ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯುಪಡೆ ನೂತನ ಮುಖ್ಯಸ್ಥರಾಗಿ ವಿ. ಆರ್‌. ಚೌಧರಿ ಅಧಿಕಾರ ಸ್ವೀಕಾರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 30: ಯುದ್ಧ ವಿಮಾನ ಪೈಲಟ್‌ ಏರ್‌ ಚೀಫ್‌ ಮಾರ್ಷಲ್‌ ವಿವೇಕ್‌ ರಾಮ್‌ ಚೌಧರಿ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿವೇಕ್‌ ರಾಮ್‌ ಚೌಧರಿ ಚೀನಾದೊಂದಿಗೆ ಲಡಾಖ್‌ ಗಡಿ ಘರ್ಷಣೆಯ ಸಂದರ್ಭದಲ್ಲಿ ಲಡಾಖ್‌ ವಲಯದಲ್ಲಿ ವಾಯುಪಡೆ ಉಸ್ತುವಾರಿ ವಹಿಸಿಕೊಂಡಿದ್ದರು.

ಸೆಪ್ಟೆಂಬರ್‌ 30 ರಂದು ಏರ್‌ ಚೀಫ್‌ ಮಾರ್ಷಲ್‌ ಆರ್‌ ಕೆ ಭದೌರಿಯಾ ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆ ಈಗ ಯುದ್ಧ ವಿಮಾನ ಪೈಲಟ್‌ ಏರ್‌ ಚೀಫ್‌ ಮಾರ್ಷಲ್‌ ವಿವೇಕ್‌ ರಾಮ್‌ ಚೌಧರಿ ಅವರನ್ನು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ವಿ.ಆರ್. ಚೌಧರಿ ನೇಮಕಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ವಿ.ಆರ್. ಚೌಧರಿ ನೇಮಕ

ಈ ಬಗ್ಗೆ ರಕ್ಷಣಾ ಸಚಿವಾಲಯವು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿತ್ತು. "ಏರ್‌ ಚೀಫ್‌ ಮಾರ್ಷಲ್‌ ಆರ್‌ ಕೆ ಭದೌರಿಯಾ ಸೆಪ್ಟೆಂಬರ್‌ 30 ರಂದು ನಿವೃತ್ತಿ ಹೊಂದಿದ ಬಳಿಕ ಭಾರತೀಯ ವಾಯುಪಡೆ ಮುಖ್ಯಸ್ಥರಾಗಿ ವಿ. ಆರ್‌. ಚೌಧರಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿದೆ," ಎಂದು ತಿಳಿಸಿತ್ತು.

Air Chief Marshal VR Choudhary takes charge as IAF chief

ಏರ್‌ ಮಾರ್ಷಲ್‌ ಚೌಧರಿ 1982 ರ ಡಿಸೆಂಬರ್‌ 29 ರಂದು ಭಾರತೀಯ ವಾಯುಪಡೆಯ ಫೈಟರ್‌ ಸ್ಟ್ರೀಮ್‌ಗೆ ನಿಯೋಜನೆಗೊಂಡಿದ್ದಾರೆ. ಈವರೆಗೂ ಏರ್‌ ಮಾರ್ಷಲ್‌ ಚೌಧರಿ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ಆರ್‌ ಕೆ ಭದೌರಿಯಾರಿಂದ ವಿ. ಆರ್‌. ಚೌಧರಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ಆರ್‌ ಕೆ ಭದೌರಿಯಾ ತನ್ನು 42 ವರ್ಷದ ಸುದೀರ್ಘ ಸೇವಾವಧಿ ಬಳಿಕ ನಿವೃತ್ತಿ ಹೊಂದಿದ್ದಾರೆ. ಭದೌರಿಯಾ ಅಧಿಕಾರದಲ್ಲಿ 36 ರಫೇಲ್‌ ಯುದ್ಧ ವಿಮಾನಗಳು ಹಾಗೂ 83 ಮಾರ್ಚ್ 1 ಎ ಸ್ವದೇಶಿ ತೇಜಸ್‌ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು ಇಂದು ಅಧಿಕಾರ ವಹಿಸಿಕೊಂಡಿರುವ ವಿ. ಆರ್‌. ಚೌಧರಿ ಅವರು, ಚೀನಾದೊಂದಿಗೆ ಈ ಗಡಿ ಸಂಘರ್ಷ ಮುಂದಿರುವ ಸಂದರ್ಭದಲ್ಲಿ ಹಾಗೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

ಶಾಕಿಂಗ್: ಅಫ್ಘಾನ್ ಪಾಸ್‌ಪೋರ್ಟ್‌ ಜೊತೆ ಭಾರತೀಯ ವೀಸಾ ಕದ್ದ ಐಎಸ್ಐ!ಶಾಕಿಂಗ್: ಅಫ್ಘಾನ್ ಪಾಸ್‌ಪೋರ್ಟ್‌ ಜೊತೆ ಭಾರತೀಯ ವೀಸಾ ಕದ್ದ ಐಎಸ್ಐ!

