Vijay Rupani: ಅಹಮದಬಾದ್ ವಿಮಾನ ದುರಂತ; ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ
Ahmedabad Plane Crash: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ AI-171 ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ (ಜೂನ್ 12) ಪತನವಾಗಿತ್ತು. ಈ ವೇಳೆ 242ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ಈ ದುರಂತ ಇಡೀ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಇನ್ನೂ ಸಾವನ್ನಪ್ಪಿದವರ ಪೈಕಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್‌ಎ ಹೋಲಿಕೆಯಾಗಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ಜೂನ್ 15) ದೃಢಪಡಿಸಿದರು.
ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಅವರು ಸಹ ಸಾವನ್ನಪ್ಪಿದ್ದರು. ಇದೀಗ ಇಂದು (ಜೂನ್ 15) ಬೆಳಗ್ಗೆ 11:10ರ ಸುಮಾರಿಗೆ ಅವರ ಡಿಎನ್‌ಎ ಹೊಂದಾಣಿಕೆ ಆಗಿದೆ. ಅಲ್ಲದೆ, ಅವರು ಹಲವು ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸ ಮಾಡಿದರು ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ.

ಅವರ ಪಾರ್ಥಿವ ಶರೀರದ ಸಾಗಣೆ ಮಾಡಲು ಮಾಜಿ ಸಿಎಂ ವಿಜಯ್ ರೂಪಾನಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ನೆರೆದಿದ್ದು, ಇಂದೇ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಈ ದುತರಂತದಲ್ಲಿ ಸಾವನ್ನಪ್ಪಿದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹವನ್ನು ಕೆಲವು ದಿನಗಳ ನಂತರ ಗುರುತಿಸಲಾಗಿದೆ. ದುರಂತದ ಸಮಯದಲ್ಲಿ ಪ್ರಯಾಣಿಕರೆಲ್ಲ ಮೃತಪಟ್ಟಿದ್ದು, ಅವರ ಮೃತದೇಹಗಳು ಗುರುತಿಸದಂತೆ ಆಗಿದ್ದವು. ಆದ್ದರಿಂದ ಡಿಎನ್‌ಎ ಅನ್ನು ನಡೆಸಲಾಗುತ್ತಿದ್ದು, ಇದರಿಂದ ಗುರುತು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ.
ವಿಜಯ್ ರೂಪಾನಿ ಯಾರು?: ವಿಜಯ್ ರೂಪಾನಿ ಒಬ್ಬ ಭಾರತೀಯ ರಾಜಕಾರಣಿ ಆಗಿದ್ದು, ಅವರು ಆಗಸ್ಟ್ 2016ರಿಂದ ಸೆಪ್ಟೆಂಬರ್ 2021ರ ವರೆಗೆ ಗುಜರಾತ್‌ನ 16ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 1996-1997ರ ವರೆಗೆ ರಾಜ್‌ಕೋಟ್‌ನ ಮೇಯರ್, ರಾಜ್ಯಸಭೆಯಲ್ಲಿ ಸಂಸತ್ ಸದಸ್ಯ (2006-2012) ಹಾಗೂ ಹಲವು ಖಾತೆಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದವರಾಗಿದ್ದಾರೆ. ಗುಜರಾತ್ ವಿಧಾನಸಭೆಯಲ್ಲಿ ರಾಜ್‌ಕೋಟ್ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಮತ್ತು ಮುಖ್ಯಮಂತ್ರಿ ಆಗುವ ಮೊದಲು ಗುಜರಾತ್ ಬಿಜೆಪಿಯ ಅಧ್ಯಕ್ಷರೂ ಆಗಿದ್ದರು.
ವಿಮಾನವು ಮೇಘನಿ ನಗರ ಬಳಿ ಪತನ ಆಗಿದ್ದು, ಆ ಪ್ರದೇಶದಲ್ಲಿ ಭೀತಿಯನ್ನುಂಟು ಮಾಡಿದೆ. ಇನ್ನು ವಿಮಾನ ಪತನವಾದ ಪ್ರದೇಶದ ಸುತ್ತಮುತ್ತ ದಟ್ಟವಾದ ಕಪ್ಪು ಹೊಗೆ ಆವರಿಸಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದ್ದವು. ಇದು ವಿಮಾನ ನಿಲ್ದಾಣದ ಆವರಣದ ಸಮೀಪದಲ್ಲಿ ಸಂಭವಿಸಿದ್ದು, ಅಲ್ಲಿನ ಸ್ಥಳೀಯರ ಮಾಹಿತಿ ಮೇರೆ ಘಟನಾ ಸ್ಥಳಕ್ಕೆ ಆಗಮನಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕೆಲಸವನ್ನು ಮಾಡಿತ್ತು.












Click it and Unblock the Notifications