• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲಯಾಳಿ ನಟಿ ದೌರ್ಜನ್ಯ : ಪಲ್ಸರ್ ಸುನಿಯನ್ನು ಬಂಧಿಸಿದ್ದು ಹೇಗೆ?

By Prasad
|

ಎರ್ನಾಕುಲಂ, ಫೆಬ್ರವರಿ 23 : ಪ್ರಖ್ಯಾತ ಮಲಯಾಳಿ ನಟಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ತಂಡದ ಪ್ರಮುಖ ಆರೋಪಿ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿಯನ್ನು ಎರ್ನಾಕುಲಂ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.

ಇಡೀ ಪ್ರಕರಣದ ರೂವಾರಿಯಾಗಿರುವ ಪಲ್ಸರ್ ಸುನಿ ತಲೆಮರೆಸಿಕೊಂಡಿದ್ದ, ನಿರೀಕ್ಷಣಾ ಜಾಮೀನಿಗೂ ಅರ್ಜಿ ಹಾಕಿದ್ದ. ಆದರೆ, ಗುರುವಾರದಂದು ನ್ಯಾಯಾಲಯಕ್ಕೆ ಶರಣಾಗಬೇಕೆಂದು ಬಂದಾಗ ಆತನನ್ನು ಪೊಲೀಸರು ನ್ಯಾಯಾಲಯದ ಆವರಣದಲ್ಲಿಯೇ ಅರೆಸ್ಟ್ ಮಾಡಿದರು.

ಈ ಘಟನೆ ಶುಕ್ರವಾರ ರಾತ್ರಿ ಕೇರಳದ ಎರ್ನಾಕುಲಂನಲ್ಲಿ ನಡೆದಿತ್ತು. ಶನಿವಾರ ಬೆಳಿಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನತ್ತಿದ ಪೊಲೀಸರು ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೂ, ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ.

ಈಗ ಸುನಿ ಬಂಧಿತನಾಗಿರುವುದರಿಂದ ಹಲವಾರು ಸಂಗತಿಗಳು ಹೊರಬೀಳುವ ಸಾಧ್ಯತೆಯಿದೆ. ಈ ಸಂಚಿನಲ್ಲಿ ಕೆಲ ಖ್ಯಾತ ನಾಮರ ಹೆಸರು ಬಂದರೂ ಅಚ್ಚರಿಯಿಲ್ಲ. ಕೊಟೇಷನ್ ಮಾಫಿಯಾದ ಭಾಗವಾಗಿಯೇ ಈ ಕೃತ್ಯ ನಡೆದಿದೆ. ಕೆಲವರ ಅಣತಿಯ ಮೇರೆಗೆ ಇದನ್ನು ಎಸಗಿದ್ದಾಗಿ ಸುನಿಯೂ ನಟಿಗೆ ಹೇಳಿದ್ದ. [ಮಲಯಾಳಂ ನಟಿ ದೌರ್ಜನ್ಯದ ಹಿಂದೆ ಕೊಟೇಷನ್ ಮಾಫಿಯಾ?]

ಇಡೀ ಪ್ರಕರಣದ ರೂವಾರಿ ಪಲ್ಸರ್ ಸುನಿ

ಇಡೀ ಪ್ರಕರಣದ ರೂವಾರಿ ಪಲ್ಸರ್ ಸುನಿ

ಕನ್ನಡದಲ್ಲಿಯೂ ನಟಿಸಿರುವ ಖ್ಯಾತ ಮಲಯಾಳಿ ನಟಿಯ ವಾಹನ ಚಾಲಕನಾಗಿದ್ದ ಪಲ್ಸರ್ ಸುನಿ ತನ್ನ ದುರ್ವರ್ತನೆಯಿಂದಾಗಿ ಕೆಲಸ ಕಳೆದುಕೊಂಡಿದ್ದ. ಆತನೇ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯದ ಸ್ಕಚ್ ಅನ್ನು ರೂಪಿಸಿದ್ದ. 'ಪ್ರಭಾವಿ' ವ್ಯಕ್ತಿಯ ಅಣಿತಿಯ ಮೇರೆಗೆ ಇದನ್ನು ಮಾಡಿರುವುದಾಗಿ ಆತ ದೌರ್ಜನ್ಯ ನಡೆಸುವ ಸಮಯದಲ್ಲಿ ನಟಿಗೆ ಹೇಳಿದ್ದ. [ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?]

ದೌರ್ಜನ್ಯ ನಡೆಸಿದ ವಿಡಿಯೋ ಮಾಡಲಾಗಿತ್ತು

ದೌರ್ಜನ್ಯ ನಡೆಸಿದ ವಿಡಿಯೋ ಮಾಡಲಾಗಿತ್ತು

ನಟಿಯನ್ನು ಅಪಹರಣ ಮಾಡಿದ್ದಲ್ಲದೆ, ಹಣ ಕೀಳುವ ಉದ್ದೇಶದಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ, ಅಸಂಬದ್ಧ ಭಂಗಿಯಲ್ಲಿ ಹಲವಾರು ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಲಾಗಿದೆ. ಬ್ಲಾಕ್ ಮೇಲ್ ಮಾಡಿ ಹಣ ಮಾಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ.

