ಅದಾನಿ ಹೆಲ್ತ್ ಸಿಟಿ: 1,000 ಹಾಸಿಗೆಗಳ ಎರಡು ಆಸ್ಪತ್ರೆ, ಮೆಡಿಕಲ್ ಕಾಲೇಜು ಸ್ಥಾಪನೆ
ಅಹಮದಾಬಾದ್, ಫೆಬ್ರವರಿ 10: ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿ ಅದಾನಿ ಹೆಲ್ತ್ ಸಿಟಿ (ಎಹೆಚ್‌ಸಿ) ಸ್ಥಾಪನೆಯ ಘೋಷಣೆಯನ್ನು ಮಾಡಿದ್ದಾರೆ. ಮೇಯೊ ಕ್ಲಿನಿಕ್‌ನ ಸಹಯೋಗದಲ್ಲಿ 1,000 ಹಾಸಿಗೆಗಳ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಅದಾನಿ ಮತ್ತು ಮೇಯೊ ಕ್ಲಿನಿಕ್ ಸಹಭಾಗಿತ್ವದಲ್ಲಿ ಮುಂಬೈ ಮತ್ತು ಅಹಮದಾಬಾದ್ ನಗರದಲ್ಲಿ 1,000 ಹಾಸಿಗೆಗಳ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಈ ಯೋಜನೆ ಗ್ರೂಪ್‌ನ ಲಾಭರಹಿತ ಆರೋಗ್ಯ ಸೇವಾ ಶಾಖೆಯ ಮೂಲಕ ಜಾರಿಗೆ ಬರಲಿದೆ.

ಗೌತಮ್ ಅದಾನಿ ಈ ಕುರಿತು ಘೋಷಣೆ ಮಾಡಿದ್ದಾರೆ. ಮೇಯೊ ಕ್ಲಿನಿಕ್ ಜಗತ್ತಿನ ಅತಿದೊಡ್ಡ ಲಾಭರಹಿತ ವೈದ್ಯಕೀಯ ಅಭ್ಯಾಸ ಗುಂಪಾಗಿದೆ. ಇದು ಆರೋಗ್ಯ ಸೇವಾ ಕ್ಷೇತ್ರಕ್ಕೆ ತಾಂತ್ರಿಕ ಪರಿಣತಿ ಪಡೆದವರನ್ನು ಒದಗಿಸುವ ಕಾರ್ಯವನ್ನು ಮಾಡುತ್ತದೆ.
ಅದಾನಿ ಹೆಲ್ತ್ ಸಿಟಿ ಆರೋಗ್ಯ ಕ್ಯಾಂಪಸ್‌ಗಳನ್ನು ಗೌತಮ್ ಅದಾನಿಯವರ ಸೇವಾ ತತ್ವವಾದ ' सेवा साधना है, सेवा प्रार्थना है और सेवा ही परमात्मा है'ಕ್ಕೆ ಅನುಗುಣವಾಗಿ ಸ್ಥಾಪನೆ ಮಾಡಲಾಗುತ್ತಿದೆ. ಈ ಮೂಲಕ ಎಲ್ಲಾ ವರ್ಗದ ಜನರಿಗೆ ಭಾರತಾದ್ಯಂತ ಸುಲಭ, ವಿಶ್ವ ಮಟ್ಟದ ವೈದ್ಯಕೀಯ ಆರೈಕೆ ಮತ್ತು ವೈದ್ಯಕೀಯ ಶಿಕ್ಷಣವನ್ನು ಒದಗಿಸಲು ಅದಾನಿ ಕುಟುಂಬ ಸಂಪೂರ್ಣ ವೆಚ್ಚ ಭರಿಸುತ್ತದೆ.
ಅಹಮದಾಬಾದ್ ಮತ್ತು ಮುಂಬೈನಲ್ಲಿ ಈ ಆರೋಗ್ಯ ಕ್ಯಾಂಪಸ್ ನಿರ್ಮಾಣಕ್ಕಾಗಿ ಕುಟುಂಬವು 6,000 ಕೋಟಿ ರೂ. ದೇಣಿಗೆ ನೀಡಲಿದೆ. ಗೌತಮ್ ಅದಾನಿ ಭಾರತಾದ್ಯಂತ ನಗರ ಮತ್ತು ಪಟ್ಟಣಗಳಲ್ಲಿ ಇನ್ನಷ್ಟು ಇಂತಹ ಏಕೀಕೃತ ಅದಾನಿ ಹೆಲ್ತ್ ಸಿಟಿಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದಾರೆ.
