ಬುಲೆಟ್ ಟ್ರೈನ್ ಯೋಜನೆ: ತಿಳಿಯಬೇಕಾದ 10 ಸಂಗತಿ

Posted By:
Subscribe to Oneindia Kannada

ಅಹಮದಾಬಾದ್, ಸೆಪ್ಟೆಂಬರ್ 14: ಭಾರತದ ಮೊಟ್ಟಮೊದಲ ಬುಲೆಟ್ ಟ್ರೈನ್ ಗೆ ಇಂದು(ಸೆ.14) ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಶಂಕು ಸ್ಥಾಪನೆ ನೆರವೇರಿಸಿದ್ದಾಗಿದೆ. 2023 ರ ಹೊತ್ತಿಗೆ ಬುಲೆಟ್ ಟ್ರೈನ್ ಕಾರ್ಯಾರಂಭವೂ ಆಗಲಿದೆ.

ಆಧುನಿಕ ತಂತ್ರಜ್ಞಾನದ ಬುಲೆಟ್ ಟ್ರೈನ್ ಗಳು ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಲಿವೆ. ಶ್ರೀಮಂತ ರಾಷ್ಟ್ರ ಜಪಾನ್, ಭಾರತಕ್ಕೆ ಯಾವುದೇ ರೀತಿಯ ಸಹಕಾರವನ್ನಾದರೂ ನೀಡುವುದಾಗಿ ಭರವಸೆ ನೀಡಿರುವುದು ಭಾರತಕ್ಕೆ ಆನೆಬಲಬಂದಂತಾಗಿದೆ.

ಮುಂಬೈ ಮತ್ತು ಅಹಮದಾಬಾದ್ ನಡುವಿನ ಈ ಬುಲೆಟ್ ಟ್ರೈನ್ ಯೋಜನೆಯ ಶಂಕುಸ್ಥಾಪನೆಯ 10 ಹೈಲೈಟ್ಸ್ ಇಲ್ಲಿವೆ.

ಭಾರತವನ್ನು ಶ್ಲಾಘಿಸಿದ ಶಿಂಬೋ

ಭಾರತವನ್ನು ಶ್ಲಾಘಿಸಿದ ಶಿಂಬೋ

'ನಮಸ್ಕಾರ್' ಎಂದು ಹಿಂದಿಯಲ್ಲೇ ಮಾತು ಆರಂಭಿಸಿದ ಜಪಾನ್ ಪ್ರಧಾನಿ ಶಿಂಬೋ ಅಬೆ, 'ಬಲಾಡ್ಯ ಭಾರತ ಜಪಾನಿಗೂ, ಬಲಾಡ್ಯ ಜಪಾನ್ ಭಾರತಕ್ಕೂ ಅತ್ಯಗತ್ಯ' ಎಂದರು. ಸಾಬರಮತಿಯಲ್ಲಿ ಬುಲೆಟ್ ಟ್ರೈನ್ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ ಅವರು ಭಾರತವೆಂದರೆ ತನಗೆ ಬಹಳ ಇಷ್ಟವೆಂದು ಕೊಂಡಾಡಿದರು. ಕೊನೆಗೆ 'ಧನ್ಯವಾದ್' ಎನ್ನುವ ಮೂಲಕ ಮಾತು ಮುಗಿಸಿದರು.

ಜಪಾನ್ ಇಂಡಿಯಾ ಸೇರಿದರೆ 'ಜೈ'

ಜಪಾನ್ ಇಂಡಿಯಾ ಸೇರಿದರೆ 'ಜೈ'

ಭಾರತ ಭೇಟಿಯ ಸಂತಸವನ್ನು ವ್ಯಕ್ತಪಡಿಸಿದ ಅಬೆ, ಭಾರತ ಮತ್ತು ಜಪಾನ್ ಸೇರಿ ಅದ್ಭುತವನ್ನು ಸಾಧಿಸಬಹುದು. ಜಪಾನ್ 'Ja' ಮತ್ತು ಭಾರತದ 'I' ಸೇರಿದರೆ 'ಜೈ' ಆಗುತ್ತದೆ ಎನ್ನುವ ಮೂಲಕ ಭಾರತದ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ದೊಡ್ಡ ಕನಸಿನ ಸಾಕಾರದತ್ತ ಹೆಜ್ಜೆ

