ಅನುಪಮ್ ಖೇರ್ ಗೆ ವೀಸಾ ನೀಡಲು ಪಾಕಿಸ್ತಾನ ನಕಾರ!
ಮುಂಬೈ, ಫೆ. 02: ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ವೀಸಾ ನೀಡಲು ಪಾಕಿಸ್ತಾನ ನಿರಾಕರಿಸಿದ ಸುದ್ದಿ ಬಂದಿದೆ. ಕರಾಚಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಲು ಅನುಮತಿ ಕೋರಿ ಖೇರ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಫೆಬ್ರವತಿ 05ರಂದು ಕರಾಚಿಯಲ್ಲಿ ಕಾರ್ಯಕ್ರಮವಿದ್ದು, ಇದಕ್ಕಾಗಿ ನಾನು ಮುಂಚಿತವಾಗಿ ವೀಸಾಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ನನಗೆ ತುಂಬಾ ಬೇಸರವಾಗಿದೆ. ಅರ್ಜಿ ಸಲ್ಲಿಸಿದ್ದ 18ಜನರ ಪೈಕಿ 17 ಜನರಿಗೆ ವೀಸಾ ಸಿಕ್ಕಿದೆ. ನನಗೆ ಮಾತ್ರ ವೀಸಾ ನಿರಾಕರಿಸಲಾಗಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ಜೊತೆ ದುಃಖ ತೋಡಿಕೊಂಡಿದ್ದಾರೆ.

"Delay is the deadliest form of denial.":)
— Anupam Kher (@AnupamPkher) February 2, 2016
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ರಾಯಭಾರಿ ಕಚೇರಿ, ಅನುಪಮ್ ಖೇರ್ ಅವರ ವೀಸಾ ಅರ್ಜಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸ್ವಲ್ಪ ತಾಳ್ಮೆಯಿಂದಿರಿ ಎಂದಿದೆ.












Click it and Unblock the Notifications