ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ ಸುದ್ಧಿ: ಏರ್ ಏಷಿಯಾ ವಿಮಾನಗಳಲ್ಲಿ ಹೆಚ್ಚುವರಿ ಸಾಮಗ್ರಿ ಸಾಗಾಟಕ್ಕೆ ಅನುಮತಿ

|
Google Oneindia Kannada News

ನವದೆಹಲಿ, ನವೆಂಬರ್ 2: ಏರ್ ಏಷಿಯಾ ವಿಮಾನಯಾನ ಸಂಸ್ಥೆಯು ತಮ್ಮ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೆಚ್ಚುವರಿ ಶುಲ್ಕ ಪಾವತಿಸಲು ಸಿದ್ಧರಿದ್ದಲ್ಲಿ 3 ರಿಂದ 5 ಕೆಜಿವರೆಗೆ ಹೆಚ್ಚುವರಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ ವಿಮಾನಯಾನ ಸಂಸ್ಥೆಯು ಅನುಮತಿ ನೀಡಿದೆ.

ಹೆಚ್ಚುವರಿಯಾಗಿ 3 ಕೆಜಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ 600 ರೂಪಾಯಿ ಹಾಗೂ 5 ಕೆಜಿ ಹೆಚ್ಚುವರಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ 1,000 ರೂಪಾಯಿ ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕು ಎಂದು ಸಂಸ್ಥೆಯು ತಿಳಿಸಿದೆ.

ಖಾಸಗೀಕರಣ ಮಂತ್ರ: ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಪಟ್ಟಿ ರೆಡಿಖಾಸಗೀಕರಣ ಮಂತ್ರ: ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಪಟ್ಟಿ ರೆಡಿ

ಇಲ್ಲಿಯವರೆಗೆ ಏರ್ ಏಷಿಯಾ ಇಂಡಿಯಾ ವಿಮಾನಗಳಲ್ಲಿ ಹೆಚ್ಚುವರಿ ಕ್ಯಾಬಿನ್ ಸಾಮಾನುಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅವಕಾಶವಿರಲಿಲ್ಲ. ಅದರ ಬದಲಿಗೆ ಇತರ ದೇಶೀಯ ವಿಮಾನಗಳ ರೀತಿಯಲ್ಲಿ ತನ್ನ ಪ್ರಯಾಣಿಕರಿಗೆ 7 ಕೆಜಿ ತೂಕದ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲು ಅವಕಾಶ ನೀಡುತ್ತಿತ್ತು.

Air asia Airlines now Allows Passengers to Carry Extra Cabin Baggage

ಹೊಸ ಸೇವೆ ಆರಂಭಿಸಿದ ಏರ್ ಏಷಿಯಾ:

ಏರ್ ಏಷಿಯಾ ಆರಂಭಿಸಿರುವ ಹೊಸ ಸೇವೆಯಾದ 'ಕ್ಯಾರಿ ಆನ್ ಎಕ್ಸ್‌ಟ್ರಾ' ಅಡಿಯಲ್ಲಿ ಒಬ್ಬ ಪ್ರಯಾಣಿಕನು 600 ರೂಪಾಯಿ ಶುಲ್ಕವನ್ನು ಪಾವತಿಸಿದರೆ 10 ಕೆಜಿ ತೂಕದ ಕ್ಯಾಬಿನ್ ಬ್ಯಾಗ್ ಅನ್ನು ಸಾಗಿಸಲು ಸಾಧ್ಯವಾಗುತ್ತದೆ. ಪ್ರಯಾಣಿಕರು 12 ಕೆಜಿ ತೂಕದ ಕ್ಯಾಬಿನ್ ಬ್ಯಾಗ್ ಅನ್ನು ಸಾಗಿಸಲು ಬಯಸಿದರೆ, ಅವರು 1,000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಏರ್‌ಲೈನ್ಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಯಾರಿ ಆನ್ ಎಕ್ಸ್ ಟ್ರಾ ಉಪಯೋಗವೇನು?:

"ಕ್ಯಾರಿ ಆನ್ ಎಕ್ಸ್ಟ್ರಾ ಯೋಜನೆಯಿಂದಾಗಿ ಪ್ರಯಾಣಿಕರ ಪ್ರಮುಖ ದಾಖಲೆಗಳು ಮತ್ತು ಇತರ ವಸ್ತುಗಳನ್ನು ತಮ್ಮೊಂದಿಗೆ ವಿಮಾನದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಸಿಕ್ಕಂತೆ ಆಗುತ್ತದೆ. ಇದರ ಜೊತೆಗೆ ಪ್ರವೇಶ ಮತ್ತು ನಿರ್ಗಮನ ಸ್ಥಾನದಲ್ಲಿ ಪ್ರತ್ಯೇಕವಾಗಿ ಸಮಾನು ಸರಂಜಾಮುಗಳ ಚೆಕ್ ಇನ್ ಮಾಡಿಸಿಕೊಳ್ಳುವುದಕ್ಕೆ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ," ಎಂದು ಸಂಸ್ಥೆಯು ತಿಳಿಸಿದೆ.

English summary
Good News: Air asia Airlines now Allows Passengers to Carry Extra Cabin Baggage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X