58,000 ಲೀಟರ್ ಪೆಟ್ರೋಲ್ ಹೊಂದಿದ್ದ ವಿಮಾನ ದಿಢೀರ್ ಬಿಲ್ಡಿಂಗ್ ಮೇಲೆ ಬಿದ್ದಿದ್ದು ಹೇಗೆ... Ahmedabad Plane Crash
ಜಗತ್ತೇ ಬೆಚ್ಚಿ ಬೀಳುವ ಘಟನೆ ಪ್ರಧಾನಿ ಮೋದಿ ಅವರ ತವರು ಗುಜರಾತ್ ರಾಜ್ಯದ ಅಹಮದಾಬಾದ್ ನಗರದಲ್ಲಿ ಇಂದು ನಡೆದಿದೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತ ಹಿನ್ನೆಲೆ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತದ ಇತಿಹಾಸದಲ್ಲೇ ಘೋರ ವಿಮಾನ ದುರಂತ ಇಂದು ಸಂಭವಿಸಿದ್ದು, ಈ ಸುದ್ದಿಯನ್ನ ಶತಕೋಟಿ ಭಾರತೀಯರು ನಂಬಲು ಕೂಡ ಆಗುತ್ತಿಲ್ಲ. ಹಾಗಾದರೆ, 58,000 ಲೀಟರ್ ಪೆಟ್ರೋಲ್ ಹೊಂದಿದ್ದ ವಿಮಾನ ದಿಢೀರ್ ಬಿಲ್ಡಿಂಗ್ ಮೇಲೆ ಬಿದ್ದಿದ್ದು ಹೇಗೆ...
ಅಂದಹಾಗೆ 242 ಜನರನ್ನು ಹೊತ್ತ ಏರ್ ಇಂಡಿಯಾ ವಿಮಾನ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಏರ್ಪೋರ್ಟ್ ಮೂಲಕ ಲಂಡನ್ ಕಡೆಗೆ ಪ್ರಯಾಣ ಬೆಳೆಸಿತ್ತು. ಹೀಗೆ 232 ಪ್ರಯಾಣಿಕರು & 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನ ತಮ್ಮ ಗುರಿ ತಲುಪುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡ ಏರ್ ಇಂಡಿಯಾ ವಿಮಾನ ಗಾಳಿಯಲ್ಲಿ ತೇಲುತ್ತಾ, ಅಲ್ಲಾಡಿ ಹೋಗಿದೆ. ನೋಡ ನೋಡುತ್ತಲೇ ಈ ವಿಮಾನವನ್ನ ತುರ್ತು ಅಂದ್ರೆ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪೈಲೆಟ್ ಮುಂದಾಗಿದ್ದಾರೆ...

58,000 ಲೀಟರ್ ಪೆಟ್ರೋಲ್ ಹೊಂದಿದ್ದ ವಿಮಾನ...
ಹೌದು, ಭಾರತದಲ್ಲಿ ಸಂಭವಿಸಿದ ಅತಿ ಘೋರ ವಿಮಾನ ದುರಂತಗಳ ಸಾಲಿಗೆ ಇಂದು ಮತ್ತೊಂದು ದುರಂತ ಸೇರ್ಪಡೆ ಆಗಿದೆ. ಲಂಡನ್ ಕಡೆಗೆ ಪ್ರಯಾಣ ಬೆಳೆಸುವ ವಿಮಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಅಗತ್ಯತೆ ಇರುತ್ತದೆ, ಹೀಗಾಗಿ ಸುಮಾರು 58,000 ಲೀಟರ್ ಪೆಟ್ರೋಲ್ ತುಂಬಿಸಲಾಗಿತ್ತು. ಆದರೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ ವೈಟ್ ಪೆಟ್ರೋಲ್ ಅಥವಾ ಶ್ವೇತ ಇಂಧನ ತುಂಬಿಸಿದ್ದ ಏರ್ ಇಂಡಿಯಾದ ಲಂಡನ್ ವಿಮಾನ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದೆ. ಹಾಗಾದ್ರೆ, ಈ ವಿಮಾನ ಕೆಳಗೆ ಬೀಳಲು ಕಾರಣ ಏನು?
ವಿಮಾನ ಪತನಕ್ಕೆ ಕಾರಣ ಏನು?
ಅಂದಹಾಗೆ ಗುಜರಾತ್ ರಾಜ್ಯದ ಅಹಮದಾಬಾದ್ ನಗರದಲ್ಲಿ ಇಂದು ಸಂಭವಿಸಿದ ಭೀಕರ ವಿಮಾನ ಅಪಘಾತಕ್ಕೆ ಸ್ಪಷ್ಟ ಕಾರಣ ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ ತಾಂತ್ರಿಕ ದೋಷ ಹಿನ್ನೆಲೆ ವಿಮಾನ ಕೆಲವು ವಾರಗಳ ಹಿಂದಷ್ಟೇ ರಿಪೇರಿ ಕೂಡ ಆಗಿತ್ತು ಎಂಬ ಮಾಹಿತಿ ಸಿಗುತ್ತಿದೆ. ಇದರ ಜೊತೆಗೆ ವಿಮಾನದಲ್ಲಿ ಭಾರಿ ಪ್ರಮಾಣದ ಪೆಟ್ರೋಲ್ ಇದ್ದ ಕಾರಣ ಇದೀಗ ದೊಡ್ಡ ಸ್ಫೋಟ ಸಂಭವಿಸಿ, ಜೀವ ಹಾನಿ ಕೂಡ ದೊಡ್ಡ ಮಟ್ಟದಲ್ಲೇ ಆಗಿದೆ ಎನ್ನಲಾಗುತ್ತಿದೆ. ತನಿಖೆ ಆರಂಭವಾಗಿ, ಅಧಿಕಾರಿಗಳು ಕೂಡ ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ. ಮತ್ತೊಂದು ಕಡೆ ವಿಮಾನದಲ್ಲಿ ಇದ್ದ 58,000 ಲೀಟರ್ ಪೆಟ್ರೋಲ್ ಒಂದೇ ಸಮಯಕ್ಕೆ ಹೊತ್ತಿ ಉರಿಯಲು ಶುರು ಮಾಡಿದ ಪರಿಣಾಮ ಜೀವಹಾನಿ ಮತ್ತಷ್ಟು ಹೆಚ್ಚಾಗಿರುವ ಆರೋಪ ಕೂಡ ಕೇಳಿ ಬಂದಿದೆ. ಸಂಪೂರ್ಣ ತನಿಖೆ ನಂತರ ಇನ್ನೇನು ಕೆಲವೇ ದಿನಗಳಲ್ಲಿ ಸ್ಪಷ್ಟ ಕಾರಣ ತಿಳಿಯುವ ಸಾಧ್ಯತೆ ಇದೆ.












Click it and Unblock the Notifications