ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಪ್ಪಾಡಿ ಪಳನಿಸ್ವಾಮಿ ಸೇರಿ ಎಐಎಡಿಎಂಕೆ ನಾಯಕರ ಬಂಧನ

|
Google Oneindia Kannada News

ಚೆನ್ನೈ, ಅಕ್ಟೋಬರ್‌ 19: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬುಧವಾರದಂದು ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಕ್ಕಾಗಿ ಅವರ ಬೆಂಬಲಿಗರೊಟ್ಟಿಗೆ ಪೊಲೀಸರು ಬಂಧಿಸಿದ್ದಾರೆ.

ಎಐಎಡಿಎಂಕೆಯ ಇಪಿಎಸ್ ಬಣ ಮಂಗಳವಾರ ತಮಿಳುನಾಡು ವಿಧಾನಸಭೆಯಿಂದ ಉಚ್ಚಾಟನೆಗೊಂಡಿದ್ದು ಮತ್ತು ಸ್ಪೀಕರ್ ಒ ಪನ್ನೀರಸೆಲ್ವಂ ಅವರನ್ನು ಉಪ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸದಿರುವುದಕ್ಕೆ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಇದಾದ ಬಳಿಕ ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಪಿಎಸ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದಿದ್ದಾರೆ. ಅವರನ್ನು ರಾಜರತ್ನಂ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು ಎಂದು ಬಂಧಿತ ನಾಯಕರೊಬ್ಬರು ಹೇಳಿದರು.

ತಮಿಳುನಾಡು ವಿಧಾನಸಭೆ ಗದ್ದಲ: ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಶಾಸಕರ ಉಚ್ಚಾಟನೆತಮಿಳುನಾಡು ವಿಧಾನಸಭೆ ಗದ್ದಲ: ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಶಾಸಕರ ಉಚ್ಚಾಟನೆ

ಪ್ರತಿಭಟನೆಗೆ ಮುನ್ನ ಅನುಮತಿ ಪಡೆಯದ ಕಾರಣ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಎಐಎಡಿಎಂಕೆ ನಾಯಕರಲ್ಲಿ ಒಬ್ಬರಾದ ಗೋಕುಲ ಇಂದ್ರ, ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಮತ್ತು ನಾವು ಶಾಂತಿಯುತ ಪ್ರತಿಭಟನೆಯನ್ನು ಮಾತ್ರ ಮಾಡಲು ಬಯಸಿದ್ದೇವೆ. ನಾವು ಉಪವಾಸ ಸತ್ಯಾಗ್ರಹವನ್ನು ಮಾಡಲು ಬಯಸಿದ್ದೆವು. ಆದರೆ ಅದಕ್ಕೆ ಅನುಮತಿ ನೀಡಲಾಗಿಲ್ಲ ಮತ್ತು ಅವರು ತಮ್ಮ ಕಡೆಯಿಂದ ಹಲವಾರು ತಪ್ಪುಗಳನ್ನು ಮಾಡುತ್ತಾ ಇನ್ನೂ ನಮ್ಮ ಮೇಲೆ ಈ ರೀತಿಯ ದೌರ್ಜನ್ಯಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಪಿಎಸ್ ಮತ್ತು ಅವರ ಬಣ ಹೊರಕ್ಕೆ

ಇಪಿಎಸ್ ಮತ್ತು ಅವರ ಬಣ ಹೊರಕ್ಕೆ

ಎಐಎಡಿಎಂಕೆ ನಾಯಕ ಡಿ ಜಯಕುಮಾರ್, ನಮ್ಮನ್ನು ರಾಜರತ್ನಂ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗುತ್ತಿದೆ. ಸರ್ಕಾರ ಸಂಪೂರ್ಣವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಿದೆ. ಮಂಗಳವಾರ ಇಪಿಎಸ್ ಮತ್ತು ಅವರ ಬಣದ ಸದಸ್ಯರನ್ನು ವಿಧಾನಸಭೆಯಿಂದ ಹೊರಹಾಕಲಾಯಿತು. ಸ್ಪೀಕರ್ ಅಪ್ಪಾವು, ಹಿಂದಿ ವಿರುದ್ಧ ನಿರ್ಣಯ ಮಂಡಿಸಿದಾಗ ತಾನು ಮತ್ತು ತನ್ನ ಕಾರ್ಯಕರ್ತರು ಇರದಂತೆ ಇಪಿಎಸ್ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಡಿಎಂಕೆಯ ಸಲಹೆ ಮೇಲೆ ಸ್ಫೀಕರ್‌ ಕೆಲಸ