Proud to launch Adani Health City in partnership with Mayo Clinic, pioneering world-class medical research, affordable healthcare & education. Starting with two 1000-bed hospitals and medical colleges in Ahmedabad & Mumbai, we are on a mission to bring cutting-edge medical… pic.twitter.com/KQ6Xoql3FH
— Gautam Adani (@gautam_adani) February 10, 2025
ಪ್ರತಿಯೊಂದು ಎಹೆಚ್‌ಸಿ ಕ್ಯಾಂಪಸ್‌ಗಳಲ್ಲಿ 1,000 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ವಾರ್ಷಿಕ 150 ಪದವಿ ವಿದ್ಯಾರ್ಥಿಗಳು, 80+ ರೆಸಿಡೆಂಟ್ಸ್ ಮತ್ತು 40+ ಫೆಲೋಗಳನ್ನು ಹೊಂದಿರಲಿವೆ. ಉತ್ತಮ ಆರೈಕೆ ಸೌಲಭ್ಯಗಳು ಮತ್ತು ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳು ಕ್ಯಾಂಪಸ್‌ನಲ್ಲಿ ಇರಲಿವೆ.
ಎಹೆಚ್‌ಸಿ ಕ್ಯಾಂಪಸ್‌ಗಳು ಎಲ್ಲಾ ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಜನರಿಗೆ ಸೇವೆ ಸಲ್ಲಿಸಲು, ಮುಂದಿನ ತಲೆಮಾರಿನ ವೈದ್ಯರಿಗೆ ತರಬೇತಿ ನೀಡಲು ಮತ್ತು ವೈದ್ಯಕೀಯ ಸಂಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಜೈವಿಕ ಮಾಹಿತಿ ತಂತ್ರಜ್ಞಾನದಲ್ಲಿ ಗಮನ ಹರಿಸುವ ಉದ್ದೇಶವನ್ನು ಹೊಂದಿದೆ.
ಅಮೆರಿಕದ ಮೇಯೊ ಕ್ಲಿನಿಕ್ ಗ್ಲೋಬಲ್ ಕನ್ಸಲ್ಟಿಂಗ್ (ಮೇಯೋ ಕ್ಲಿನಿಕ್) ಅನ್ನು ಈ ಸಂಸ್ಥೆಗಳ, ಸಂಘಟನೆ ಉದ್ದೇಶಗಳು ಮತ್ತು ಕ್ಲಿನಿಕಲ್ ಅಭ್ಯಾಸಗಳ ಕುರಿತು ತಂತ್ರಜ್ಞಾನದ ಸಲಹೆ ನೀಡಲು ಅದಾನಿ ಗುಂಪು ನೇಮಿಸಿದೆ. ಮೇಯೋ ಕ್ಲಿನಿಕ್ ತಂತ್ರಜ್ಞಾನವನ್ನು ಒಗ್ಗೂಡಿಸುವ ಬಗ್ಗೆ ಪರಿಣಿತತ ಮಾರ್ಗದರ್ಶನವನ್ನು ನೀಡುತ್ತದೆ, ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ಸೇವಾ ಗುಣಮಟ್ಟದ ಸುಧಾರಣೆಗೆ ಗಮನ ಹರಿಸುತ್ತದೆ.
"ಎರಡು ವರ್ಷಗಳ ಹಿಂದೆ ನನ್ನ 60ನೇ ಹುಟ್ಟುಹಬ್ಬಕ್ಕೆ ನನಗೆ ಉಡುಗೊರೆಯಾಗಿ, ನನ್ನ ಕುಟುಂಬವು ಆರೋಗ್ಯ ಸೇವೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯನ್ನು ಸುಧಾರಿಸಲು 60,000 ಕೋಟಿ ರೂ. ನೀಡುವುದಾಗಿ ಬದ್ಧತೆಯನ್ನು ತೋರಿತು" ಎಂದು ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್ ಅದಾನಿ ಹೇಳಿದರು.
"ಅದಾನಿ ಹೆಲ್ತ್ ಸಿಟಿಯ ಅಭಿವೃದ್ಧಿಹಲವಾರು ಪ್ರಮುಖ ಯೋಜನೆಗಳಲ್ಲಿ ಮೊದಲನೆಯದು. ಇದು ಭಾರತೀಯ ಸಮಾಜದ ಪ್ರತಿಯೊಬ್ಬರಿಗೂ ಕೈಗೆಟುವ ದರದಲ್ಲಿ ವಿಶ್ವ ಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಬಹಳಷ್ಟು ಸಹಾಯ ಮಾಡುತ್ತದೆ" ಎಂದು ತಿಳಿಸಿದರು.
