ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

247 ದಿನದ ಬಳಿಕ ಮೊದಲ ಬಾರಿಗೆ ದೇಶದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣ ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 31: ದೇಶದಲ್ಲಿ ಇಂದು 12,830 ಮಂದಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆಯು 3,42,73,300 ಕ್ಕೆ ಏರಿಕೆ ಆಗಿದೆ. ಈ ನಡುವೆ ದೇಶದಲ್ಲಿ 247 ದಿನದ ಬಳಿಕ ಮೊದಲ ಬಾರಿಗೆ ಕೋವಿಡ್‌ ಸಕ್ರಿಯ ಪ್ರಕರಣ ಕಡಿಮೆ ಆಗಿದೆ.

ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಡೇಟಾದ ಪ್ರಕಾರ ದೇಶದಲ್ಲಿ ಸಕ್ರಿಯ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆಯು 1,59,272 ಕ್ಕೆ ಇಳಿಕೆ ಕಂಡಿದ್ದು, ಸುಮಾರು 247 ದಿನದ ಬಳಿಕ ಮೊದಲ ಬಾರಿಗೆ ಕೋವಿಡ್‌ ಸಕ್ರಿಯ ಪ್ರಕರಣ ಕಡಿಮೆ ಆಗಿದೆ. ಇನ್ನು ಈ ನಡುವೆ ದೇಶದಲ್ಲಿ ಒಂದು ದಿನದಲ್ಲೇ 446 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯು 4,58,186 ಏರಿಕೆ ಆಗಿದೆ ಎಂದು ವರದಿಯು ಹೇಳಿದೆ.

 ಕೋವಿಡ್‌ನಿಂದ ದೂರ ಮಾಡಲು ಮಾಸ್ಕ್‌ ಸಹಾಯಕ: ಆಕ್ಸ್‌ಫರ್ಡ್ ಅಧ್ಯಯನ ಕೋವಿಡ್‌ನಿಂದ ದೂರ ಮಾಡಲು ಮಾಸ್ಕ್‌ ಸಹಾಯಕ: ಆಕ್ಸ್‌ಫರ್ಡ್ ಅಧ್ಯಯನ

ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ದೈನಂದಿನ ಏರಿಕೆಯು ಕಳೆದ 23 ದಿನಗಳಿಂದ 20,000 ಕ್ಕಿಂತ ಕಡಿಮೆಯಾಗಿದೆ. ಹಾಗೆಯೇ ಈಗ ಸತತ 126 ದಿನಗಳಿಂದ 50,000 ಕ್ಕಿಂತ ಕಡಿಮೆ ದೈನಂದಿನ ಕೊರೊನಾ ವೈರಸ್‌ನ ಹೊಸ ಸೋಂಕು ಪ್ರಕರಣಗಳು ವರದಿ ಆಗುತ್ತಿದೆ. ಸಕ್ರಿಯ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಈಗ ಶೇಕಡ 0.46 ರಷ್ಟು ಇದ್ದು, ಇದು ಮಾರ್ಚ್ 2020 ರಿಂದ ಮೊದಲ ಬಾರಿಗೆ ಕಡಿಮೆ ಆಗಿದೆ. ಈ ನಡುವೆ ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡವರ ದರವು 8.20 ಪ್ರತಿಶತದಷ್ಟು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Active Covid cases in India lowest in 247 days

ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್‌ ಸೋಂಕು ಸಕ್ರಿಯ ಪ್ರಕರಣಗಳಲ್ಲಿ 2,283 ಸೋಂಕು ಪ್ರಕರಣಗಳು ಇಳಿಕೆ ಕಂಡಿದೆ. ಇನ್ನು ಕಳೆದ ಈವರೆಗೆ ಭಾರತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖ ಹೊಂದಿದವರ ಸಂಖ್ಯೆಯು 3,36,55,842 ಕ್ಕೆ ಏರಿಕೆ ಆಗಿದೆ. ಈ ಮಧ್ಯೆ ಕೋವಿಡ್‌ ಸಾವು ಪ್ರಕರಣಗಳ ದರವು ಶೇಕಡ 1.34 ಆಗಿದೆ.

