ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ನೋಂದಣಿಯಿಂದ 420 ಸಂಖ್ಯೆಗೆ ಕೊಕ್?

ತಮ್ಮ ವಾಹನದ 420 ಸಂಖ್ಯೆಯನ್ನ ನೋಡಿ ಜನರು ತಮಾಷೆ ಮಾಡುವುದರ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಂದ ದೂರ ಬಂದ ಹಿನ್ನೆಲೆಯಲ್ಲಿ ಅಹ್ಮದಾಬಾದ್ ಆರ್ ಟಿಒ ಚಿಂತನೆ

|
Google Oneindia Kannada News

ಅಹ್ಮದಾಬಾದ್, ಫೆಬ್ರವರಿ 16: ಇನ್ನು ಮುಂದೆ ವಾಹನ ರಿಜಿಸ್ಟ್ರೇಷನ್ ವೇಳೆ 420 ಅಂಕಿಯನ್ನು ಯಾವುದೇ ವಾಹನಗಳಿಗೆ ನೀಡದಿರುವ ನಿಯಮ ಸಾರಿಗೆ ಇಲಾಖೆಯಲ್ಲಿ ಜಾರಿಗೊಳ್ಳಲಿದೆಯೇ?

ಇಂಥದ್ದೊಂದು ಅಚ್ಚರಿಯ ಸಂಗತಿಯನ್ನು ದೂರದ ಅಹ್ಮದಾಬಾದ್ ಆರ್ ಟಿಒ ಕಚೇರಿ ಬಹಿರಂಗಪಡಿಸಿದೆ. ಗುಜರಾತ್ ನಲ್ಲಿ ಇನ್ನು ನೋಂದಾವಣಿಯಾಗುವ ವಾಹನಗಳಿಗೆ ಬರೀ 420 ಅಥವಾ 0420 ಸಂಖ್ಯೆಯನ್ನು ನೋಂದಾವಣೆ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆಯಂತೆ.

Ahmadabad RTO Considering Scrapping Vehicle Number '420'

420 ನೋಂದಾವಣಿ ಸಂಖ್ಯೆಯಿರುವ ಅನೇಕ ವಾಹನ ಚಾಲಕರು, ಈಗಾಗಲೇ ತಮ್ಮ ಕಾರಿನ ಅಥವಾ ವಾಹನದ ಸಂಖ್ಯೆಯನ್ನು ನೋಡಿ ತಮ್ಮನ್ನು ಅಪಹಾಸ್ಯ ಮಾಡುತ್ತಿರುವ ಬಗ್ಗೆ ಇಲಾಖೆಗೆ ಪತ್ರ ಬರೆದು ಅಲವತ್ತುಕೊಂಡಿದ್ದಾರೆ.

ಇಂಡಿಯನ್ ಪೀನಲ್ ಕೋಡ್ ನ 420 ಸೆಕ್ಷನ್, ಮೋಸಗಾರರು, ವಂಚಕರಿಗೆ ನೀಡಲಾಗುವ ಶಿಕ್ಷೆಯ ಬಗ್ಗೆ ಹೇಳುವುದರಿಂದ ಈ ಸಂಖ್ಯೆಯುಳ್ಳ ವಾಹನ ಚಾಲಕರನ್ನು ಜನ ಮೋಸಗಾರರು, ವಂಚಕರೆಂದು ಕುಹಕವಾಗುತ್ತಿರುವ ಬಗ್ಗೆ ಅನೇಕ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಗಳು ಆ ಸಂಖ್ಯೆಯನ್ನು ನೋಂದಾವಣಿ ಪ್ರಕ್ರಿಯೆಯಿಂದ ಕೈಬಿಡಲು ನಿರ್ಧರಿಸಿದ್ದಾರೆನ್ನಲಾಗಿದೆ.

ಇತ್ತೀಚೆಗೆ, ಅಹ್ಮದಾಬಾದ್ ನ ರಶ್ಮೀಕಾಂತ್ ಜೋಷಿ ಎಂಬುವರು ಹೊಸ ಕಾರೊಂದನ್ನು ಕೊಂಡಿದ್ದರು. ನೋಂದಾವಣಿಯಲ್ಲಿ ಅದಕ್ಕೆ 0420 ಸಂಖ್ಯೆ ನೀಡಲಾಗಿತ್ತು. ಆಗಿನಿಂದ ರಶ್ಮೀಕಾಂತ್ ಅವರಿಗೆ ಅಪಮಾನಕರ ಕುಹಕ, ಕೂಗುಗಳು ಆಗಾಗ ಕಿವಿಗೆ ಬೀಳಲಾರಂಭಿಸಿದವು. ಹಾಗಾಗಿ, ಅವರು ಇಲಾಖೆಗೆ ಆಗಾಗ ಪತ್ರಗಳನ್ನು ಬರೆದು ಅಧಿಕಾರಿಗಳ ಗಮನ ಸೆಳೆದರು. ಇದು, ಈಗ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲಿ, ಅದು ಜಾರಿಗೊಂಡರೆ, ಮುಂದೊಂದು ದಿನ ಅದು ಕರ್ನಾಟಕದಲ್ಲೂ ಜಾರಿಗೊಳ್ಳಬಹುದು.

English summary
Ahmadabad Regional Transport Officers are considering to discard the 420 number from registration process as they receive some complaints from owners of vehicles bearing this number, that pelple poke jokes against them when they travel on roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X