ದೊಡ್ಡ ಕನಸಿನ ಸಾಕಾರದತ್ತ ಹೆಜ್ಜೆ

"ಒಂದು ಬಹುದೊಡ್ಡ ಕನಸನ್ನು ನೆರವೇರಿಸಿಕೊಳ್ಳಲು ಹೊಸ ಭಾರತ ಸನ್ನದ್ಧವಾಗಿದೆ. ಜಪಾನ್ ಭಾರತದ ಆಪ್ತ ಸ್ನೇಹಿತ ಎಂದು ಹೇಳಿಕೊಂಡಿರುವುದು ಒಂದು ಮೆರೆಯಲಾರದ ಭಾವುಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತರಬೇತಿ ಕೇಂದ್ರಕ್ಕೂ ಅಡಿಗಲ್ಲು

ತರಬೇತಿ ಕೇಂದ್ರಕ್ಕೂ ಅಡಿಗಲ್ಲು

ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿದಂತೆ 4000 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀದುವುದಕ್ಕಾಗಿ ವಡೋದರಾದಲ್ಲಿ ತೆರೆಯಲಿರುವ ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನೂ ಉಭಯ ನಾಯಕರು ನೆರವೇರಿಸಿದರು.

ಜಪಾನ್ ಸಹಕಾರ

ಜಪಾನ್ ಸಹಕಾರ

1.1 ಲಕ್ಷ ಕೋಟಿ ಮೌಲ್ಯದ ಈ ಬುಲೆಟ್ ಟ್ರೈನ್ ಯೋಜನೆಯು ಭಾರತೀಯ ರೈಲ್ವೆ ಮತ್ತು ಜಪನೀಸ್ ಪರ್ಮ್ ಶಿಂಕನ್ಸೆನ್ ಟೆಕ್ನಾಲಜಿಯ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಜಪಾನ್ ತಂಡದ ಅಂದಾಜಿನ ಪ್ರಕಾರ ಈ ಯೋಜನೆ 2023 ರಲ್ಲಿ ಸಂಪೂರ್ಣ ಮುಕ್ತಾಯಗೊಂಡು, ಬುಲೆಟ್ ಟ್ರೈನ್ ಕಾರ್ಯಾರಂಭವಾಗಲಿದೆ. ಆದರೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೊಯೆಲ್ ಹೇಳುವಂತೆ 2022 ಆಗಸ್ಟ್ 15 ರಂದೇ ಅಂದರೆ ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗಲೇ ಈ ರೈಲು ಕಾರ್ಯಾರಂಭಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಶೇ.81 ರಷ್ಟು ಹಣ ಜಪಾನ್ ನೀಡಲಿದೆ

ಶೇ.81 ರಷ್ಟು ಹಣ ಜಪಾನ್ ನೀಡಲಿದೆ

ಈ ಯೋಜನೆಗೆ ಜಪಾನ್ ಶೇ.81 ರಷ್ಟು ಹಣನೀಡಲಿದೆ. ಸುಮಾರು 88,000 ಕೋಟಿ ರೂ.ಗಳನ್ನು ಜಪಾನ್ ಸಾಲದ ರೂಪದಲ್ಲಿ ನೀಡಲಿದ್ದು, ಇದಕ್ಕೆ ಕೇವಲ 0.1% ಬಡ್ಡಿಯನ್ನಷ್ಟೇ ಹಾಕಲಾಗುತ್ತದೆ. ಈ ಸಾಲವನ್ನು ಮುಂದಿನ 50 ವರ್ಷಗಳೊಳಗಾಗಿ ತೀರಿಸಬೇಕಾಗುತ್ತದೆ.

ಮೂರೇ ಗಂಟೆಯಲ್ಲಿ ಮುಂಬೈ!

ಮೂರೇ ಗಂಟೆಯಲ್ಲಿ ಮುಂಬೈ!