ಕಳೆದ 27 ದಿನಗಳಿಗಿಂತ ಹಿಂದಿಗಿಂತ ಈಗ ದೈನಂದಿನ ಪಾಸಿಟಿವಿಟಿ ದರವು ಶೇಕಡ 2 ರಷ್ಟು ಕಡಿಮೆ ಆಗಿದೆ. ಈಗ ದೈನಂದಿನ ಪಾಸಿಟಿವಿಟಿ ದರವು ಶೇಕಡ 1.13 ಆಗಿದೆ. ಇನ್ನು ಈ ನಡುವೆ ವಾರದ ಕೋವಿಡ್‌ ಪಾಸಿಟಿವಿಟಿ ದರವು ಶೇಕಡ 1.18 ಇದೆ. ಕಳೆದ 37 ದಿನಗಳಲ್ಲಿ ವಾರದ ಕೋವಿಡ್‌ ಪಾಸಿಟಿವಿಟಿ ದರವು ಶೇಕಡ 2 ರಷ್ಟು ಇಳಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಉಲ್ಲೇಖ ಮಾಡಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 106.14 ಕೋಟಿಗಿಂತಲೂ ಅಧಿಕ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ.

 ಶಬರಿಮಲೆ ವಾರ್ಷಿಕ ತೀರ್ಥಯಾತ್ರೆ: ಈಗಲೇ 10 ಲಕ್ಷಕ್ಕೂ ಅಧಿಕ ನೋಂದಣಿ! ಶಬರಿಮಲೆ ವಾರ್ಷಿಕ ತೀರ್ಥಯಾತ್ರೆ: ಈಗಲೇ 10 ಲಕ್ಷಕ್ಕೂ ಅಧಿಕ ನೋಂದಣಿ!

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಆದ ಹಂತಗಳು

ಭಾರತದ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಆಗಸ್ಟ್ 7, 2020 ರಲ್ಲಿ 20 ಲಕ್ಷವನ್ನು ದಾಟಿದೆ. ಬಳಿಕ ಆಗಸ್ಟ್ 23 ರಂದು ಭಾರತದ ಕೋವಿಡ್‌ ಪ್ರಕರಣಗಳ ಸಂಖ್ಯೆಯು 30 ಲಕ್ಷವನ್ನು ದಾಟಿದೆ. ಆ ಬಳಿಕ ಸೆಪ್ಟೆಂಬರ್‌ 5 ರಂದು ದೇಶದಲ್ಲಿ ಕೋವಿಡ್‌ ಪ್ರಕಣಗಳ ಸಂಖ್ಯೆಯು 40 ಲಕ್ಷವನ್ನು ದಾಟಿದೆ. ಆ ನಂತರ ಸೆಪ್ಟೆಂಬರ್‌ 16 ರಂದು ದೇಶದಲ್ಲಿ ಕೋವಿಡ್‌ ಪ್ರಕರಣವು 50 ಲಕ್ಷದ ಗಡಿಯನ್ನು ದಾಟುವ ಮೂಲಕ ದೇಶದಲ್ಲಿ ಆತಂಕವು ಮತ್ತಷ್ಟು ಹೆಚ್ಚಳವಾಗಲು ಕಾರಣವಾಗಿದೆ. ಇನ್ನು ಸೆಪ್ಟೆಂಬರ್‌ 28 ರಂದು ಕೋವಿಡ್‌ ಪ್ರಕರಣಗಳ ಸಂಖ್ಯೆಯು 60 ಲಕ್ಷಕ್ಕೆ ಏರಿಕೆ ಆಗಿದೆ. ಅಕ್ಟೋಬರ್‌ 11 ಆಗುತ್ತಿದ್ದಂತೆ ಕೋವಿಡ್‌ ಪ್ರಕರಣ ದೇಶದಲ್ಲಿ 70 ಲಕ್ಷದ ಗಡಿಯನ್ನು ದಾಟಿದೆ. ಆ ಬಳಿಕ ಅಕ್ಟೋಬರ್‌ 29, 2020 ರಲ್ಲಿ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 80 ಲಕ್ಷದ ಗಡಿಯನ್ನು ದಾಟಿದೆ. ನವೆಂಬರ್‌ 20 ರಂದು 90 ಲಕ್ಷಕ್ಕೆ ಏರಿಕೆ ಆಗಿದ್ದು, ಡಿಸೆಂಬರ್‌ 19 ರಂದು ಒಂದು ಕೋಟಿಯನ್ನು ತಲುಪಿದೆ. ಹಾಗೆಯೇ ಬಳಿಕ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಎರಡು ಕೋಟಿಯ ಗಡಿಯನ್ನು 2021 ರ ಮೇ ತಿಂಗಳಿನ 4 ರಂದು ದಾಟಿದ್ದು ಮೂರು ಕೋಟಿಯ ಗಡಿಯನ್ನು ಜೂನ್‌ 23 ರಂದು ದಾಟಿದೆ.

(ಒನ್‌ಇಂಡಿಯಾ ಸುದ್ದಿ)

English summary
Active Covid cases in country lowest in 247 days. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X