Adani: ಅದಾನಿ ಕಂಪನಿಯಿಂದ ಆಸ್ಟ್ರೇಲಿಯಾದ ರಫ್ತು ಟರ್ಮಿನಲ್ ಸ್ವಾಧೀನ ಯಶಸ್ವಿ: 1 ಬಿಲಿಯನ್ ಟನ್ ಗುರಿ
ಭಾರತದ ಅತಿದೊಡ್ಡ ಇಂಟಿಗ್ರೇಟೆಡ್ ಟ್ರಾನ್ಸ್ಪೋರ್ಟ್ ಯುಟಿಲಿಟಿ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ) ಈಗಿನಗಿಂತ 2030 ರ ಹೊತ್ತಿಗೆ 1 ಬಿಲಿಯನ್ ಟನ್ ಸರಕು ಸಾಗಣೆ ಪ್ರಮಾಣ ಹೆಚ್ಚಿಸುವತ್ತ ಮುಂದಡಿ ಇಟ್ಟಿದೆ. 2026ರ ಹಣಕಾಸು ವರ್ಷದಲ್ಲಿ EBITDA ಮಾರ್ಗದರ್ಶನದಡಿ ಪ್ರೊಫಾರ್ಮಾ ಆಧಾರದ ಮೇಲೆ ಈಗಿನ ಸರಕು ಸಾಗಾಣೆ ಪ್ರಮಾಣ 21,000-22,000 ಕೋಟಿ ರೂ.ನಿಂದ 22,350-23,350 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.
ಕಂಪನಿಯು ಮುಂದಿನ ಒಂದೇ ವರ್ಷದಲ್ಲಿ 505 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಯಿಂದ 515 ಎಂಎಂಟಿ ವರೆಗೆ ಸರಕು ಸಾಗಾಣೆ ಮಾಡಲು ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್ಲ್ಯಾಂಡ್ ರಫ್ತು ಟರ್ಮಿನಲ್ (NQXT) ಅನ್ನು ಸ್ವಾಧೀನ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 2030ರ ಗುರಿ ತಲುಪಲಿದೆ. ಈ ಸ್ವಾಧೀನದಿಂದ ಪೂರ್ವ-ಪಶ್ಚಿಮ ವ್ಯಾಪಾರ ಕಾರಿಡಾರ್ನಲ್ಲಿ APSEZ ನ ಅಂತಾರಾಷ್ಟ್ರೀಯ ಬಂಡವಾಳಕ್ಕೆ ನಗದು ಉತ್ಪಾದನೆ ಹೆಚ್ಚಾಗುತ್ತದೆ. ಹಾಲಿ ಇರುವ 50 ಎಂಟಿಪಿಎ ಸಾಮರ್ಥ್ಯವು ಹೆಚ್ಚಾಗಲಿದೆ. ಇದು ಕ್ವೀನ್ಸ್ಲ್ಯಾಂಡ್ನಲ್ಲಿ ಉತ್ಪಾದಕರಿಗೆ ನಿರ್ಣಾಯಕವಾಗಿದೆ.

ಅದಾನಿಯ APSEZ 'ಬಹುಪಾಲು ಅಲ್ಪಸಂಖ್ಯಾತ' ಷೇರುದಾರರು, ಭಾರತೀಯ ರಿಸರ್ವ್ ಬ್ಯಾಂಕ್, ಆಸ್ಟ್ರೇಲಿಯಾದ ವಿದೇಶಿ ಹೂಡಿಕೆ ಪರಿಶೀಲನಾ ಮಂಡಳಿ ಮತ್ತು ಇತರ ಪಾಲುದಾರರಿಂದ ಆಸ್ಟ್ರೇಲಿಯಾ NQXT ಸ್ವಾಧೀನಕ್ಕೆ ಒಪ್ಪಿಗೆ ಪಡೆದಿದೆ. ಅದರಿಂದ ಸ್ವಾಧೀನದ ವಿಚಾರದಲ್ಲಿ ಶೇ.100ರಷ್ಟು ಯಶಸ್ವಿಯಾಗಿದೆ. ಅಲ್ಲದೇ ಮಾರಾಟಗಾರ ಕಾರ್ಮೈಕಲ್ ರೈಲ್ ಮತ್ತು ಪೋರ್ಟ್ ಸಿಂಗಾಪುರ್ ಹೋಲ್ಡಿಂಗ್ಸ್ ಕಂಪನಿಗೆ ತಲಾ ₹2 ಮುಖಬೆಲೆಯ 14,38,20,153 ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಿದೆ.