ಈ ಟ್ರೈನ್ ಗುಜರಾತ್ ಮತ್ತು ಮುಂಬೈ ನಡುವೆ ಓಡಾಡಲಿದ್ದು, 750 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ. ಈ ಟ್ರೈನ್ ಮೂಲಕ 8 ಗಂಟೆಯ ಪ್ರಯಾಣವನ್ನು(12 ನಿಲ್ದಾಣ) ಕೇವಲ 3 ಗಂಟೆಗೆ ಇಳಿಸಬಹುದಾಗಿದೆ. ಟ್ರೈನ್ ಅನ್ನು ಕೇವಲ ನಾಲ್ಕೇ ನಿಲ್ದಾಣಗಳಲ್ಲಿ ನಿಲ್ಲಿಸಿದಲ್ಲಿ ಕೇವಲ 2ಗಂಟೆಗೆ ಮುಂಬೈ ತಲುಪಬಹುದಾಗಿದೆ!ಟಿಕೇಟ್ ಬೆಲೆ ರೂ. 1500/-

ಗಂಟೆಗೆ 320 ಕಿ.ಮೀ.ವೇಗ

ಗಂಟೆಗೆ 320 ಕಿ.ಮೀ.ವೇಗ

ಗಂಟೆಗೆ ಸರಾಸರಿ 250 ಕಿ.ಮೀ. ವೇಗದಲ್ಲಿ ಈ ಟ್ರೈನು ಓಡಲಿದ್ದು, 320 ಕಿ.ಮೀ.ವೇಗದಲ್ಲೂ ಓಡುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿರುವ ಅತಿವೇಗದ ರೈಲುಗಳ ಎರಡು ಪಟ್ಟು ವೇಗವನ್ನು ಈ ರೈಲು ಪಡೆದಿರುತ್ತದೆ.

508 ಕಿ.ಮೀ ದಾರಿ

508 ಕಿ.ಮೀ ದಾರಿ

ಒಟ್ಟು 508 ಕಿ.ಮೀ.ಉದ್ದದ ದಾರಿಯಲ್ಲಿ ಶೇ.92 ರಷ್ಟು ಎಲೆವೇಟೆಡ್ ಮಾರ್ಗವಾಗಿದ್ದು, ಶೆ.6 ರಷ್ಟು ಸುರಂಗ ಮತ್ತು ಉಳಿದ ಹಾದಿ ನೆಲದ ಮೇಲಿರಲಿದೆ. ಈ ಟ್ರೈನು ಮಹಾರಾಷ್ಟ್ರದ ಥಾಣೆಯ 21 ಕಿ.ಮೀ.ದೂರದ ದೇಶದ ಅತ್ಯಂತ ಉದ್ದದ ಸುರಂಗವನ್ನು ಹಾದುಹೋಗಲಿದೆ. ಮತ್ತು ಇವುಗಳಲ್ಲಿ 7 ಕಿ.ಮೀ.ಸಮುದ್ರದೊಳಗಿನ ಮಾರ್ಗವೂ ಆಗಿರಲಿದೆ.

ಮಹಾರಾಷ್ಟ್ರದಲ್ಲಿ ಎಲ್ಲಿ?

ಮಹಾರಾಷ್ಟ್ರದಲ್ಲಿ ಎಲ್ಲಿ?

ಗುಜ್ರಾಟಿನ ಅಹಮದಾಬಾದ್ ನಿಂದ ಹೊರಡಲಿರುವ ಈ ಟ್ರೈನು ಮಹಾರಾಷ್ಟ್ರದಲ್ಲಿ ಎಲ್ಲಿ ನಿಲ್ಲುತ್ತದೆ ಎಂಬ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ. ಇಲ್ಲಿನ ಬಾಂದ್ರಾ-ಕುಲರಾ ಬಳಿಯುರುವ 9000 ಚ.ಮೀ. ಜಾಗದಲ್ಲಿ ನಿಲ್ದಾಣ ನಿರ್ಮಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Prime minister along with Japanese Prime Minister Shinzo Abe, laid the foundation stone for the proposed Ahmedabad-Mumbai High-Speed Rail Network, known as the bullet train, in Ahmedabad on Sep 14th. Here are 10 highlights.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