Tirupati laddu row: ಏನ್ರಿ ನಿಮ್ಮ ಅವಾಂತರ ಗೆಲ್ಲೋಕೆ ಮುಂಚೆ ಒಂದು ಗೆದ್ದ ಮೇಲೆ : ಪ್ರಕಾಶ್ ರಾಜ್
ನಟ ಪ್ರಕಾಶ್‌ರಾಜ್ ಹಾಗೂ ಪವನ್ ಕಲ್ಯಾಣ್ ನಡುವೆ ಸದ್ಯಕ್ಕೆ ಟ್ವೀಟ್ ವಾರ್ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರನ್ನು ಗುರಿಯಾಗಿಸಿಕೊಂಡು ನಟ ಪ್ರಕಾಶ್‌ರಾಜ್ ಅವರು ಮತ್ತೆ ಸರಣಿ ಟ್ವೀಟ್ ಮಾಡಿದ್ದಾರೆ. ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು. ಏನ್ರಿ ನಿಮ್ಮ ಅವಾಂತರ, ಗೆಲ್ಲುವುದಕ್ಕೆ ಮುಂಚೆ ಒಂದು, ಗೆದ್ದ ಮೇಲೆ ಒಂದಾ ಎಂದು ಪ್ರಕಾಶ್ ರಾಜ್ ಅವರು ಪ್ರಶ್ನೆ ಮಾಡಿದ್ದಾರೆ.
ಪ್ರಕಾಶ್ ರಾಜ್ ಅವರು ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ನಡುವೆ ಟಾಕ್‌ವಾರ್ ಪ್ರಾರಂಭವಾಗಿದೆ. ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎನ್ನುವ ವಿಚಾರ ದೇಶದಾದ್ಯಂತ ಚರ್ಚೆಯಾಗಬೇಕು. ಅಲ್ಲದೇ ಈ ನಿಟ್ಟಿನಲ್ಲಿ ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆಯಾಗಬೇಕು ಎಂದು ಸಹ ಪವನ್ ಅವರು ಆಗ್ರಹಿಸಿದ್ದರು. ಇದಕ್ಕೆ ಕಿಡಿಕಾರಿದ್ದ ಪ್ರಕಾಶ್ ರಾಜ್ ಅವರು, ಇದು ನೀವು ಉಪ ಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲೇ ಆಗಿದೆ. ನೀವು ಏಕೆ ಕ್ರಮ ತೆಗೆದುಕೊಳ್ಳಬಾರದು. ದೇಶದಲ್ಲಿ ಈಗಾಗಲೇ ಹಲವು ಕೋಮುಸೂಕ್ಷ್ಮ ಸಮಸ್ಯೆಗಳಿವೆ. ನೀವು ಹೊಸದಾಗಿ ಸೃಷ್ಟಿ ಮಾಡಬೇಡಿ ಎಂದು ಆಗ್ರಹಿಸಿದ್ದರು. ಅಲ್ಲಿಂದ ಈ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ.

ಇದೀಗ ಪ್ರಕಾಶ್ ರಾಜ್ ಸರಣಿ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಪ್ರಕಾಶ್‌ರಾಜ್ ಪವನ್ ಕಲ್ಯಾಣ್ ಹೆಸರನ್ನು ಎಲ್ಲಿಯೂ ನೇರವಾಗಿ ಉಲ್ಲೇಖ ಮಾಡದಿದ್ದರೂ, ಅವರನ್ನೇ ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ಮಾಡಿರುವ ಈ ಟ್ವೀಟ್‌ಗಳು ಇದೀಗ ಭಾರೀ ವೈರಲ್ ಆಗಿವೆ.
ಪ್ರಕಾಶ್ ರಾಜ್ ಮಾಡಿರುವ ಟ್ವೀಟ್‌ಗಳೇನು ?