ಕಂಪನಿಯ ಈ ಸ್ವಾಧೀನದಿಂದ NQXT ಗೆ 2030ರ ವೇಳೆಗೆ ಒಂದು ಬಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಲಾಗುತ್ತಿದೆ. ಈ ಮೂಲಕ ಅದಾನಿಯ ಕಂಪನಿ APSEZ ಮಹತ್ವದ ಮೈಲಿಗಲ್ಲು ಸಾಧಿಸಲಿದೆ ಎಂದು ಕಂಪನಿ ಸಿಇಒ ಅಶ್ವನಿ ಗುಪ್ತಾ ತಿಳಿಸಿದರು. ಭೌಗೋಳಿಕವಾಗಿ NQXT ಸಾಕಷ್ಟು ಅನುಕೂಲತೆ ಹೊಂದಿವೆ. ಇಲ್ಲಿ ಬಲವಾದ ಬೆಳವಣಿಗೆಯ ನಿರೀಕ್ಷೆಗಳಿವೆ. ಇಲ್ಲಿಂದ ಕಂಪನಿಯು ಹೊಂದಿರುವ ಇಸ್ರೇಲ್, ಕೊಲಂಬೊ ಮತ್ತು ಟಾಂಜಾನಿಯಾದ ಹಾಗೂ ಇತರ ಅಂತಾರಾಷ್ಟ್ರೀಯ ಬಂದರುಗಳೊಂದಿಗೆ ಇರುವ ಪೂರ್ವ-ಪಶ್ಚಿಮ ವ್ಯಾಪಾರ ಕಾರಿಡಾರ್ ಅನ್ನು ಉತ್ತೇಜಿಸುತ್ತದೆ. ಜಾಗತಿಕ ವ್ಯಾಪಾರ ಮೇಲೆ ಕಂಪನಿಯು ತನ್ನ ಪ್ರಭಾವ ಹೆಚ್ಚಿಸಲು ಉತ್ಸುಕವಾಗಿದೆ ಎಂದು ಹೇಳಿದರು.
NQXT ಗಣನೀಯವಾಗಿ ಬೆಳವಣಿಗೆ ಹೊಂದುವ ಹಾಗೂ ನಗದು ಉತ್ಪಾದಿಸುವ ಆಸ್ತಿ ಆಗಿದೆ. ಇದು ಗ್ರಾಹಕರೊಂದಿಗೆ ಟೇಕ್-ಆರ್-ಪೇ ಒಪ್ಪಂದಗಳಿಂದ ಕಾಯ ನಿರ್ವಹಿಸಲ್ಪಡುತ್ತದೆ. 2025 ರ ಹಣಕಾಸು ವರ್ಷದಲ್ಲಿ NQXT 40 ಮಿಲಿಯನ್ ಟನ್ಗಳ ಒಪ್ಪಂದದ ಸಾಮರ್ಥ್ಯ ಹೊಂದಿತ್ತು. ಅಲ್ಲದೇ 228 ಮಿಲಿಯನ್ EBITDA ಅನ್ನು ವಿತರಿಸಿತ್ತು. (ಪ್ರೊಫಾರ್ಮಾ ಆಧಾರದ ಮೇಲೆ, NQXT ಕ್ರಮವಾಗಿ APSEZ ನ ಈ ವರ್ಷದ ಆದಾಯ ಮತ್ತು EBITDA ಯ ಶೇಕಡಾ 6 ಮತ್ತು ಶೇಕಡಾ 7 ಅನ್ನು ಪ್ರತಿನಿಧಿಸುತ್ತದೆ.)
