Adani: ಕಚ್‌ನಲ್ಲಿ ₹1.5 ಲಕ್ಷ ಕೋಟಿ ಹೂಡಿಕೆಗೆ ಅದಾನಿ ಗ್ರೂಪ್ ಬದ್ಧ: ಕರಣ್ ಅದಾನಿ
ಗುಜರಾತ್ ನಲ್ಲಿ ನಡೆದ 'ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2026'ಯು ದೇಶದ ಭಾರತದ ಅತ್ಯಂತ ಶಕ್ತಿಶಾಲಿ ಬೆಳವಣಿಗೆಯ ಎಂಜಿನ್‌ಗಳಲ್ಲಿ ಅದಾನಿ ಗ್ರೂಪ್ ಒಂದಾಗಿ ಹೊರ ಹೊಮ್ಮಿದ್ದನ್ನು ಪ್ರಚುರಪಡಿಸಿತು. ಅದಾನಿ ಗ್ರೂಪ್ ರಾಜ್ಯದ ಕೈಗಾರಿಕಾ, ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಹೂಡಿಕೆ, ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದ್ದನ್ನು ಪುನರುಚ್ಚರಿಸಿದೆ.
ಈ ಶೃಂಗಸಭೆಯಲ್ಲಿ ಮಾತನಾಡಿದ ಬಂದರುಗಳು ಮತ್ತು ಎಸ್‌ಇಝಡ್ ಕಂಪನಿ ನಿರ್ದೇಶಕ ಕರಣ್ ಅದಾನಿ ಅವರು, ದೀರ್ಘಾವಧಿಯ ದೃಷ್ಟಿಕೋನದಿಂದ ಈ ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಆಗಿದೆ. ಸ್ಥಿರ ಆಡಳಿತ ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯಗಳು ರಾಜ್ಯದಲ್ಲಿ ಹಾಗೂ ದೇಶದ ಆಕರ್ಷಕ ಹೂಡಿಕೆ ತಾಣಗಳಾಗಿವೆ. ರಾಜ್ಯದಲ್ಲಿ ಆರಂಭಿಕ ವರ್ಷಗಳಿಂದ ಭಾರತದ ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ವಲಯದಲ್ಲಿ ತಮ್ಮ ಗಮನ ಕೇಂದ್ರೀಕರಿಸಿದೆ ಎಂದು ಗುಜರಾತ್ ನಲ್ಲಿ ಅದಾನಿ ಗ್ರೂಪ್‌ನ ಬೆಳವಣಿಗೆ ಕುರಿತು ವಿವರಿಸಿದರು.

ರಾಜ್ಯದ ಕಚ್ "ಕರ್ಮ ಭೂಮಿ" ಎಂದು ಕರೆದ ಅವರು, ದೇಶದ ಬೃಹತ್ ವಾಣಿಜ್ಯ ಬಂದರು ಮತ್ತು ಸಂಪೂರ್ಣವಾಗಿ ಸಂಯೋಜಿತ ಬಹುಮಾದರಿ ಲಾಜಿಸ್ಟಿಕ್ಸ್ ಕೇಂದ್ರವಾಗಿ ವಿಕಸನಗೊಂಡಿದೆ. ವರ್ಷಗಳಲ್ಲಿ, ಮುಂದ್ರಾ ಪ್ರಮುಖ ಕೈಗಾರಿಕಾ ಪರಿಸರ ವ್ಯವಸ್ಥೆಯಾಗಿ ಹೊರಹೊಮಿದೆ. ಲಾಜಿಸ್ಟಿಕ್ಸ್, ಉತ್ಪಾದನೆ ಮತ್ತು ಇಂಧನ ವಲಯಗಳಿಗೆ ಸಂಸ್ಥೆಯು ಮೂಲಸೌಕರ್ಯಗಳನ್ನು ಒದಗಿಸಿದೆ. ಕಚ್‌ನಲ್ಲಿನ ಪ್ರಮುಖ ಇಂಧನ ಯೋಜನೆ ಬಗ್ಗೆ ವಿವರಿಸಿದ ಅವರು, 37 ಗಿಗಾವ್ಯಾಟ್‌ಗಳ ಯೋಜಿತ ಸಾಮರ್ಥ್ಯದ ಜೊತೆಗೆ ನವೀಕರಿಸಬಹುದಾದ ಇಂಧನ ಉದ್ಯಾನವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಅದಾನಿ ಯೋಜನೆಯು ಇಂಧನ ಸುರಕ್ಷತೆಯನ್ನು ಖಚಿತಪಡಿಸಿಳ್ಳುತ್ತದೆ. ಜಾಗತಿಕವಾಗಿ ಶುದ್ಧ ಇಂಧನ ಪರಿವರ್ತನೆ ಮುನ್ನಡೆಸುವ ಭಾರತದ ಮಹತ್ವಾಕಾಂಕ್ಷೆಯ ಸಂಕೇತವೆಂದು ಬಣ್ಣಿಸಿದರು. ಆರ್ಥಿಕ ಬೆಳವಣಿಗೆ, ಸುಸ್ಥಿರತೆ ಮತ್ತು ಹವಾಮಾನ ಜವಾಬ್ದಾರಿ ಒಟ್ಟಿಗೆ ಮುನ್ನಡೆಸಬಹುದೆಂದು ತೋರಿಸಿಕೊಡಲಾಗಿದೆ.
