ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರುಷಿ-ಹೇಮರಾಜ್ ಹತ್ಯಾಕಾಂಡ : ತಲ್ವಾರ್ ದಂಪತಿ ತಪ್ಪಿತಸ್ಥರು

By Mahesh
|
Google Oneindia Kannada News

ನವದೆಹಲಿ, ನ.25: ಪುತ್ರಿ ಆರುಷಿ ತಲ್ವಾರ್ ಮತ್ತು ಹೇಮರಾಜ್ ಕೊಲೆ ಪ್ರಕರಣ ಹತ್ತು ಹಲವು ತಿರುವುಗಳನ್ನು ಪಡೆದುಕೊಂಡು ಕೊನೆಗೂ ಗಾಜಿಯಾಬಾದಿನ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ. ತಲ್ವಾರ್ ದಂಪತಿಗಳೇ ಆರುಷಿ ತಲ್ವಾರ್ ಹಾಗೂ ಹೇಮರಾಜ್ ಅವರನ್ನು ಕೊಂದಿದ್ದು ಎಂದು ವಿಶೇಷ ನ್ಯಾಯಮೂರ್ತಿ ಎಸ್.ಲಾಲ್ ಅವರು ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣ ಮಂಗಳವಾರ ಪ್ರಕಟಿಸಲಾಗುತ್ತದೆ.

ಜಾಮೀನು ಅರ್ಜಿಯ ಸಂಬಂಧದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ನೂಪುರ್ ಪರ ವಕೀಲರು ಮತ್ತು ಸಿಬಿಐ ತನ್ನ ವಾದವನ್ನು ಮಂಡಿಸಿದ ಮೇಲೆ ನೂಪುರ್ ಜಾಮೀನು ಕುರಿತು ನ್ಯಾಯಾಲಯ ಆದೇಶ ನೀಡಿದೆ. ನೂಪುರ್ ತಲ್ವಾರ್ ಅವರು ದಸ್ನಾ ಜೈಲಿನಲ್ಲಿದ್ದರೆ, ಆಕೆಯ ಪತಿ ರಾಜೇಶ್ ತಲ್ವಾರ್ ಜಾಮೀನ ಮೇಲೆ ಹೊರಗಿದ್ದರು.

ಐಪಿಸಿ ಸೆಕ್ಷನ್ 302, 201 ಸೆಕ್ಷನ್ ಅಡಿಯಲ್ಲಿ ಅಪರಾಧ ಸಾಬೀತಾಗಿದೆ. ಕೋರ್ಟಿನ ಆದೇಶ ಹೊರ ಬೀಳುತ್ತಿದ್ದಂತೆ ಕೋರ್ಟಿನಲ್ಲಿದ್ದ ತಲ್ವಾರ್ ದಂಪತಿಗಳು ಕಣ್ಣೀರಿಟ್ಟಿದ್ದಾರೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅವಳಿ ಕೊಲೆ ಪ್ರಕರಣದಲ್ಲಿ 'ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದ ಕಾರಣ ಅವರಿಗೆ ಜಾಮೀನು ನೀಡಬೇಕು' ಎಂದು ನೂಪುರ್ ಪರ ವಕೀಲರು ತಮ್ಮ ವಾದ ಮಂಡಿಸಿದ್ದರು.

Aarushi-Hemraj murder verdict: Rajesh and Nupur convicted

ಮನೆಯ ಗೇಟಿಗೆ ಹೊರಗಿನಿಂದ ಚಿಲಕ ಹಾಕಿದ್ದು ಕೊಲೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ ಎನ್ನುವ ವಾದವನ್ನು ಸಿಬಿಐ ಯಾಕೆ ತಳ್ಳಿಹಾಕುತ್ತದೆ ಎಂದು ನೂಪುರ್ ವಕೀಲರು ಪ್ರಶ್ನಿಸಿದರು. ಅಲ್ಲದೆ ನೂಪುರ್ ಮಗುವೊಂದರ ತಾಯಿ. ಅಲ್ಲದೆ ಅವರಿಗೆ ಆ ಉದ್ದೇಶ ಇದ್ದರೆ ಹಿಂದಿನ ದಿನ ತನ್ನ ಮಗಳಿಗೆ ಕೆಮೆರಾ ಯಾಕೆ ಖರೀದಿಸಿ ತರುತ್ತಿದ್ದರು ಎಂದು ಪ್ರಶ್ನಿಸಿ ಕೊಲೆಯಲ್ಲಿ ಅವರ ಪಾತ್ರವಿಲ್ಲ ಎಂದು ವಾದಿಸಿದ್ದರು.