2110ರಲ್ಲಿ ಗುತ್ತಿಗೆ ಒಪ್ಪಂದ ಪೂರ್ಣ
ಆಸ್ಟ್ರೇಲಿಯಾದ NQXT ಒಂದು ನೈಸರ್ಗಿಕ ಆಳ ನೀರಿನಲ್ಲಿರುವ ಮತ್ತು ಬಹು-ಬಳಕೆದಾರ ರಫ್ತು ಟರ್ಮಿನಲ್. ಇದು ವಾರ್ಷಿಕ 50 ಮಿಲಿಯನ್ ಟನ್ಗಳ ಸಾಮರ್ಥ್ಯ ಹೊಂದಿದೆ. NQXT ಕ್ವೀನ್ಸ್ಲ್ಯಾಂಡ್ ಸರ್ಕಾರದಿಂದ ದೀರ್ಘಾವಧಿಯ ಗುತ್ತಿಗೆ ಪಡೆದಿದೆ. ಆಸ್ಟ್ರೇಲಿಯಾ ದೇಶದ ಸಂಪನ್ಮೂಲ ಉದ್ಯಮ ಬೆಂಬಲಿಸುವ ಪ್ರಮುಖ ಆಸ್ತಿಯಾಗಿದೆ. ಉತ್ತರ ಕ್ವೀನ್ಸ್ಲ್ಯಾಂಡ್ನ ಅಬಾಟ್ ಪಾಯಿಂಟ್ ಬಂದರಿನಲ್ಲಿರುವ NQXT ಪ್ರಾಥಮಿಕವಾಗಿ ಸಂಪನ್ಮೂಲ-ಸಮೃದ್ಧ ಬೋವೆನ್ ಮತ್ತು ಗೆಲಿಲಿ ಜಲಾನಯನ ಪ್ರದೇಶಗಳಲ್ಲಿ ಕೆಲಸ ಮಾಡುವ ಗಣಿಗಾರಿಕೆ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಉತ್ತರ ಮತ್ತು ಆಗ್ನೇಯ ಏಷ್ಯಾದ ಪ್ರಮುಖ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ. (2025 ರ ಆರ್ಥಿಕ ವರ್ಷದಲ್ಲಿ 88ರಷ್ಟು ಸರಕು ಏಷ್ಯಾದ ದೇಶಗಳಿಗೆ ಸಾಗಾಣೆ ಆಗಿದೆ) ಅದರ ಗುತ್ತಿಗೆ 85 ವರ್ಷಗಳ ಒಪ್ಪಂದ ಬಳಿಕ ಅಂದರೆ 2110ನೇ ವರ್ಷದಲ್ಲಿ ಕೊನೆಗೊಳ್ಳಲಿದೆ ಎಂದು ಕಂಪನಿಯು ತಿಳಿಸಿದೆ.