ರಷ್ಯಾದಿಂದ ಎಸ್‌-400 ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಇನ್ನು ದೇಶದ ವಾಯುಪಡೆಗೆ ಸದ್ಯದಲ್ಲೇ ಸೇರ್ಪಡೆಯಾಗಲಿದ್ದು, ಇದರ ಕಾರ್ಯನಿರ್ವಹಣೆಯ ಜವಾಬ್ದಾರಿ ಕೂಡಾ ವಿ. ಆರ್‌. ಚೌಧರಿ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಭಾರತೀಯ ವಾಯುಪಡೆಗೆ ಸೇರಲಿರುವ ಯುದ್ಧ ವಿಮಾನಗಳ ಆಧುನೀಕರಣವನ್ನು ಮಾಡುವ ಜವಾಬ್ದಾರಿಯನ್ನು ಕೂಡಾ ಹೊಂದಿದ್ದಾರೆ. ಇನ್ನು ನೂತನ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿವೇಕ್‌ ರಾಮ್‌ ಚೌಧರಿ ಅವರ ಪುತ್ರ ರಫೇಲ್‌ ಯುದ್ಧ ವಿಮಾನ ಪೈಲಟ್‌ ಆಗಿದ್ದಾರೆ. ಭಾರತೀಯ ವಾಯುಪಡೆಗೆ ರಷ್ಯಾದ ರಫೇಲ್‌ ಯುದ್ಧ ವಿಮಾನಗಳು ಸೇರ್ಪಡೆಗೆ ಸಹಾಯ ಮಾಡಿದ್ದಾರೆ.

ಭಾರತೀಯ ವಾಯುಪಡೆಯ ಫೈಟರ್‌ ಸ್ಟ್ರೀಮ್‌ಗೆ ಏರ್‌ ಮಾರ್ಷಲ್‌ ಚೌಧರಿ 1982 ರ ಡಿಸೆಂಬರ್‌ 29 ರಂದು ನಿಯೋಜನೆಯಾದ ಏರ್‌ ಚೀಫ್‌ ಮಾರ್ಷಲ್‌ ವಿವೇಕ್‌ ರಾಮ್‌ ಚೌಧರಿ ಯುದ್ಧ ಹಾಗೂ ತರಬೇತಿ ವಿಮಾನದಲ್ಲಿ ಸುಮಾರು 3,800 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿರುವ ಅನುಭವನ್ನು ಹೊಂದಿರುವವರು ಆಗಿದ್ದಾರೆ. ಹಾಗೆಯೇ 1980ರಲ್ಲಿ ಸಿಯಾಚಿನ್‌ ಕಣಿವೆಯಲ್ಲಿನ ಆಪರೇಷನ್‌ ಮೇಘದೂತ ಹಾಗೂ 1999ರಲ್ಲಿ ನಡೆದ ಆಪರೇಷನ್‌ ಸಫೇದ್‌ ಸಾಗರ್‌ನಲ್ಲಿ ವಿವೇಕ್‌ ರಾಮ್‌ ಚೌಧರಿ ಭಾಗಿಯಾಗಿದ್ದಾರೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್‌ ಕಾಲೇಜು ವೆಲ್ಲಿಂಗ್ಟನ್‌ನ ವಿದ್ಯಾರ್ಥಿಯಾಗಿರುವ ಚೌಧರಿ ಹಲವಾರು ಫೈಟರ್‌ ಸ್ಕ್ವಾಡ್ರನ್‌ ಮತ್ತು ಫೈಟರ್‌ ಬೇಸ್‌ನಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ ಹಲವಾರು ಸ್ಥಾನಗಳನ್ನು ವಹಿಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಈವರೆಗೂ ಏರ್‌ ಮಾರ್ಷಲ್‌ ಚೌಧರಿ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ವಾಯು ಸಿಬ್ಬಂದಿ ಕಾರ್ಯಾಚರಣೆಗಳ ಸಹಾಯಕ ಮುಖ್ಯಸ್ಥರು (ವಾಯು ರಕ್ಷಣಾ) ಮತ್ತು ಸಹಾಯಕ ವಾಯು ಸಿಬ್ಬಂದಿ (ಸಿಬ್ಬಂದಿ ಅಧಿಕಾರಿಗಳು) ಆಗಿಯೂ ಸೇವೆ ಸಲ್ಲಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Air Chief Marshal VR Choudhary takes over as new IAF chief from RKS Bhadauria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X