ಕೀಡಾದ ವಿಮಾನಗಳಿಗೆ ಸಂಬಂಧಿಸಿದಂತೆ ಏರ್ ಇಂಡಿಯಾದ ವಿಶ್ವಾಸಾರ್ಹತಾ ವರದಿಗಳಲ್ಲಿ ಯಾವುದೇ ಪ್ರತಿಕೂಲ ಪ್ರವೃತ್ತಿ ವರದಿಯಾಗಿಲ್ಲ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+