ನಟ ದಿಲೀಪ್ ಸ್ಪಷ್ಟನೆ

ನಟ ದಿಲೀಪ್ ಸ್ಪಷ್ಟನೆ

ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮತ್ತೊಬ್ಬ ಖ್ಯಾತ ನಟ ದಿಲೀಪ್ ಅವರು ವೃತ್ತಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದಂತೆ ಇವರೊಂದಿಗಿದ್ದ ವ್ಯಾಜ್ಯವೇ ಅಪಹರಣಕ್ಕೆ ನಾಂದಿಯಾಯಿತು ಎಂಬ ಮಾತು ಕೂಡ ಕೇಳಿಬಂದಿತ್ತು. [ನಟಿ ಮೇಲೆ ಕಿರುಕುಳ, ನನ್ನ ಪಾತ್ರವಿಲ್ಲ ಎಂದ ಸ್ಟಾರ್ ನಟ]

ಮತ್ತೊಬ್ಬ ಕುಖ್ಯಾತ ನಟನ ಕೈವಾಡ?

ಮತ್ತೊಬ್ಬ ಕುಖ್ಯಾತ ನಟನ ಕೈವಾಡ?

ಈ ಪ್ರಕರಣದಲ್ಲಿ ಕೇರಳದ ಮಂತ್ರಿಯೊಬ್ಬರ ಮಗನ ಮೇಲೆಯೂ ಅನುಮಾನ ಮೂಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹಿಂದೆ ಖಾಸಗಿ ಟಿವಿ ಚಾನಲ್ ನಡೆಸಿದ್ದ ಸ್ಟಿಂಗ್ ಆಪರೇಷನ್ ನಲ್ಲಿ ಆತ ರಷ್ಯಾ ಮೂಲದ ಮಹಿಳೆಯೊಂದಿಗೆ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ.

ಶುಕ್ರವಾರ ರಾತ್ರಿ ನಡೆದಿದ್ದ ಘಟನೆ

ಶುಕ್ರವಾರ ರಾತ್ರಿ ನಡೆದಿದ್ದ ಘಟನೆ

ಎರ್ನಾಕುಲಂನಲ್ಲಿ ಶುಕ್ರವಾರ ರಾತ್ರಿ ಚಿತ್ರೀಕರಣ ಮುಗಿಸಿಕೊಂಡು ಸಫಾರಿಯಲ್ಲಿ ವಾಪಸ್ ಬರುತ್ತಿದ್ದ ವೇಳೆಯಲ್ಲಿ ಅವರಿದ್ದ ವಾಹನಕ್ಕೆ ಗುದ್ದಿದ ನಾಟಕವಾಡಿ ದುರುಳರು ನಟಿಯ ವಾಹನವೇರಿ ಎರಡು ಗಂಟೆಗಳ ಕಾಲ ದೌರ್ಜನ್ಯ ಎಸಗಿದ್ದರು. ಶನಿವಾರ ಬೆಳಿಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದರು.

ಈ ಕೃತ್ಯದ ಹಿಂದಿದೆ ಕೊಟೇಷನ್ ಮಾಫಿಯಾ

ಈ ಕೃತ್ಯದ ಹಿಂದಿದೆ ಕೊಟೇಷನ್ ಮಾಫಿಯಾ

ಈ ಚೆಲುವೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಹಿಂದೆ ಕೊಟೇಷನ್ ಮಾಫಿಯಾ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಇದೇನೆಂದರೆ, ಇಂತಹ ವ್ಯಕ್ತಿಯ ವಿರುದ್ಧ ಇಂತಹ ಕೃತ್ಯ ನಡೆಸಲು ಪಡೆಯುವ 'ಸುಪಾರಿ'. ಇಲ್ಲಿ ಕೊಲೆ ನಡೆಯುವುದಿಲ್ಲ, ಆದರೆ ಆಗಬೇಕಾದ ಕೃತ್ಯ ಆಗಿರುತ್ತದೆ. ಈ ಸಂಗತಿಯನ್ನು ದೌರ್ಜನ್ಯ ಎಸಗಿದ ನಂತರ ಸುನಿಯೇ ನಟಿಯೆದಿರು ಹೇಳಿದ್ದ.

ಬೆಂಗಳೂರಿನ ನಿರ್ಮಾಪಕರ ವರಿಸಲಿರುವ ನಟಿ

ಬೆಂಗಳೂರಿನ ನಿರ್ಮಾಪಕರ ವರಿಸಲಿರುವ ನಟಿ

ಬೆಂಗಳೂರಿನಲ್ಲಿ ನೆಲೆಸಿರುವ ಚಲನಚಿತ್ರ ನಿರ್ಮಾಪಕರ ಕೈಹಿಡಿಯಲಿದ್ದಾರೆ ಈ ನಟಿ. ಈ ನಿರ್ಮಾಪಕರ ಅಣತಿಯ ಮೇರೆಗೆ ಮಲಯಾಳಂ ನಟಿ ಶನಿವಾರ ಪೊಲೀಸರಿಗೆ ದೂರು ನೀಡಿದ್ದು ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಈ ನಿರ್ಮಾಪಕರನ್ನು ಮದುವೆಯಾಗುತ್ತಿರುವ ಸುದ್ದಿ ಬರೀ ಗಾಳಿಸುದ್ದಿ ಎಂದು ನಟಿ ತಳ್ಳಿಹಾಕಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actress kidnap and molestation : Main accused Pulsar Suni has been arrested by Kerala police in Ernaculam. Pulsar Suni had teamed up with some people and executed this horrifying act with perfection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more