Actor Vijay: ನಟ ವಿಜಯ್ ಕಾರ್ಯಕ್ರಮದಲ್ಲಿ ಭೀಕರ ದುರಂತ, 20ಕ್ಕೂ ಹೆಚ್ಚು ಜನರ ಸಾವು?
ಸಿನಿಮಾ ನಟರು ರಾಜಕೀಯಕ್ಕೆ ಬರುವ ಬೆಳವಣಿಗೆ ಹೆಚ್ಚಾಗುತ್ತಿದ್ದು, ಈಗಾಗಲೇ ನೂರಾರು ನಟರು ಹೀಗೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದು ಸೌಂಡ್ ಕೂಡ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡು ರಾಜಕೀಯ ಅಖಾಡದಲ್ಲಿ ನಟ ವಿಜಯ್ ಅಬ್ಬರ ಜೋರಾಗಿದೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗುವ ಕನಸು ಕೂಡ ಕಾಣುತ್ತಿದ್ದಾರೆ. ಇದಕ್ಕಾಗಿ ದೊಡ್ಡ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಇದ್ದಾರೆ. ಹೀಗಿದ್ದಾಗಲೇ, ನಟ ವಿಜಯ್ ಕಾರ್ಯಕ್ರಮದಲ್ಲಿ ಭೀಕರ ದುರಂತ, 20ಕ್ಕೂ ಹೆಚ್ಚು ಜನರ ಸಾವು?
ತಮಿಳುನಾಡು ರಾಜಕೀಯದಲ್ಲಿ, ಸಿನಿಮಾ ನಟ & ನಟಿಯರು ಬರುವುದು ಹೊಸ ವಿಷಯ ಏನಲ್ಲ. ಸುಮಾರು 2 ವರ್ಷದ ಹಿಂದೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿವುದಾಗಿ ತಮಿಳು ನಟ ವಿಜಯ್ ಅವರು ಘೋಷಿಸಿ ದೇಶದ ಗಮನ ಸೆಳೆದಿದ್ದರು. ತಮ್ಮ ಪಕ್ಷಕ್ಕೆ ವಿಜಯ್ 'ತಮಿಳಗ ವೆಟ್ರಿ ಕಳಗಂ' ಎಂದು ಹೆಸರು ಕೂಡ ಇಟ್ಟಿದ್ದರು. ಹೀಗೆ ತಮಿಳುನಾಡಿನ ವಿಧಾನಸಭೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಈ ಮೂಲಕ ನಟ ವಿಜಯ್ ಅವರ ಬೆನ್ನಿಗೆ ಅಭಿಮಾನಿಗಳು ಕೂಡ ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿ ನಿಂತಿದ್ದರು.

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ಕೊಟ್ಟ ನಂತರ ತಮಿಳುನಾಡು ರಾಜಕೀಯ ಅಲ್ಲಾಡಿ ಹೋಗಿದೆ. ಅದರಲ್ಲೂ ನಟ ವಿಜಯ್ ಬೆನ್ನಿಗೆ ನಿಲ್ಲಲು ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಸಾಗರದಂತೆ ಸೇರುತ್ತಿದ್ದಾರೆ. ಇದೇ ರೀತಿ ಇಂದು ಕೂಡ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಬೃಹತ್ ಕಾರ್ಯಕ್ರಮವನ್ನ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಿದ್ದರು. ಆದರೆ ಅದೇ ಕಾರ್ಯಕ್ರಮ ಇದೀಗ ಸಾವಿನ ಕೂಪವಾಗಿದೆ...
ತಮಿಳುನಾಡಿನ ಕರೂರಿನಲ್ಲಿ ಭೀಕರ ಘಟನೆ
ನಟ ವಿಜಯ್ ಇಂದು ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ವತಿಯಿಂದ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಲಕ್ಷಾಂತರ ಜನರು ಈ ಕಾರ್ಯಕ್ರಮ ನೋಡಲು ಬಂದಿದ್ದು, ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೂಡ ಕೈಗೊಳ್ಳಲಾಗಿತ್ತು. ಆದರೆ ಎಷ್ಟೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರೂ ಇಂದು ಭಾರಿ ದೊಡ್ಡ ದುರಂತ ನಡೆದು ಹೋಗಿದೆ. ತಮಿಳಗ ವೆಟ್ರಿ ಕಳಗಂ ಪಕ್ಷದ ರ್ಯಾಲಿ ಸಮಯದಲ್ಲಿ ಕಾಲ್ತುಳಿತ ಸಂಭವಿಸಿ 20ಕ್ಕೂ ಹೆಚ್ಚು ಜನರ ಸಾವು? ಎಂಬ ಸುದ್ದಿ ಇದೀಗ ತಲ್ಲಣ ಎಬ್ಬಿಸಿದೆ.












Click it and Unblock the Notifications