ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಲ್ ಕಂಪನಿಗಳೇ ಮೋದಿ ಸರ್ಕಾರದ ಮುಂದಿನ ಟಾರ್ಗೆಟ್

ಅಕ್ರಮ ಶೆಲ್ ಕಂಪನಿಗಳ ವಿರುದ್ಧ ಮೋದಿ ಸರ್ಕಾರ ಬ್ರಹ್ಮಾಸ್ತ್ರ. ಶೆಲ್ ಕಂಪನಿ, ಅದರ ಅಧಿಕಾರಿಗಳು, ಇಂಥ ಕಂಪನಿಗಳಿ ಕುಮ್ಮಕ್ಕು ನೀಡಿದವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧಾರ.

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7: ಹಲವಾರು ಕಂಪನಿಗಳ, ಅಕ್ರಮ ಧನ ದಂಧೆಕೋರರ ಕಪ್ಪು ಹಣಕ್ಕೆ ಆಶ್ರಯ ತಾಣವಾಗಿರುವ ಶೆಲ್ ಕಂಪನಿಗಳ ಮೇಲೆ ಶೀಘ್ರದಲ್ಲೇ ಮೋದಿ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಲಿದೆ ಎಂದು ವರದಿಯಾಗಿದೆ.

ಅಕ್ರಮ ಹಣವನ್ನು ಸರ್ಕಾರದ ಕಣ್ಣಿಗೆ ಬೀಳದಂತೆ ತಡೆಯುವ ಉದ್ದೇಶದಿಂದಲೇ ಆರಂಭವಾಗಿರುವ ಈ ಸಂಸ್ಥೆಗಳ ಎಲ್ಲಾ ವ್ಯವಹಾರಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

'Actual beneficiaries' of shell firms next on Modi govt's hit list

ಆ ಕಂಪನಿಗಳು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ಹಾಗೂ ಆ ಕಂಪನಿಗಳ ಉನ್ನತ ಅಧಿಕಾರಗಳ ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ತಪ್ಪಿತಸ್ಥ ಕಂಪನಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಇಷ್ಟೇ ಅಲ್ಲ, ಈ ಕಂಪನಿಗಳ ಕಳ್ಳ ವ್ಯವಹಾರಗಳಿಗೆ ಸುಳ್ಳು ಲೆಕ್ಕಪತ್ರ ಸೃಷ್ಟಿಸಿ ಕುಮ್ಮಕ್ಕು ನೀಡಿರುವ ಹಲವಾರು ಚಾರ್ಟರ್ಡ್ ಅಕೌಂಟಂಟ್ ಗಳು, ಕಂಪನಿ ಸೆಕ್ರೆಟರಿಗಳು, ಕಾಸ್ಟ್ ಅಕೌಂಟಟ್ ಗಳನ್ನು ಸರ್ಕಾರ ಪತ್ತೆ ಹಚ್ಚಿದ್ದು, ಇಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅದು ತಿಳಿಸಿದೆ.

English summary
The government on Wednesday said directors or authorised signatories of deregistered companies who try to siphon off money from the firms' bank accounts can face up to 10 years imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X