ಮಾಧ್ಯಮಗಳಿಂದ ಭಾರಿ ಪ್ರಚಾರ ಪಡೆದ ಈ ಪ್ರಕರಣದ ವರದಿ ಪ್ರಸಾರದ ಮೇಲೆ 2009 ರ ಸುಪ್ರೀಂಕೋರ್ಟ್‌್ ತಡೆ ಒಡ್ಡಿತ್ತು. ಮೊದಲಿಗೆ ಹೇಮರಾಜ್‌ ಆರುಷಿಯನ್ನು ಕೊಲೆ ಮಾಡಿ ದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಶಂಕಿಸಿದ್ದರು. ಆದರೆ ಆತನ ಶವ ತಾರಸಿಯಲ್ಲಿ ಮಾರನೇ ದಿನ ಪತ್ತೆಯಾಗಿದ್ದರಿಂದ ಆತ ಈ ಕೊಲೆ ಮಾಡಿರಲಿಕ್ಕಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು.

ಮಾಧ್ಯಮಗಳು ಕೊಲೆ ಬಗ್ಗೆ ಪದೇ ಪದೇ ವರದಿ ಪ್ರಸಾರ ಮಾಡಲಾರಂಭಿ ಸಿದ್ದರಿಂದ ಗಾಂಭೀರ್ಯ ಅರಿತ ಅಂದಿನ ಮುಖ್ಯಮಂತ್ರಿ ಮಾಯಾವತಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

ಆರುಷಿ ಹಾಗೂ ಹೇಮರಾಜ್ ರನ್ನು ಕೊಂದಿದ್ದು ಯಾರು? ಎಂಬ ಪ್ರಶ್ನೆಯ ಉತ್ತರಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿತ್ತು. 2008ರಲ್ಲಿ 14 ವರ್ಷ ವಯಸ್ಸಿನ ಆರುಷಿ ಹಾಗೂ ಮನೆ ಸಹಾಯಕ ಹೇಮರಾಜ್ ಅವರನ್ನು ಜಲವಾಯು ವಿಹಾರ್ ನಿವಾಸದ ಬಳಿ ಹತ್ಯೆ ಮಾಡಲಾಗಿತ್ತು.

ರಾಜೇಶ್ ಹಾಗೂ ನೂಪುರ್ ತಲ್ವಾರ್ ದಂಪತಿ ಪುತ್ರಿ ಆರುಷಿ ಶವ ಮನೆಯ ಬೆಡ್ ರೂಮಿನಲ್ಲಿ ಮೇ 16, 2008ರಂದು ಕಂಡು ಬಂದಿತ್ತು. ಆರುಷಿ ಕತ್ತು ಕೊಯ್ಯಲಾಗಿತ್ತು. ನೇಪಾಳ ಮೂಲದ ಹೇಮರಾಜ್ ಕೂಡಾ ಕೊಲೆಯಾಗಿದ್ದ. ಮರುದಿನ ಹೇಮರಾಜ್ ಶವ ಮನೆ ಟೇರೆಸ್ ನಲ್ಲಿ ಸಿಕ್ಕಿತ್ತು.

English summary
Aarushi-Hemraj murder verdict: Dr Rajesh and Nupur Talwar convicted. Special CBI court in Ghaziabad gave its verdict today(Nov.25). The Quantum of punishment will be pronounced on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X