ರಿಯಾದ್ ಹೋಟೆಲ್‌ನಲ್ಲಿ ಏರ್ ಇಂಡಿಯಾ ಪೈಲಟ್ ಶವ ಪತ್ತೆ

ಮುಂಬೈ, ಮೇ 30: ಏರ್ ಇಂಡಿಯಾದ ಪೈಲಟ್ ಕ್ಯಾಪ್ಟನ್ ರಿತ್ವಿಕ್ ತಿವಾರಿ ಎಂಬುವವರು ಸೌದಿ ಅರೇಬಿಯಾದ ರಿಯಾದ್‌ನ ಹೋಟೆಲ್ ಒಂದರ ಹೆಲ್ತ್ ಕ್ಲಬ್ ಬಳಿ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಮೇಯ್ದನ್ ರಿಯಾದ್‌ನಲ್ಲಿನ ಹೋಟೆಲ್ ಹಾಲಿಡೇ ಇನ್‌ನಲ್ಲಿನ ಹೆಲ್ತ್ ಕ್ಲಬ್ ಸಮೀಪದ ಸಣ್ಣ ಶೌಚಾಲಯದ ಬದಿಯಲ್ಲಿ ರಿತ್ವಿಕ್ ತಿವಾರಿ (30) ಅವರ ಶವ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ರಿತ್ವಿಕ್ ತಿವಾರಿ ಅವರು ಮುಂಬೈ ಮೂಲದವರು.

air india pilot found dead in riyadh

ಒಳಗಿನಿಂದ ಲಾಕ್ ಮಾಡಿಕೊಳ್ಳಲಾಗಿದ್ದ ಶೌಚಾಲಯ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದರು. ಬಳಿಕ ಪೊಲೀಸರು ಬಂದು ಬಾಗಿಲು ಒಡೆದಾಗ ತಿವಾರಿ ಅವರ ದೇಹ ಕಂಡುಬಂದಿದೆ.

ಹೆಲ್ತ್ ಕ್ಲಬ್‌ನಲ್ಲಿನ ವೈದ್ಯಕೀಯ ತಂಡವು ತಿವಾರಿ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿತು. ಏರ್‌ ಇಂಡಿಯಾದ ರಿಯಾದ್‌ನಲ್ಲಿನ ಮ್ಯಾನೇಜರ್, ತಿವಾರಿ ಅವರ ತಂದೆಗೆ ಮಾಹಿತಿ ನೀಡಿದರು.

ತವಾರಿ ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+