ಪವನ್ ಕಲ್ಯಾಣ್ ಅವರನ್ನು ಉದ್ದೇಶಿಸಿ (ಪರೋಕ್ಷವಾಗಿ) ಪ್ರಕಾಶ್ ರಾಜ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಗೆಲ್ಲುವುದಕ್ಕೆ ಮುಂಚೆ ಒಂದು ಅವತಾರ, ಗೆದ್ದ ಮೇಲೆ ಒಂದು ಅವತಾರ. ಏನಿದು ಅವಾಂತರ. ಯಾಕೆ ನಮಗೆ ಈ ಅಯೋಮಯ, ಯಾವುದು ನಿಜ ಎಂದು ಪ್ರಕಾಶ್‌ರಾಜ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಎಲ್ಲಿಯೂ ಪ್ರಕಾಶ್‌ರಾಜ್ ಅವರು ಪವನ್ ಕಲ್ಯಾಣ್ ಅವರ ಹೆಸರು ಉಲ್ಲೇಖಿಸಿಲ್ಲ. ಆದರೆ, ಅವರನ್ನೇ ಗುರಿಯಾಗಿಸಿದ್ದಾರೆ. ಚುನಾವಣೆ ಪೂರ್ವದಲ್ಲಿ ಪವನ್ ಅವರು ಎಲ್ಲ ಸಮುದಾಯದೊಂದಿಗೂ ಸೇರಿ ಸಭೆ, ಊಟ ಮಾಡುತ್ತಿದ್ದ ವಿಡಿಯೋಗಳು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
గెలిచేముందు ఒక అవతారం... గెలిచిన తర్వాత ఇంకో అవతారం..
— Prakash Raj (@prakashraaj) September 26, 2024
ఏంటీ అవాంతరం.. ఏందుకు మనకీ అయోమయం… ఏది నిజం?
జస్ట్ ఆస్కింగ్? #justasking
ಇನ್ನು ಮತ್ತೊಂದು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ ಅವರು, ನಮಗೆ ಏನು ಬೇಕು... ಜನರ ಭಾವನೆಗಳನ್ನು ಕೆರಳಿಸಿ.. ಅದರಿಂದ ರಾಜಕೀಯ ಲಾಭಪಡೆಯುವುದೇ ಎಂದು ಅವರು ಪ್ರಶ್ನಿಸಿದ್ದಾರೆ. ಇಲ್ಲವೇ ಜನರ ಭಾವನೆಗೆ ನೋವುಂಟಾಗದಂತೆ ಆಡಳಿತಾತ್ಮಕವಾಗಿ, ಅಗತ್ಯವಿದ್ದರೆ ಕಠಿಣ ಕ್ರಮ.. ಸರಳವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾ ? ಎಂದು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ಅವರು ತೆಲುಗಿನಲ್ಲೇ ಟ್ವೀಟ್ ಮಾಡಿದ್ದಾರೆ. ಆದರೆ, ಈ ವಾಕ್ಯಗಳು (ಸಾಲು) ಪೂರ್ಣವಾಗಿಲ್ಲ. ಬಿಡಿ ಬಿಡಿ ಸಾಲುಗಳಾಗಿವೆ.
మనకేం కావాలి...
— Prakash Raj (@prakashraaj) September 27, 2024
ప్రజల్లో భావోద్వేగాలను రెచ్చగొట్టి ..తద్వారా రాజకీయ లబ్ధిని సాధించటమా..?
లేక ప్రజల మనోభావాలు
గాయపడకుండా..పరిపాలనా సంబంధమైన..అవసరమైతే తీవ్రమైన చర్యలతో.. సున్నితంగా సమస్యను పరిష్కరించుకోవటమా..?
జస్ట్ ఆస్కింగ్ #justasking
ಅವರು ಟ್ವೀಟ್ ವಾಕ್ಯ ರಚನೆ ಮಾಡಿದರೆ, ನಮಗೆ ಬೇಕಿರುವುದು ಏನು, ಜನರ ಭಾವನೆಗಳನ್ನು ಕೆರಳಿಸಿ ಅದರಿಂದ ರಾಜಕೀಯ ಲಾಭ ಪಡೆಯುವುದೇ. ಇಲ್ಲವೇ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಳಿತ ನಡೆಸಿ. ಅಗತ್ಯಕ್ಕೆ ಅನುಸಾರ ಕಠಿಣ ಕ್ರಮ ತೆಗೆದುಕೊಂಡು ಸರಳವಾಗಿ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಬೇಕಲ್ಲವೇ ಎನ್ನುವ ಅರ್ಥವನ್ನು ಈ ಟ್ವೀಟ್ ಕೊಡುತ್ತದೆ.












Click it and Unblock the Notifications