ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಹೈದರಾಬಾದ್‌ನಲ್ಲಿ ವಾಟ್ಸಾಪ್‌ ಮೂಲಕ ಮೆಟ್ರೋ ಟಿಕೆಟ್ ಖರೀದಿಸಿ

|
Google Oneindia Kannada News

ಹೈದರಾಬಾದ್‌, ನವೆಂಬರ್‌ 4: ಬೆಂಗಳೂರಿನಲ್ಲಿ ಕ್ಯೂಆರ್‌ ಕೂಡ್‌ ಬಳಸಿ ಹಾಗೂ ವಾಟ್ಸಾಪ್‌ನಿಂದ ನಮ್ಮ ಮೆಟ್ರೋ ಖರೀದಿಗೆ ಚಾಲನೆ ನೀಡಿರುವಂತೆ ಈಗ ಹೈದರಾಬಾದ್‌ನಲ್ಲೂ ವಾಟ್ಸಾಪ್‌ ಮೂಲಕ ಮೆಟ್ರೋ ರೈಲಿನ ಟಿಕೆಟ್‌ ಖರೀದಿಸಬಹುದಾಗಿದೆ.

ಕ್ಯೂಆರ್ ಕೋಡ್‌ಗಳು, ಯುಪಿಐಗಳನ್ನು ಒಳಗೊಂಡಂತೆ ಹಲವಾರು ಡಿಜಿಟಲ್ ಪಾವತಿ ವಿಧಾನಗಳನ್ನು ಈಗ ರಾಷ್ಟ್ರದಾದ್ಯಂತದ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಲು ಸ್ವೀಕರಿಸಲಾಗುತ್ತಿದೆ. ಈಗ ಹೈದರಾಬಾದ್‌ನಲ್ಲಿ ವಾಟ್ಸಾಪ್‌ನಲ್ಲಿ ಕೂಡ ಈ ಸಾಲಿಗೆ ಸೇರಿದೆ.

ನಮ್ಮ ಮೆಟ್ರೋ QR ಟಿಕೆಟ್‌ಗೆ ಭರ್ಜರಿ ಬೇಡಿಕೆ, ಎಷ್ಟು ಟಿಕೆಟ್‌ ಮಾರಾಟ?ನಮ್ಮ ಮೆಟ್ರೋ QR ಟಿಕೆಟ್‌ಗೆ ಭರ್ಜರಿ ಬೇಡಿಕೆ, ಎಷ್ಟು ಟಿಕೆಟ್‌ ಮಾರಾಟ?

ಆದಾಗ್ಯೂ, ಟಿಕೆಟ್ ಖರೀದಿಸಲು ಸ್ವಾರ್ಟ್‌ ಮಾರ್ಗವೆಂದರೆ ವಾಟ್ಸಾಪ್‌. ಈಗ ಹೈದರಾಬಾದ್‌ನಲ್ಲಿರುವ ಪ್ರಯಾಣಿಕರು ತಮ್ಮ ಮೆಟ್ರೋ ಟಿಕೆಟ್‌ಗಳನ್ನು ವಾಟ್ಸಾಪ್‌ ಬಳಸಿಕೊಂಡು ಖರೀದಿಸಬಹುದು. ಹೈದರಾಬಾದ್ ಮೆಟ್ರೋ ರೈಲು ವಾಟ್ಸಾಪ್‌ ಮೂಲಕ ಎಂಡ್ ಟು ಎಂಡ್ ಡಿಜಿಟಲ್ ಪಾವತಿ ಮೂಲಕ ಮೆಟ್ರೋ ಟಿಕೆಟ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸಿದೆ.

After Bengaluru, Hyderabad metro ticket purchase is implemented through WhatsApp

ಎಲ್‌&ಟಿ ಮೆಟ್ರೋ ರೈಲು (ಹೈದರಾಬಾದ್) ಲಿಮಿಟೆಡ್ (ಎಲ್‌&ಟಿಎಂಆರ್‌ಎಚ್‌ಎಲ್‌) ಹೇಳಿಕೆಯ ಪ್ರಕಾರ, ಮೆಟ್ರೋ ರೈಲಿನಿಂದ ಸಂಪೂರ್ಣ ಡಿಜಿಟಲ್ ಪಾವತಿ ಸಕ್ರಿಯಗೊಳಿಸಿದ ವಾಟ್ಸಾಪ್‌ ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿರುವುದು ದೇಶದಲ್ಲಿ ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ. ಆದರೆ ಈ ವ್ಯವಸ್ಥೆ ಈಗಾಗಲೇ ಬೆಂಗಳೂರಿನಲ್ಲಿ ಜಾರಿಗೆ ಬಂದಿದೆ. ಸ್ಮಾರ್ಟ್ ಟಿಕೆಟಿಂಗ್‌ಗಾಗಿ ಮೆಟ್ರೋ ವಾಟ್ಸಾಪ್ ಸಂಖ್ಯೆ 918341146468 ಅನ್ನು ಪ್ರಕಟಿಸಿದೆ.