ಡಿಎಂಕೆಯ ಸಲಹೆ ಮೇಲೆ ಸ್ಫೀಕರ್‌ ಕೆಲಸ

ನಿನ್ನೆ ವಿಧಾನಸಭೆಯಿಂದ ಉಚ್ಛಾಟನೆಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಪಿಎಸ್, ಉಪವಿಪಕ್ಷ ನಾಯಕ ಸ್ಥಾನದಿಂದ ಒಪಿಎಸ್ ಅವರನ್ನು ವಜಾಗೊಳಿಸಿದ್ದು, ಆರ್.ಬಿ.ಉದಯಕುಮಾರ್ ಅವರ ಸ್ಥಾನಕ್ಕೆ ಎಐಎಡಿಎಂಕೆ ಸ್ಪೀಕರ್‌ಗೆ ಪತ್ರ ರವಾನಿಸಿದೆ. ಬಹುಮತದ ಎಐಎಡಿಎಂಕೆಯ ಆದೇಶವನ್ನು ಸ್ಪೀಕರ್ ಪಾಲಿಸಿಲ್ಲ ಎಂದು ಇಪಿಎಸ್ ಹೇಳಿಕೊಂಡಿದೆ ಮತ್ತು ಆಡಳಿತಾರೂಢ ಡಿಎಂಕೆಯ ಸಲಹೆಗಳ ಆಧಾರದ ಮೇಲೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂರು ತಿಂಗಳ ಹಿಂದೆಯೇ ಮನವಿ

ಮೂರು ತಿಂಗಳ ಹಿಂದೆಯೇ ಮನವಿ

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಎಐಎಡಿಎಂಕೆಯನ್ನು ಒಡೆಯುವ ಆಲೋಚನೆ ಫಲಿಸುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ. ನಮ್ಮ ನೂತನ ವಿಧಾನಸಭಾ ಉಪನಾಯಕ ಆರ್.ಬಿ.ಉದಯಕುಮಾರ್ ಅವರನ್ನು ಪರಿಗಣಿಸಿ ತಮಿಳುನಾಡು ವಿಧಾನಸಭೆಯಲ್ಲಿ ಸ್ಥಾನ ನೀಡುವಂತೆ ಮೂರು ತಿಂಗಳ ಹಿಂದೆಯೇ ಸ್ಪೀಕರ್ ಎಂ.ಅಪ್ಪಾವು ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೆವು. ಆದರೆ ಅವರು ಅದನ್ನು ಪರಿಗಣಿಸಿಲ್ಲ. ವಿಧಾನಸಭೆಯಲ್ಲಿ ಸ್ಥಾನ ಹಂಚಿಕೆ ಜಾಗದಲ್ಲಿ ಅನ್ಯಾಯ ಮಾಡಲಾಗಿದೆ. ಅವರು ಸ್ಪೀಕರ್ ಆಗಿ ವರ್ತಿಸುತ್ತಿಲ್ಲ ಮತ್ತು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಪಳನಿಸ್ವಾಮಿ ಹೇಳಿದರು.

ಉಪನಾಯಕ ಸ್ಥಾನ ನೀಡಲು ಕಾನೂನು ಇಲ್ಲ

ಉಪನಾಯಕ ಸ್ಥಾನ ನೀಡಲು ಕಾನೂನು ಇಲ್ಲ

ಶಾಸಕರ ಬೆಂಬಲ ಮುಖ್ಯವಾಗಿದ್ದು, ಅವರ ಸಂಖ್ಯೆಗೆ ಅನುಗುಣವಾಗಿ ಮಾತ್ರ ಸೀಟು ಹಂಚಿಕೆಯಾಗಬೇಕು. ಆದರೆ, ಉಪನಾಯಕ ಸ್ಥಾನ ನೀಡಲು ವಿಧಾನಸಭೆಯಲ್ಲಿ ಕಾನೂನು ಇಲ್ಲ ಎಂದು ಸ್ಪೀಕರ್ ಹೇಳುತ್ತಿದ್ದು, ಅದಕ್ಕೆ ಕಾನೂನು ಇರುವುದರಿಂದ ಅವರ ನಿರ್ಧಾರ ತಪ್ಪಾಗಿದೆ. ಡಿಎಂಕೆ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಡಿ ಜಯಕುಮಾರ್ ಸೇರಿದಂತೆ ಎಐಎಡಿಎಂಕೆ ಕಾರ್ಯಕರ್ತರ ಹಲವಾರು ಕಾರ್ಯಕರ್ತರನ್ನು ತಮಿಳುನಾಡು ಪೊಲೀಸರು ಬಂಧಿಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಹೇಳಿದರು.

ಜಯಲಲಿತಾ ಸಾವು ಪ್ರಕರಣ: ಎಲ್ಲಾ ವಿಚಾರಣೆಗಳನ್ನು ಎದುರಿಸಲು ಸಿದ್ಧ ಎಂದ ಶಶಿಕಲಾಜಯಲಲಿತಾ ಸಾವು ಪ್ರಕರಣ: ಎಲ್ಲಾ ವಿಚಾರಣೆಗಳನ್ನು ಎದುರಿಸಲು ಸಿದ್ಧ ಎಂದ ಶಶಿಕಲಾ

English summary
All India Anna Dravida Munnetra Kalagam (AIADMK) leader Edappadi Palaniswami was arrested by the police along with his supporters for staging a hunger strike in Chennai's Valluvar Kottam on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X