"ವಿಶ್ವದ ಅತಿದೊಡ್ಡ ಲಾಭರಹಿತ ವೈದ್ಯಕೀಯ ಗುಂಪಾದ ಮೇಯೊ ಕ್ಲಿನಿಕ್‌ನೊಂದಿಗಿನ ನಮ್ಮ ಸಹಭಾಗಿತ್ವ ಭಾರತದಲ್ಲಿ ಆರೋಗ್ಯ ಸೇವಾ ಮಾನದಂಡಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ ಎಂಬುದರಲ್ಲಿ ನಾನು ಆತ್ಮವಿಶ್ವಾಸ ಹೊಂದಿದ್ದೇನೆ, ವಿಶೇಷವಾಗಿ ಸಂಕೀರ್ಣ ರೋಗ ನಿರ್ವಹಣೆ ಮತ್ತು ವೈದ್ಯಕೀಯ ನಾವೀನ್ಯತೆಗೆ ವಿಶೇಷ ಒತ್ತು ನೀಡಲಾಗಿದೆ" ಎಂದು.
ಮೇಯೊ ಕ್ಲಿನಿಕ್ ತನ್ನ ಪರಿಣತಿಯನ್ನು ಸ್ವತಂತ್ರ ಆರೋಗ್ಯ ಸೇವಾ ಪೂರೈಕೆದಾರರಿಗೆ ಅವರು ಎಲ್ಲಿದ್ದರೂ ನೀಡಲಿದೆ. ಮೇಯೊ ಕ್ಲಿನಿಕ್ ಕಾರ್ಯಕ್ರಮವು ಗ್ರಾಹಕರು ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಉದ್ದೇಶದಿಂದ ತಜ್ಞರಿಂದ ಸರಿಯಾದ ಉತ್ತರಗಳನ್ನು ಪಡೆಯಲು ಸಹಾಯ ಮಾಡುವ ನಿರ್ವಹಣೆಯ ವಿಧಾನವನ್ನು ಒದಗಿಸುತ್ತದೆ.
ಅದಾನಿ ಗ್ರೂಪ್ ಬಗ್ಗೆ: ಅಹಮದಾಬಾದ್‌ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಅದಾನಿ ಗ್ರೂಪ್ ಭಾರತದಲ್ಲಿ ವೈವಿಧ್ಯಮಯ ವ್ಯವಹಾರಗಳ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿದೆ. ಲಾಜಿಸ್ಟಿಕ್ಸ್ (ಸಮುದ್ರ ಬಂದರುಗಳು, ವಿಮಾನ ನಿಲ್ದಾಣಗಳು, ಸರಕು, ಸಾಗಾಟ ಮತ್ತು ರೈಲು), ಸಂಪತ್ತು, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ನವೀಕರಿಸಬಹುದಾದ ಶಕ್ತಿ, ಅನಿಲ ಮತ್ತು ಮೂಲಸೌಕರ್ಯ, ಕೃಷಿ (ಉತ್ಪನ್ನಗಳು, ಖಾದ್ಯ ಎಣ್ಣೆ, ಆಹಾರ ಉತ್ಪನ್ನಗಳು, ಶೀತಲ ಸಂಗ್ರಹಣೆ ಮತ್ತು ಧಾನ್ಯ), ರಿಯಲ್ ಎಸ್ಟೇಟ್, ಸಾರ್ವಜನಿಕ ಸಾರಿಗೆ ಮೂಲಸೌಕರ್ಯ, ಗ್ರಾಹಕ ಹಣಕಾಸು ಮತ್ತು ರಕ್ಷಣಾ ಹಾಗೂ ಇತರ ಕ್ಷೇತ್ರಗಳಲ್ಲಿ ವಿಸ್ತರಿಸಿದೆ.
ಅದಾನಿ ತನ್ನ ಯಶಸ್ಸು ಮತ್ತು ನಾಯಕತ್ವದ ಸ್ಥಾನವನ್ನು 'ರಾಷ್ಟ್ರ ನಿರ್ಮಾಣ' ಮತ್ತು 'ಉತ್ತಮತೆಯಿಂದ ಬೆಳವಣಿಗೆ' ಎಂಬ ತನ್ನ ಮೂಲ ತತ್ವಶಾಸ್ತ್ರದ ಜೊತೆ ನಿಂತಿದೆ. ಗ್ರೂಪ್ ಪರಿಸರವನ್ನು ರಕ್ಷಿಸಲು ಮತ್ತು ಅದರ ಸಿಎಸ್ಆರ್ ಕಾರ್ಯಕ್ರಮಗಳ ಮೂಲಕ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ www.adani.com ಗೆ ಭೇಟಿ ನೀಡಿ.












Click it and Unblock the Notifications