ಕಚ್‌ನಲ್ಲಿ ಮತ್ತಷ್ಟು ಹೂಡಿಕೆಗೆ ಬದ್ಧ
ಗುಜರಾತ್‌ನ ಬೆಳವಣಿಗೆಯಲ್ಲಿ ಇಲ್ಲಿನ ಹೂಡಿಕೆಗಳು ಪ್ರಮುಖ ಪಾತ್ರವಹಿಸಿವೆ. ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್ ಕಚ್ ನಲ್ಲಿ 1.5 ಲಕ್ಷ ಕೋಟಿ ಹೂಡಿಕೆ ಮಾಡುವ ಯೋಜನೆ ಪ್ರಕಟಿಸಿದೆ. ಹೂಡಿಕೆಗಳು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವಿಸ್ತರಣೆ, ಬಂದರು ಮತ್ತು ಲಾಜಿಸ್ಟಿಕ್ಸ್ ಮೂಲ ಸೌಕರ್ಯವನ್ನು ಬಲಪಡಿಸುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆಯಿಂದ ಮತ್ತಷ್ಟು ಸುಧಾರಣೆಗಳು ಆಗಲಿವೆ. ಮುಂದಿನ ಹತ್ತು ವರ್ಷಗಳಲ್ಲಿ ಮುಂದ್ರಾದಲ್ಲಿ ಬಂದರು ಸಾಮರ್ಥ್ಯ ದುಪ್ಪಟ್ಟಾಗಲಿದೆ ಎಂದು ಅವರು ತಿಳಿಸಿದರು.
ಭಾರತ ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಾಣಿಕೆ
ಅದಾನಿ ಗ್ರೂಪ್ ಪ್ರತಿ ಹೂಡಿಕೆಗಳು ದೇಶದ ರಾಷ್ಟ್ರೀಯ ಆದ್ಯತೆಗಳೊಂದಿಗೆ ಪೂರಕವಾಗಿದೆ. ನಮ್ಮ ಹೂಡಿಕೆಯಿಂದ ಆಯಾ ಭಾಗದಲ್ಲಿ ಉದ್ಯೋಗ ಸೃಷ್ಟಿ, ಕೈಗಾರಿಕಾ ಬೆಳವಣಿಗೆ, ಉತ್ಪಾದಕತೆ ಹೆಚ್ಚಳ, ಜಾಲ ವಿಸ್ತರಣೆ, ಸುಸ್ಥಿರತೆ, ಆರ್ಥಿಕತೆ ಬೆಳವಣಿಗೆಗೆ ಕಾರಣವಾಗುತ್ತದೆ. ವಿಶ್ವಾಸ ವ್ಯವಹಾರಗಳು ನಡೆಯುತ್ತವೆ. ಕೈಗಾರಿಕೆ ನೀತಿ ಒಪ್ಪಿದ ಅವರು, ಗುಜರಾತ್ ನಲ್ಲಿ ಅಭಿವೃದ್ಧಿ ಹೂಡಿಕೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
2047ರ ವಿಕಸಿತ ಭಾರತ ದೃಷ್ಟಿಕೋನ
'ವಿಕಸಿತ ಭಾರತ 2047' ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಯಾಣದಲ್ಲಿ ಅದಾನಿ ಗ್ರೂಪ್ ವಿಶ್ವಾಸಾರ್ಹ ಪಾಲುದಾರ ಆಗಲು ಬದ್ಧವಾಗಿದೆ. ಗುಜರಾತ್ ತನ್ನ ಕಾರ್ಯತಂತ್ರದ ಹೃದಯಭಾಗದಲ್ಲಿದೆ. ಸ್ವಾವಲಂಬಿ ಮತ್ತು ಜಾಗತಿಕವಾಗಿ ಬಲಿಷ್ಠ ಭಾರತ ನಿರ್ಮಿಸಲು ಕೊಡುಗೆ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಈ 'ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2026'ಯು ನಿರಂತರ ಹೂಡಿಕೆಗಳು,ಸಾರ್ವಜನಿಕ-ಖಾಸಗಿ ಸಹಯೋಗವು ಭಾರತದ ಬೆಳವಣಿಗೆಗೆ ಪೂರಕವಾಗು ಮುನ್ನಡೆಯುತ್ತಿವೆ ಎಂಬುದನ್ನು ಸಾಬೀತುಪಡಿಸಿದೆ.












Click it and Unblock the Notifications