ಎಲ್‌&ಟಿಎಂಆರ್‌ಎಚ್‌ಎಲ್‌ ಭಾರತೀಯ ಸರ್ಕಾರದ ಡಿಜಿಟಲ್ ಇಂಡಿಯಾದ ಸಿಗ್ನೇಚರ್ ಕಾರ್ಯಕ್ರಮಕ್ಕೆ ಅನುಗುಣವಾಗಿ ಪ್ರಯಾಣಿಕರಿಗೆ ವಾಟ್ಸಾಪ್‌ ಮೂಲಕ ಮೆಟ್ರೋ ಟಿಕೆಟ್‌ಗಳನ್ನು ಕಾಯ್ದಿರಿಸಲು ಮತ್ತು ಎಂಡ್-ಟು-ಎಂಡ್ ಡಿಜಿಟಲ್ ಮೋಡ್ ಟಿಕೆಟ್ ಬುಕಿಂಗ್ ಅನ್ನು ಸಕ್ರಿಯಗೊಳಿಸಲು ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಬಿಲ್ಲಸಿಯೊಂದಿಗೆ ತನ್ನ ಪ್ರಯಾಣ ವಿತರಣಾ ಪಾಲುದಾರನಾಗಿ ಪಾಲುದಾರಿಕೆ ಹೊಂದಿದೆ.

ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ ಎಂದು ತಿಳಿಯುವುದಾದರೆ, ವಾಟ್ಸಾಪ್‌ ಸಂಭಾಷಣೆಯನ್ನು ಪ್ರಾರಂಭಿಸಲು ಅಥವಾ ಮೆಟ್ರೋ ನಿಲ್ದಾಣಗಳಲ್ಲಿ ಕಂಡುಬರುವ ಕ್ಯೂಆರ್‌ ಕೋಡ್ ಅನ್ನು ಸ್ಕ್ಯಾನ್ ಮಾಡಲು ಹೈದರಾಬಾದ್ ಮೆಟ್ರೋ ರೈಲ್ ಫೋನ್ ಸಂಖ್ಯೆ 918341146468 ಗೆ ಹಾಯ್ ಎಂದು ಸಂದೇಶವನ್ನು ಕಳುಹಿಸಬೇಕು. ಬಳಿಕ ಪ್ರಯಾಣಿಕರು ಐದು ನಿಮಿಷಗಳವರೆಗೆ ಮಾನ್ಯವಾಗಿರುವ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಮತ್ತು ಇ-ಟಿಕೆಟ್ ಬುಕಿಂಗ್‌ಗಾಗಿ ಯುಆರ್‌ಎಲ್‌ ಅನ್ನು ಪಡೆಯುತ್ತಾರೆ.

After Bengaluru, Hyderabad metro ticket purchase is implemented through WhatsApp

ಸಂಪರ್ಕರಹಿತ ಡಿಜಿಟಲ್ ಅನುಭವಕ್ಕಾಗಿ ಇ-ಟಿಕೆಟ್ ಗೇಟ್‌ವೇ ವೆಬ್‌ಪುಟವನ್ನು ಪ್ರವೇಶಿಸಲು ಇ-ಟಿಕೆಟ್ ಬುಕಿಂಗ್ ಯುಆರ್‌ಎಲ್‌ ಅನ್ನು ಕ್ಲಿಕ್ ಮಾಡಬೇಕು. ಮಾರ್ಗ ಮತ್ತು ಪ್ರಯಾಣದ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವಂತೆ ಪಾವತಿ ಮಾಡಬೇಕು. ಬಳಿಕ ಜಿ ಪೇ, ಫೋನ್‌ಪೇ, ಪೇಟಿಎಂ ಅಥವಾ ರುಪೇ ಡೆಬಿಟ್ ಕಾರ್ಡ್‌ನಂತಹ ಡಿಜಿಟಲ್ ವಿಧಾನವನ್ನು ಬಳಸಿಕೊಂಡು ಪಾವತಿಯನ್ನು ಮಾಡಬಹುದು.

ಈಗ ನೀವು ನಿಮ್ಮ ನೋಂದಾಯಿತ ವಾಟ್ಸಾಪ್‌ ಸಂಖ್ಯೆಯಲ್ಲಿ ಮೆಟ್ರೋ ಇ-ಟಿಕೆಟ್ ಯುಆರ್‌ಎಲ್‌ ಅನ್ನು ಸ್ವೀಕರಿಸುತ್ತೀರಿ. ಈಗ ಕ್ಯೂಆರ್‌ ಇ-ಟಿಕೆಟ್ ಅನ್ನು ಡೌನ್‌ಲೋಡ್ ಮಾಡಲು ಮೆಟ್ರೋ ಇ-ಟಿಕೆಟ್ ಯುಆರ್‌ಎಲ್‌ ಅನ್ನು ಕ್ಲಿಕ್ ಮಾಡಬೇಕು. ಇದು ಒಂದು ವ್ಯವಹಾರ ದಿನಕ್ಕೆ ಮಾನ್ಯವಾಗಿರುತ್ತದೆ. ಪ್ರಯಾಣವನ್ನು ಮುಂದುವರಿಸಲು ಈ ಟಿಕೆಟ್ ಅನ್ನು ಮೆಟ್ರೋ ನಿಲ್ದಾಣಗಳಲ್ಲಿ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ (ಎಎಫ್‌ಸಿ) ಗೇಟ್‌ಗಳಲ್ಲಿ ತೋರಿಸಿ ಮುಂದಿವರಿಯಬಹುದು.

English summary
As namma metro ticket purchase using QR code and WhatsApp has been launched in Bengaluru, now in Hyderabad also you can buy metro train tickets through WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X