ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ನಟಿ ಪೂಜಾ ಭಟ್ ನಡಿಗೆ
ಹೈದರಾಬಾದ್ ನವೆಂಬರ್ 2: ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಬುಧವಾರ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾಲ್ಗೊಂಡರು. ಈ ಮೂಲಕ ಯಾತ್ರೆಗೆ ಸೇರಿದ ಮೊದಲ ಬಾಲಿವುಡ್ ಸೆಲೆಬ್ರಿಟಿ ಆಗಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುತ್ತಾ ಪೂಜಾ ಭಟ್ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಹುಲ್ ಅವರೊಂದಿಗೆ ಪೂಜಾ ಭಟ್ ವೇಗವಾಗಿ ಸ್ವಲ್ಪ ದೂರ ನಡೆಯುತ್ತಿದ್ದಂತೆ ಜನರು ಹರ್ಷೋದ್ಗಾರ ಹೊರಡಿಸಿದರು.
ನಟಿ-ನಿರ್ದೇಶಕ-ನಿರ್ಮಾಪಕರೂ ಆದ ಪೂಜಾ ಭಟ್ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಅವರು 1989 ರ ಚಲನಚಿತ್ರ 'ಡ್ಯಾಡಿ' ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು.
ಹಿರಿಯ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ ಪೂಜಾ ಅವರು ಚಿತ್ರ ನಿರ್ಮಾಣಕ್ಕೆ ತೊಡಗುವ ಮೊದಲು 'ದಿಲ್ ಹೈ ಕಿ ಮಂತಾ ನಹೀನ್', 'ಸಡಕ್', 'ಫಿರ್ ತೇರಿ ಕಹಾನಿ ಯಾದ್ ಆಯೀ', 'ಸರ್' ಮತ್ತು 'ಝಕ್ಮ್' ನಂತಹ ಚಲನಚಿತ್ರಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅಭಿನಯವನ್ನು ನೀಡಿದ್ದಾರೆ. 'ತಮ್ಮನ್ನಾ', 'ಸುರ್', 'ಪಾಪ್' ಮತ್ತು ಹಾಲಿಡೇ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ರಾಹುಲ್ ಗಾಂಧಿ ಜೊತೆ ನಟಿ ಪೂಜಾ ಭಟ್ ಭಾಗಿ
ಇಂದು ಹೈದರಾಬಾದ್ ಸಿಟಿಯ ಬಾಲನಗರ ಮುಖ್ಯ ರಸ್ತೆಯ ಎಂಜಿಬಿ ಬಜಾಜ್ ಶೋರೂಮ್‌ನಿಂದ ಯಾತ್ರೆ ಪುನರಾರಂಭವಾಯಿತು. ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಇಂದು ರಾಹುಲ್ ಗಾಂಧಿ ಜೊತೆ ನಟಿ ಪೂಜಾ ಭಟ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಯಾತ್ರೆಗೆ ಮತ್ತಷ್ಟು ಕಳೆ ಬಂದಿದೆ.

ಈ ಜಿಲ್ಲೆಗಳಲ್ಲಿ ಯಾತ್ರೆ ಪೂರ್ಣ
ಕಳೆದ ವಾರ ಯಾತ್ರೆಯು ತೆಲಂಗಾಣದಲ್ಲಿ ಆರಂಭವಾಗುವ ಮೊದಲು ರಾಹುಲ್ ಗಾಂಧಿ ಅವರು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪಾದಯಾತ್ರೆಯನ್ನು ಅನ್ನು ಪೂರ್ಣಗೊಳಿಸಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಯಾತ್ರೆಯನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ.

'ಭಾರತ್ ಜೋಡೋ ಯಾತ್ರೆಯು ಮೂಕ ಕ್ರಾಂತಿ'
ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಬೋವೆನಪಲ್ಲಿಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯಾತ್ರಿಗಳೊಂದಿಗೆ ಸಂವಾದ ನಡೆಸಿದರು. ಅಂತೆಯೇ ಅವರು ಕೂಡ ರಾಹುಲ್ ಗಾಂಧಿ ಅವರೊಂದಿಗೆ 3500 ಕಿಲೋಮೀಟರ್ ದೂರದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. 'ನಮ್ಮ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಉತ್ತಮ ಸ್ಫೂರ್ತಿಯ ಮೂಲವಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮೂಕ ಕ್ರಾಂತಿಯನ್ನು ತರುತ್ತಿದ್ದು, ರಾಜಕೀಯ ಚಿತ್ರಣವನ್ನೇ ಬದಲಾಯಿಸಲಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಇಂದಿನ ಯಾತ್ರೆಯ ವೇಳಾಪಟ್ಟಿ
ನಂತರ ಯಾತ್ರೆಯು ಎಂಜಿಬಿ ಬಜಾಜ್ ಶೋರೂಮ್, ಬಾಲಾನಗರ ಮುಖ್ಯ ರಸ್ತೆ, ಹೈದರಾಬಾದ್ ನಗರದಿಂದ ಪುನರಾರಂಭವಾಯಿತು. ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು. ಯಾತ್ರೆಯ ಬೆಳಗಿನ ವಿರಾಮ ಹೋಟೆಲ್ ಕಿನಾರಾ ಗ್ರ್ಯಾಂಡ್, ಹಫೀಜ್‌ಪೇಟ್‌ನಲ್ಲಿ ಏರ್ಪಡಿಸಲಾಗಿತ್ತು. ಬಳಿಕ ಪಾದಯಾತ್ರೆಯು ಬಿಎಚ್‌ಇಎಲ್ ಬಸ್ ನಿಲ್ದಾಣದಿಂದ ಪುನರಾರಂಭವಾಯಿತು. ಸಂಜೆಯ ವಿರಾಮ ಹರಿ ದೋಷ, ಮುತ್ತಂಗಿ ಬಳಿ ಮತ್ತು ರಾತ್ರಿ ನಿಲುಗಡೆ ಕೌಲಂಪೇಟೆ ಬಳಿ, ಗಣೇಶ ಮಂದಿರ ರುದ್ರಾರಾಮ್ ಎದುರು ಇರುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications