AB de Villiers: ತಮ್ಮ ಜೀವನ ಬದಲಿಸಿದ RCB ಹಾಗೂ ಕೈಕೊಟ್ಟ DC ಬಗ್ಗೆ Mr 360 ಹೇಳಿದ್ದೇನು ಗೊತ್ತಾ?
ನವದೆಹಲಿ, ಡಿಸೆಂಬರ್, 03: ಮಿಸ್ಟರ್ 360 ಅಂತಲೇ ಪ್ರಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್‌ಗೆ ಆರ್‌ಸಿಬಿಯಲ್ಲಿ ಒಂದು ಸ್ಥಾನವನ್ನು ನೀಡಿದ್ದಾರೆ. ಆ ಸ್ಥಾನವೇ ಆಪತ್ಭಾಂದವ. ಅಂದರೆ ಎಷ್ಟೋ ಬಾರಿ ಕಡಿಮೆ ಬಾಲ್‌ಗಳಿಗೆ ಹೆಚ್ಚು ರನ್‌ಗಳು ಬೇಕಾಗಿದ್ದರೆ, ಎದುರಾಳಿ ಬೌಳರ್‌ಗಳು ಯಾರೇ ಇದ್ದರೂ ಸರಿ ಭರ್ಜರಿ ಬ್ಯಾಟ್ ಬೀಸಿ ಅವರ ಬೆವರಿಳಿಸುವ ಮೂಲಕ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಅದೇ ಆಪತ್ಭಾಂದವ ಇದೀಗ ಐಪಿಎಲ್ ಜೀವನದ ಬದಲಾವಣೆ ಹಾದಿಯನ್ನು ಮೆಲುಕು ಹಾಕಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್‌ಬಿ ತಂಡದ ಆಟಗಾರ ಮಿಸ್ಟರ್ 360 ಅಂತಲೇ ಪ್ರಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ಒಂದು ತಾಸುಗಟ್ಟಲೇ ವಿವರ ಕೊಡುವುದಲ್ಲದೇ, ಆಟದ ಕಾರ್ಯವೈಖರಿಯ ಮಾಹಿತಿಯನ್ನೇ ಬಿಚ್ಚಿಡುತ್ತಾರೆ. ಇನ್ನು ಎಬಿಡಿ ಅವರು ಐಪಿಎಲ್ನಲ್ಲಿ ತನ್ನ ಜೀವನ ಹೇಗೆ ಬದಲಾವಣೆ ಆಯಿತು ಎನ್ನುವ ಬಗ್ಗೆ ಮನ ಬಿಚ್ಚಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಲ್ಲದೆ ಅವರು ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಹೇಗೆ ಮೋಸ ಮಾಡಿತು ಎಂಬುದರ ಕುರಿತು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ಗಮನಿಸಿ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಖ್ಯಾತ ಆಟಗಾರರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಅವರು, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮೆಕ್‌ಗ್ರಾತ್ ಅವರೊಂದಿಗೆ ಕಳೆದ ಕ್ಷಣಗಳ ಕುರಿತು ನೆನೆದಿದ್ದಾರೆ. ನನ್ನ ಐಪಿಎಲ್ ಪ್ರಯಾಣ 2008ರಿಂದಲೇ ಪ್ರಾರಂಭ ಆಯಿತು. ಚೊಚ್ಚಲ ಐಪಿಎಲ್ ನನಗೆ ಸೇರಿದಂತೆ ಬಹಳಷ್ಟು ಆಟಗಾರರಿಗೆ ದೊಡ್ಡ ಸಂದರ್ಭ ಆಗಿತ್ತು. ಐಪಿಎಲ್ ಆರಂಭವು ನನ್ನ ಜೀವನವನ್ನು ಬದಲಾಯಿಸಿತು ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯಿಂದ ಬೆಂಕಿ ಪ್ರದರ್ಶನ; ಎಬಿಡಿ ಭವಿಷ್ಯ
ನಾನು ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಾಯನ್ ಚಾಲೇಂಜರ್ಸ್ ಬೆಂಗಲೂರು ಜೊತೆಗಿನ ನನ್ನ ಸಮಯ ಒಂದು ಅದ್ಭುತ ಕ್ಷಣವಾಗಿದೆ. ಇನ್ನೂ ಹಿಂದೆ ಹೋದರೆ ಗ್ಲೆನ್ ಮೆಕ್‌ಗ್ರಾತ್ ಅವರೊಂದಿಗೆ ಕಳೆದ ಕ್ಷಣಗಳು ಈಗಲೂ ಕಣ್ಣ ಮುಂದೆ ಬರುತ್ತವೆ. ಆದರೆ ಮೊದಲ ಮೂರು ಐಪಿಎಲ್ ಸೀಸನ್‌ಗಳ ನಂತರ ಅಂದಿನ ಡೆಲ್ಲಿ ಡೇರ್ ಡೆವಿಲ್ಸ್ ನನಗೆ ಮೋಸ ಮಾಡಿತು. ಮಾತು ಕೊಟ್ಟು ಕೊನೆಗೆ ನನ್ನನ್ನು ಬಿಟ್ಟುಕೊಟ್ಟಿತು ಎಂದು ನೋವು ತೋಡಿಕೊಂಡರು.
ಆರ್‌ಸಿಬಿ ತಂಡಕ್ಕೆ ಹೋಗುವ ಮುನ್ನ 2010ರಲ್ಲಿ ಡೆಲ್ಲಿಗೆ ಆಡುತ್ತಿದ್ದೆ. 2011ರ ಆವೃತ್ತಿಯ ಹರಾಜಿಗೂ ಮುನ್ನ ನನ್ನನ್ನು ಉಳಿಸಿಕೊಳ್ಳುವುದಾಗಿ ಡೆಲ್ಲಿ ಫ್ರಾಂಚೈಸಿ ಮಾತು ಕೊಟ್ಟಿತ್ತು. ಈ ವಿಚಾರ ಹೇಳುವ ಸಲುವಾಗಿ ನನ್ನನ್ನು ಕಚೇರಿಗೂ ಕರೆಸಿಕೊಂಡಿತ್ತು. ಡೇವಿಡ್ ವಾರ್ನರ್ ಸಹ ಜೊತೆಗಿದ್ದರು. ನಿಮ್ಮನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಒಂದೆರಡು ವಾರಗಳ ನಂತರ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು. ಇದು ದೊಡ್ಡ ಆಶ್ಚರ್ಯವನ್ನುಂಟು ಮಾಡಿತು ಎಂದು ಅಸಮಾಧಾನ ಹೊರಹಾಕಿದರು.
ಅಂದು ನನ್ನೊಂದಿಗೆ ನಡೆಸಿದ್ದ ಸಂವಹನಕ್ಕೆ ಬೆಲ ಸಿಗಲಿಲ್ಲ. ಆದರೆ ಇದು ಉತ್ತಮ ನಡೆಯಲ್ಲ ಎಂದು ಎಬಿಡಿ ಕಿಡಿಕಾರಿದರು. 39 ವರ್ಷದ ಎಬಿಡಿ, ಹರಾಜಿಗೂ ಮೊದಲು ನಾನು ತುಂಬಾ ಆತಂಕಕ್ಕೆ ಒಳಗಾಗಿದ್ದೆ. ಅವರ ನಡೆಯಿಂದ ನನ್ನ ವೃತ್ತಿಜೀವನದ ಬಗ್ಗೆ ಸ್ಪಷ್ಟತೆ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಆ ಐಪಿಎಲ್ ಸೀಸನ್‌ನಲ್ಲಿ (2010) ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನನ್ನ ಮನಸ್ಸಿನಲ್ಲಿ ಬಹಳಷ್ಟು ಅನುಮಾನಗಳು ಹರಿದಾಡಿದ್ದವು ಎಂದು ಅಳಲು ವ್ಯಕ್ತಪಡಿಸಿದರು.
ಡೆಲ್ಲಿ ಡೇರ್ ಡೆವಿಲ್ಸ್ ತನಗೆ ಮೋಸ ಮಾಡಿದರೂ ಆರ್‌ಸಿಬಿ ತನ್ನ ಜೀವನ ಬದಲಿಸಿತು. ನಾನು ಅಂದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಆಡುತ್ತಿದ್ದೆ. ಡೆಲ್ಲಿ ಕೈಬಿಟ್ಟರೂ ಅದೃಷ್ಟವಶಾತ್ ನನಗೆ ಹರಾಜಿನಲ್ಲಿ ಖರೀದಿ ಆದೆ. ಆರ್‌ಸಿಬಿ ನನ್ನನ್ನು ಖರೀದಿಸಿತು. ಆ ಘಟನೆ ನನ್ನ ಜೀವನವನ್ನು ಶಾಶ್ವತವಾಗಿ ಬದಲಾಯಿಸಿತು ಎಂದು ಹೇಳಿದರು.
ನಾನು ಮೊದಲು ಹೆದರಿಕೊಂಡಿದ್ದೆ. ಖರೀದಿಯಾಗುತ್ತೇನಾ ಇಲ್ಲವೋ ಎನ್ನುವ ಆತಂಕದಲ್ಲಿದ್ದೆ. ನಂತರ ಟ್ವಿಟರ್ನಲ್ಲಿ ನನ್ನನ್ನು ಆಯ್ಕೆ ಮಾಡಿದೆ ಎಂಬ ಸುದ್ದಿ ಹಬ್ಬಿತು. ಅದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕರೆ ಮಾಡಿದರು. ಇದೇ ವೇಳೆ ತಂಡಗಳಿಂದ ಬಿಡುಗಡೆಯಾದ ಆಟಗಾರರಿಗೆ ಸಲಹೆ ಒಂದನ್ನು ಕೊಟ್ಟಿದ್ದಾರೆ. ತಂಡಗಳಿಂದ ಬಿಡುಗಡೆಯಾದ ಆಟಗಾರರು ನಿರಾಸೆ ಅನುಭವಿಸಬೇಡಿ. ಇದೇ ಕೊನೆ ಅಲ್ಲ ಎಂದರು.












Click it and Unblock the Notifications