ಇಲ್ಲಿನ ಅಬಾಟ್ ಪಾಯಿಂಟ್ ಬಂದರನ್ನು ಕಾರ್ಯತಂತ್ರದ ಬಂದರು ಮತ್ತು ಆದ್ಯತೆಯ ಬಂದರು ಅಭಿವೃದ್ಧಿ ಪ್ರದೇಶವೆಂದು ಕ್ವೀನ್ಸ್ಲ್ಯಾಂಡ್ ಸರ್ಕಾರವು ಈಗಾಗಲೇ ಘೋಷಿಸಿದೆ. ಹಸಿರು ಹೈಡ್ರೋಜನ್ ರಫ್ತಿನ ಸಾಮರ್ಥ್ಯ ಸೇರಿದಂತೆ ಕ್ವೀನ್ಸ್ಲ್ಯಾಂಡ್ನ ಉತ್ತಮ-ಗುಣಮಟ್ಟದ ಸಂಪನ್ಮೂಲಗಳಿಗೆ ಜಾಗತಿಕ ಬೇಡಿಕೆ ಪೂರೈಕೆಗಾಗಿ NQXT ಗುರುತಿಸಲಾದ ಮಾರ್ಗ ಮತ್ತು ಥ್ರೋಪುಟ್ ವಿಸ್ತರಿಸುವ ಉದ್ದೇಶ ಸರ್ಕಾರ ಹೊಂದಿದೆ. NQXT ಕಂಪನಿಯ ಕಾರ್ಯಾಚರಣೆ ಭಾಗವಾಗಿ ಒಟ್ಟು ರಾಜ್ಯ ಉತ್ಪನ್ನಕ್ಕೆ 10 ಬಿಲಿಯನ್ಗೂ ಅಧಿಕ ಕೊಡುಗೆ ನೀಡಿದೆ. ಹೀಗಾಗಿ ಭಾಗದ ಕೈಗಾರಿಕೆಗಿಂದಲೇ ಸುಮಾರು 8,000ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿವೆ.
NQXT ಅತ್ಯುತ್ತಮ ಸುರಕ್ಷತಾ ದಾಖಲೆ ಪ್ರಕಾರ (ಈ ವರ್ಷ ಶೂನ್ಯ ದುರ್ಘಟನೆ ಮತ್ತು ಶೂನ್ಯ ಸಾವು ವರದಿ), ವೈವಿಧ್ಯಮಯ ಕಾರ್ಯಪಡೆ (ಶೇ.21 ಮಹಿಳೆಯರ ಭಾಗವಹಿಸುವಿಕೆ, ಶೇ.5 ರಷ್ಟು ಮೂಲ ನಿವಾಸಿಗಳು ಮತ್ತು ಟೊರೆಸ್ ಸ್ಟ್ರೈಟ್ ಐಲ್ಯಾಂಡರ್ ಎಂದು ಗುರುತಿಸಲ್ಪಟ್ಟಿದೆ) ಮತ್ತು ಆಳವಾದ ಸಮುದಾಯದ ಒಳಗೊಳ್ಳುವಿಕೆ ಯೊಂದಿಗೆ ರುಜುವಾತು ಹೊಂದಿದೆ. ಈ ವರ್ಷ ಸರಕು ಮತ್ತು ಸೇವೆಗಳ ಸಂಗ್ರಹಣೆಯಲ್ಲಿ ಶೇ.50 ಸ್ಥಳೀಯ ಮತ್ತು ಪ್ರಾದೇಶಿಕ ಪೂರೈಕೆದಾರರ ಜೊತೆಗೆ 2017 ರಿಂದ ಸಮುದಾಯ ಉಪಕ್ರಮಗಳಿಗಾಗಿ 2.5 ಮಿಲಿಯನ್ ಗೂ ಅಧಿಕ ಖರ್ಚು ಮಾಡಲಾಗಿದೆ.
ಅದಾನಿ ಗ್ರೂಪ್ ಭಾಗವಾದ APSEZ ಸಮಗ್ರ ಸಾರಿಗೆ ಉಪಯುಕ್ತತೆ, ಬಂದರು ನಿರ್ವಹಣೆ, ರೈಲು ಸಾರಿಗೆ, ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ಗಳು, ಗೋದಾಮು ಮತ್ತು ಗ್ರಾಹಕರ ದ್ವಾರಗಳಿಗೆ ರಸ್ತೆ ಸಾರಿಗೆಯ ಮೂಲಕ ಅಂತಿಮ ವಿತರಣೆಯ ಮೂಲಕ ಜಾಗತಿಕವಾಗಿ ಸರಕು ಜಾಲ ಹೊಂದಿದೆ. ಆಧುನಿಕ ಡಿಜಿಟಲ್ ಮೂಲಸೌಕರ್ಯ ಮತ್ತು AI-ಚಾಲಿತ ಆಪ್ಟಿಮೈಸೇಶನ್ ಉತ್ತೇಜಿಸುವ ಸಾಮರ್ಥ್ಯವನ್ನು APSEZ ಪೂರೈಕೆ ಮಾಡುತ್ತಿದೆ.
