ರೈಲು ಮಾರ್ಗದ ಲೋಪದೋಷಗಳೇ ಅಪಘಾತಕ್ಕೆ ಕಾರಣ: ಎನ್ಐಎ

Posted By:
Subscribe to Oneindia Kannada

ಕಾನ್ಪುರ, ಜನವರಿ 28: ಇಲ್ಲಿನ ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾದಳ ತನ್ನ ಪರಿಶೀಲನೆ ಮುಂದುವೆರಸಿದ್ದು, ವಿಧ್ವಂಸಕ ಕೃತ್ಯ ಕುರಿತ ಯಾವುದೇ ಪುರಾವೆ ದೊರೆತಿಲ್ಲ ಎಂದಿದ್ದಾರೆ. ರೈಲ್ವೆ ಮಾರ್ಗದ ಲೋಪದೋಷಗಳೇ ಅಪಘಾತಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 20ರಂದು ಕಾನ್ಪುರದಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ 150ಕ್ಕೂ ಹೆಚ್ಚು ಜೀವಹಾನಿ ಸಂಭವಿಸಿತ್ತು. ಅಲ್ಲದೆ ಬಿಹಾರದ ಪೊಲೀಸರು ಈ ಘಟನೆ ಸಂಭವಿಸಲು ಐಎಸ್ಐ ಸಂಘಟನೆ ಕಾರಣ ಎಂದಿದ್ದರು. ಹೀಗಾಗಿ ಗೃಹಸಚಿವರು ಎನ್ಐಎಗೆ ತನಿಖೆಗೆ ಒಪ್ಪಿಸಲಾಗಿತ್ತು. ಈ ಸಂಬಂಧ ಮೇಲ್ನೋಟಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಎನ್ ಐಎ ತಿಳಿಸಿದೆ.[ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]

accident appears to poorly maintained tracks: NIA officials

ಇನ್ನು ರೈಲ್ವೆ ಸುರಕ್ಷತಾ ಆಯೋಗದ ಪ್ರಾಥಮಿಕ ವರದಿಯಲ್ಲಿ ಕ್ಯಾರೆಜ್ ಮತ್ತು ವ್ಯಾಗನ್ನಿನ ತೊಂದರೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ ಚಕ್ರ ಜೋಡಣೆಯಲ್ಲಿಯೂ ಸಮಸ್ಯೆಯಿತ್ತು. ಹಾಗೆ ತರಬೇತುದಾರರೂ ವಯಸ್ಸು ಮೀರಿದವರಿದ್ದರು ಎಂದು ತಿಳಿಸಿದೆ.[ಕಳೆದ ಮೂರು ವರ್ಷಗಳಲ್ಲಿ ನಡೆದ ಭೀಕರ ರೈಲು ದುರಂತಗಳು]

ಈ ಮಧ್ಯೆ ಆಂಧ್ರ ಪ್ರದೇಶದ ಕುನೇರು ಸ್ಥಳದಲ್ಲಿ ನಡೆದ ರೈಲು ಅಪಘಾದಲ್ಲಿ 39 ಮಂದಿ ಸಾವೀಗೀಡಾಗಿದ್ದರು. ಈ ಘಟನೆ ಕುರಿತಂತೆಯೂ ಐದು ಜನರ ಎನ್ಐಎ ತಂಡ ತನಿಖೆ ನಡೆಸಿದ್ದು ಇಲ್ಲಿಯೂ ಯಾವುದೇ ಪುರಾವೆ ದೊರೆತಿಲ್ಲ. ಹೀಗಾಗಿ ತನಿಖಾ ದಳ ಅಧಿಕಾರಿಗಳು ರೈಲ್ವೆ ಹಳಿಗಳ ನಿರ್ವಹಣೆಯ ದೋಷ ಮತ್ತು ರೈಲಿನಲ್ಲಿರುವ ಲೋಪಗಳು ಅವಗಡಕ್ಕೆ ಕಾರಣ ಎಂದಿದ್ದಾರೆ.

accident appears to poorly maintained tracks: NIA officials

ಅವರ ತನಿಖೆಯಲ್ಲಿ ವಿಧ್ವಂಸಕ ವಸ್ತುಗಳಾಗಲಿ ದೊರೆತಿಲ್ಲ. ಕೆಲವು ವೇಳೆ ನಕ್ಸಲೇಟ್ಸ್ ಗಳು ರೈಲ್ವೆಹಳಿಗಳಿಗೆ ತೊಂದರೆ ಮಾಡಿ ಅಪಘಾತ ಸಂಭವಿಸುವಂತೆ ಮಾಡುತ್ತಾರೆ. ಆದರೆ ತನಿಖೆಯಲ್ಲಿ ಅದಾವುದೂ ನಡೆದಿಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Even as the National Investigation continues to probe the Kanpur trainaccident, the Commission of Railway Safety states in its preliminary report states that there is no evidence of sabotage.
Please Wait while comments are loading...