ವಿಮಾನ ದುರಂತದಲ್ಲಿ ಯಾರೂ ಬದುಕಿ ಉಳಿದಿಲ್ಲ: 242 ಮಂದಿಯ ಸಾವನ್ನು ಖಚಿತಪಡಿಸಿದ ಅಹಮದಾಬಾದ್ ಪೊಲೀಸರು
Ahmedabad Plane Crash: ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಯಾರೂ ಬದುಕಿ ಉಳಿದಿಲ್ಲ. ವಿಮಾನವು ಹಾಸ್ಟೇಲ್ ಒಳಗೆ ನುಗ್ಗಿದ್ದರಿಂದ ಕೆಲ ಸ್ಥಳೀಯರು ಸಾವನ್ನಪ್ಪಿರಬಹುದು ಎಂದು ನಗರ ಪೊಲೀಸ್ ಆಯುಕ್ತ ಜಿಎಸ್ ಮಲಿಕ್ ಅವರು 'ದಿ ಅಸೋಸಿಯೇಟೆಡ್ ಪ್ರೆಸ್'ಗೆ ಮಾಹಿತಿ ನೀಡಿದ್ದಾರೆ.
ಅಪಘಾತಕ್ಕೀಡಾದ ವಿಮಾನವು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೊಳಗಾಯಿತು. ವಿಮಾನದಲ್ಲಿ 240ಕ್ಕೂ ಹೆಚ್ಚು ಜನ ಇದ್ದರು. ಇದು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಲಿತ್ತು ಎಂಬ ಮಾಹಿತಿಯನ್ನು ಪೊಲೀಸ್ ಆಯುಕ್ತರು ಹಂಚಿಕೊಂಡಿದ್ದಾರೆ.

ಈ ಭೀಕರ ವಿಮಾನ ದುರಂತದಲ್ಲಿ ಯಾರೋಬ್ಬರೂ ಬದುಕಿ ಉಳಿದಿರವ ಸಾಧ್ಯತೆ ಇಲ್ಲ ಅಂತ ಕಮಿಷನರ್ ಹೇಳಿದ್ದಾರೆ. ಮುಂದುವರಿದು ಈ ವಿಮಾನವು ಜನವಸತಿ ಹಾಗೂ ಕಚೇರಿಗಳಿರುವ ವಸತಿ ಪ್ರದೇಶದಲ್ಲಿ ಪತನವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅಲ್ಲದೇ ಕೆಲವು ಸ್ಥಳೀಯರು ಸಹ ಇದರಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಆದರೆ ಸಾವು - ನೋವಿಗೆ ಸಂಬಂಧಿಸಿದ ನಿಖರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ ಎಂದು ಅವರು ಹೇಳಿದ್ದಾರೆ. ಇನ್ನು ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಕೆಲವೇ ಕ್ಷಣಗಳಲ್ಲಿ 240 ಕ್ಕೂ ಹೆಚ್ಚು ಜನರಿದ್ದ ವಿಮಾನ ಅಪಘಾತಕ್ಕೆ ಒಳಗಾಗಿದೆ. ಹಾಸ್ಟಲ್‌ನ ಮೇಲೆ ಬಿದ್ದಿರುವುದರಿಂದ ಹಾಸ್ಟಲ್‌ನ ಹಲವು ವಿದ್ಯಾರ್ಥಿಗಳೂ ಸಹ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪೈಲೆಟ್ ಹೇಳಿದ್ದೇನು ?
ಗುಜರಾತ್‌ನ ಅಹ್ಮದಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗಿ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ಇದಕ್ಕೂ ಮುಂಚೆ ಪೈಲಟ್ ತುರ್ತು ಕರೆ ಮಾಡಿದ್ದರು ಎಂದು ಹೇಳಲಾಗಿದೆ. ಇದು ನನ್ನ ಕೊನೆಯ ಕಾಲ್. ನನ್ನಿಂದ ಏನನ್ನು ಮಾಡಲು ಸಾಧ್ಯವಿಲ್ಲ ನಾನು ಕ್ರ್ಯಾಷ್ ಲ್ಯಾಂಡಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಿದೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಟ್ವೀಟ್: ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಅಹಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ (AI-171) ದುರಂತವು ನನಗೆ ತೀವ್ರ ಆಘಾತ, ದಿಗ್ಭ್ರಮೆ ಉಂಟು ಮಾಡಿದೆ. ಅತ್ಯಂತ ಹೃದಯವಿದ್ರಾವಕವಾದ ಈ ದುರ್ಘಟನೆಯಲ್ಲಿ ಅಸುನೀಗಿದ ಪ್ರಯಾಣಿಕರ ಕುಟುಂಬಗಳಿಗೆ ನನ್ನ ದುಃಖತಪ್ತ ಸಂತಾಪಗಳು. ದೇವರ ದಯೆಯಿಂದ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications