ಭೀಕರ ವಿಮಾನ ಅಪಘಾತಕ್ಕೆ 200 ಜನರ ಜೀವ ಬಲಿ? Plane Crash

ವಿಮಾನ ಪ್ರಯಾಣ ಅಪಾಯಕಾರಿ ಅನ್ನೋ ಆರೋಪಗಳು ಪದೇ ಪದೇ ಕೇಳಿ ಬರುತ್ತಲೇ ಇರುತ್ತವೆ. ಆದರೆ ಅತಿ ವೇಗವಾಗಿ & ಬೇಗ ಹೋಗಲು ವಿಮಾನ ಪ್ರಯಾಣವನ್ನೇ ಜನರು ಬಳಕೆ ಮಾಡುತ್ತಾರೆ. ಅದರಲ್ಲೂ ಶ್ರೀಮಂತರು ವಿಮಾನ ಪ್ರಯಾಣಕ್ಕೆ ಒತ್ತು ನೀಡುತ್ತಾರೆ. ಹೀಗಿದ್ದಾಗ ಪದೇ ಪದೇ ವಿಮಾನ ಅಪಘಾತ ಸಂಭವಿಸಿ ಜನರಲ್ಲೂ ಭಯದ ವಾತಾವರಣ ಸೃಷ್ಟಿ ಆಗುತ್ತಿದೆ. ಇಂತಹ ಸಮಯದಲ್ಲೇ ಇಂದು ಭಾರತದ ಇತಿಹಾಸದಲ್ಲೇ ಘೋರ ವಿಮಾನ ದುರಂತ ಸಂಭವಿಸಿದ್ದು, ಭೀಕರ ವಿಮಾನ ಅಪಘಾತಕ್ಕೆ 200 ಜನರ ಜೀವ ಬಲಿ?

ಹೌದು, ಭಾರತದಲ್ಲಿ ಹಲವು ಭೀಕರ ವಿಮಾನ ದುರಂತಗಳು ಸಂಭವಿಸಿವೆ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಸುಮಾರು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ ಎಂಬ ಸುದ್ದಿ ಇದೀಗ ಎದೆ ನಡುಗಿಸಿ ಇಡೀ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಆಗುವಂತೆ ಮಾಡಿದೆ. ಹಾಗಾದ್ರೆ ಅಹಮದಾಬಾದ್ ನಗರದ ಘೋರ ವಿಮಾನ ದುರಂತದಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ? ಮುಂದೆ ಓದಿ.

Air India Flight to London Crashes During Takeoff Near Ahmedabad Airport

ವಿಮಾನ ದುರಂತಕ್ಕೆ 200 ಪ್ರಯಾಣಿಕರು ಬಲಿ?

ಜಗತ್ತಿನಲ್ಲಿ ಅತಿಹೆಚ್ಚು ದುಡ್ಡು ಕೊಟ್ಟು ಹೋಗುವ ಪ್ರಯಾಣ ಎಂದರೆ ಅದು ವಿಮಾನ ಪ್ರಯಾಣ. ಹೀಗಿದ್ದರೂ ವಿಮಾನ ಪ್ರಯಾಣದ ಸಮಯದಲ್ಲೇ ಸಾಲು ಸಾಲು ದುರಂತಗಳು ಸಂಭವಿಸಿ ಭಯದ ವಾತಾವರಣ ಇದೀಗ ಸೃಷ್ಟಿ ಆಗುತ್ತಿದೆ. ಅದರಲ್ಲೂ ಕರ್ನಾಟಕ ಸೇರಿದಂತೆ ಭಾರತದ ಹಲವು ನಗರಗಳ ವಿಮಾನ ನಿಲ್ದಾಣಗಳಲ್ಲಿ ವಿಮಾನ ದುರಂತ ಸಂಭವಿಸಿದ್ದವು. ಆದರೆ ಭಾರತದ ಇತಿಹಾಸದಲ್ಲೇ ಘೋರ ವಿಮಾನ ದುರಂತವು ಇಂದು ಸಂಭವಿಸಿದ್ದು, ಅಹಮದಾಬಾದ್ ನಗರದಲ್ಲಿ ಭೀಕರ ವಿಮಾನ ಅಪಘಾತಕ್ಕೆ 200 ಜನರ ಜೀವ ಬಲಿಯಾಗಿರುವ ಶಂಕೆ ಇದೀಗ ವ್ಯಕ್ತವಾಗಿದೆ...

232 ಪ್ರಯಾಣಿಕರು & 10 ಸಿಬ್ಬಂದಿ...

ಅಂದಹಾಗೆ 242 ಜನರನ್ನು ಹೊತ್ತ ಏರ್ ಇಂಡಿಯಾ ವಿಮಾನ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಏರ್ಪೋರ್ಟ್ ಮೂಲಕ ಲಂಡನ್ ಕಡೆಗೆ ಪ್ರಯಾಣ ಬೆಳೆಸಿತ್ತು. ಹೀಗೆ 232 ಪ್ರಯಾಣಿಕರು & 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನ ತಮ್ಮ ಗುರಿ ತಲುಪುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡ ಏರ್ ಇಂಡಿಯಾ ವಿಮಾನ ಗಾಳಿಯಲ್ಲಿ ತೇಲುತ್ತಾ, ಅಲ್ಲಾಡಿ ಹೋಗಿದೆ. ನೋಡ ನೋಡುತ್ತಲೇ ಈ ವಿಮಾನವನ್ನ ತುರ್ತು ಅಂದ್ರೆ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪೈಲೆಟ್ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ಕ್ರಾಶ್ ಲ್ಯಾಂಡ್ ಆಗಿರುವ ವಿಮಾನ ಸ್ಫೋಟಗೊಂಡಿದೆ ಎಂಬ ಮಾಹಿತಿ ಸಿಕ್ಕಿದ್ದು, ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+