ಎಬಿಪಿ ಸಮೀಕ್ಷೆ: ಮೋದಿ ಹವಾ ದುರ್ಬಲ, ರಾಹುಲ್ ಜನಪ್ರಿಯತೆ ಏರಿಕೆ
Recommended Video

ನವದೆಹಲಿ, ಮೇ 24: 2014ರಲ್ಲಿ ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ. ಇದೇ ವೇಳೆ ರಾಹುಲ್ ಗಾಂಧಿಯವರ ಜನಪ್ರಿಯತೆ ಏರುಗತಿಯಲ್ಲಿದೆ ಎಂದು ಎಬಿಪಿ ನ್ಯೂಸ್-ಸಿಎಸ್ ಡಿಎಸ್-ಲೋಕನೀತಿ ಸಮೀಕ್ಷೆ ಹೇಳಿದೆ.
ದೇಶದಲ್ಲಿ ದಲಿತರು ಮತ್ತು ಆದಿವಾಸಿಗಳು ತಮ್ಮ ಮತವನ್ನು ಮಾತ್ರ ಬದಲಿಸಿಲ್ಲ, ಜೊತೆಗೆ ಪ್ರಧಾನ ಮಂತ್ರಿ ಆಯ್ಕೆಯನ್ನೂ ಬದಲಾಯಿಸಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.
ಕಳೆದ ಜನವರಿಯಲ್ಲಿ ರಾಹುಲ್ ಗಾಂಧಿ ತಮ್ಮ ಪ್ರಧಾನಿಯಾಗಬೇಕು ಎಂದು ಶೇಕಡಾ 18 ದಲಿತರು, ಶೇಕಡಾ 27 ದಲಿತರು ಹೇಳಿದ್ದರು. ಇದೀಗ ಶೇಕಡಾ 25 ದಲಿತರು ಮತ್ತು ಶೇಕಡಾ 30 ದಲಿತರು ರಾಹುಲ್ ಗಾಂಧಿ ತಮ್ಮ ಪ್ರಧಾನಿ ಆಯ್ಕೆ ಎಂದಿದ್ದಾರೆ.

ಇದೇ ವೇಳೆ ಮೋದಿ ಜನಪ್ರಿಯತೆ ಆದಿವಾಸಿಗಳಲ್ಲಿ ಶೇಕಡಾ 35 ರಿಂದ 25ಕ್ಕೆ ಮತ್ತು ದಲಿತರಲ್ಲಿ ಶೇಕಡಾ 42 ರಿಂದ 37ಕ್ಕೆ ಇಳಿಕೆಯಾಗಿದೆ.
ದಲಿತರು ಮತ್ತು ಆದಿವಾಸಿಗಳಲ್ಲಿ ಮಾತ್ರವಲ್ಲ ಉಳಿದ ಸಮುದಾಯಗಳಲ್ಲೂ ರಾಹುಲ್ ಜನಪ್ರಿಯತೆ ಏರುತ್ತಿದೆ. ಇವತ್ತು ನರೇಂದ್ರ ಮೋದಿಯವರು ತಮ್ಮ ಪ್ರಧಾನಿಯಾಗಬೇಕು ಎಂದು ಶೇಕಡಾ 34 ಜನರು ಮತ್ತು ಶೇಕಡಾ 24 ಜನರು ರಾಹುಲ್ ಗಾಂಧಿ ತಮ್ಮ ಪಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ.
ತುಂಬಾ ಕುತೂಹಲಕಾರಿ ಎಂದರೆ ರಾಹುಲ್ ಗಾಂಧಿಯವರ ಲೈಕ್ ಮತ್ತು ಡಿಸ್ಲೈಕ್ ನಡುವಿನ ಅಂತರ ಹೆಚ್ಚಳವಾಗಿದೆ. ಶೇಕಡಾ 43 ಜನರು ರಾಹುಲ್ ಗಾಂಧಿಯವರನ್ನು ಮೆಚ್ಚಿಕೊಂಡರೆ, ಶೇ. 32 ಜನರು ಮಾತ್ರ ಇಷ್ಟವಿಲ್ಲ ಎಂದಿದ್ದಾರೆ. ನರೇಂದ್ರ ಮೋದಿಯವರನ್ನು ಶೇಕಡಾ 43 ಜನರು ಇಷ್ಟಪಟ್ಟರೆ ಶೇಕಡಾ 36 ಜನರು ಇಷ್ಟವಿಲ್ಲ ಎಂದಿದ್ದಾರೆ.












Click it and Unblock the Notifications