ಸರಕು ಸಾಗಾಣೆಗೆ 25,000ಕ್ಕೂ ಅಧಿಕ ಲಾರಿಗಳ ಸಂಯೋಜನೆ
ಅದಾನಿ ಕಂಪನಿ ದೇಶದ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಕರಾವಳಿಗಳಲ್ಲಿನ 15 ಸ್ಥಳದಲ್ಲಿರುವ ಬಂದರುಗಳು ಮತ್ತು ಟರ್ಮಿನಲ್ಗಳ ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿದೆ. ಪರಿಸರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತದೆ. 127 ಹಡಗುಗಳ ವೈವಿಧ್ಯಮಯ ಸಮುದ್ರ ಫ್ಲೀಟ್, 12 ಮಲ್ಟಿ-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ಗಳು, 3.1 ಮಿಲಿಯನ್ ಚದರ ಅಡಿ ಗೋದಾಮುಗಳು ಮತ್ತು 25,000ಕ್ಕೂ ಅಧಿಕ ಲಾರಿಗಳು ಲಾಜಿಸ್ಟಿಕ್ಸ್ ಜೊತೆಗೆ ಸಂಯೋಜಿಸಲ್ಪಟ್ಟಿವೆ. ಹೀಗಾಗಿ ಕರಾವಳಿಗೆ ನಿಗದಿತವಾಗಿ ಸರಕು ಸಾಗಾಣೆ ಮಾಡಲು ಸಾಧ್ಯವಾಗುತ್ತಿದೆ.
ವಾರ್ಷಿಕವಾಗಿ 633 ಮಿಲಿಯನ್ ಟನ್ ಸರಕು ನಿರ್ವಹಣಾ ಸಾಮರ್ಥ್ಯವನ್ನು ಕಂಪನಿ ಹೊಂದಿದೆ. ಇದು ದೇಶದಲ್ಲಿ ಒಟ್ಟು ಬಂದರು ಪರಿಮಾಣದ ಸರಿಸುಮಾರು 28ರಷ್ಟು. 2030 ರ ಹೊತ್ತಿಗೆ 1 ಬಿಲಿಯನ್ ಟನ್ ಸರಕು ಸಾಗಾಣೆ ಗುರಿ ಹೊಂದಿದ್ದು, ಸರಕು ಪ್ರಮಾಣ ಸಾಮರ್ಥ್ಯವನ್ನು ಈ ವರ್ಷದಿಂದ ಹೆಚ್ಚಿಸಲಿದೆ. ಪ್ರಸಕ್ತ ವರ್ಷ ಎಸ್ ಆಂಟ್ ಪಿ ಗ್ಲೋಬಲ್ ಕಾರ್ಪೊರೇಟ್ ಸುಸ್ಥಿರತಾ ಮೌಲ್ಯಮಾಪನದಲ್ಲಿ ಜಾಗತಿಕ ಸಾರಿಗೆ ಮತ್ತು ಸಾರಿಗೆ ಮೂಲ ಸೌಕರ್ಯ ಸಂಸ್ಥೆಗಳ ಟಾಪ್ 5 ರಲ್ಲಿ ಸ್ಥಾನ ಪಡೆದಿದೆ. 2024 ರಲ್ಲಿ ಐದು ಬಂದರುಗಳನ್ನು ಒಳಗೊಂಡಿದ್ದು, ತಡೆರಹಿತ ಜಾಗತಿಕ ವ್ಯಾಪಾರ ಸಕ್ರಿಯಗೊಳಿಸುತ್ತದೆ ಎಂದು ಕಂಪನಿಯು ತಿಳಿಸಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications