ಪಂಜಾಬ್ ಚುನಾವಣೆಯಲ್ಲಿ 'ಎಎಪಿ'ಯ ಗುಪ್ತ ಕ್ಯಾಮೆರಾಗಳ ಕಣ್ಗಾವಲು

Subscribe to Oneindia Kannada

ಚಂಡೀಗಢ, ಫೆಬ್ರವರಿ 3: ದೆಹಲಿ ಚುನಾವಣೆಯಲ್ಲಿ ಗುಪ್ತ ಕ್ಯಾಮೆರಾಗಳ ಮೂಲಕ 'ಕಣ್ಗಾವಲು' ನಡೆಸಿ ಯಶಸ್ವಿಯಾಗಿದ್ದ ಎಎಪಿ ಪಂಜಾಬಿನಲ್ಲಿಯೂ ಅದೇ ತಂತ್ರಕ್ಕೆ ಮೊರೆ ಹೋಗಿದೆ.

ಸುಮಾರು 15,000 ಕಾರ್ಯಕರ್ತರಿಗೆ ಗುಪ್ತ ಕ್ಯಾಮೆರಾಗಳನ್ನು ವಿತರಿಸಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇಡಲು ಸೂಚಿಸಿದೆ. ಒಟ್ಟು "14,200 ಗುಪ್ತ ಕ್ಯಾಮೆರಾಗಳು, ಕೀ ಚೈನ್, ಬಟನ್ ಕ್ಯಾಮೆರಾಗಳನ್ನು ಫೆಬ್ರವರಿ 4ರ ಮತದಾನದ ವೇಳೆ ರಾಜ್ಯದ ಬೇರೆ ಬೇರೆ ಮತಗಟ್ಟೆಗಳಲ್ಲಿ ಬಳಸಲಿದ್ದೇವೆ," ಎಂದು ಎಎಪಿ ನಾಯಕರೊಬ್ಬರು ತಿಳಿಸಿದ್ದಾರೆ.[ಸಮೀಕ್ಷೆ: ಪಂಜಾಬಿನಲ್ಲಿ ಆಮ್ ಆದ್ಮಿ ರಾಜ್ಯಭಾರ, ಗೋವಾ ಅತಂತ್ರ]

ಇದಕ್ಕಾಗಿ ಈಗಾಗಲೇ 15,000 ಜನರಿಗೆ ತರಬೇತಿಯನ್ನೂ ನೀಡಲಾಗಿದೆ. ಹೇಗೆ ಕ್ಯಾಮೆರಾ ಬಳಸಬೇಕು, ಅನುಮಾನಿತ ಚಟುವಟಿಕೆಗಳ ಸಂದರ್ಭ ಹೇಗೆ ದೃಶ್ಯಗಳನ್ನು ಸೆರೆಹಿಡಿಯಬೇಕು ಎಂಬುದನ್ನು ಕಾರ್ಯಕರ್ತರಿಗೆ ಹೇಳಿ ಕೊಡಲಾಗಿದೆ. ಈ ಹಿಂದೆ ಎಎಪಿಯ ಸ್ಪೈ ಕ್ಯಾಮೆರಾಗಳಿಂದಾಗಿಯೇ ದೆಹಲಿ ಚುನಾವಣೆಯಲ್ಲಿ ಹಲವು ಅಕ್ರಮಗಳನ್ನು ಪತ್ತೆಹಚ್ಚಲಾಗಿತ್ತು.

AAP will use spy cameras in Punjab Election

ಈ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿದ ವಿಡಿಯೋ ಮತ್ತು ಆಡಿಯೋಗಳನ್ನು ಚಂಡೀಗಢದಲ್ಲಿರುವ ಕಂಟ್ರೋಲ್ ರೂಮಿಗೆ ಕಳುಹಿಸಲಾಗುತ್ತದೆ. ಒಂದೊಮ್ಮೆ ಇದರಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ನಂತರ ಅವನ್ನು ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳಲು ಕಳುಹಿಸಿ ಕೊಡಲಾಗುತ್ತದೆ.[ಪಂಜಾಬ್: ಒಂದೇ ರಾಜ್ಯಕ್ಕೆ ಎಎಪಿಯಿಂದ ನಾಲ್ಕು ಪ್ರಣಾಳಿಕೆ!]

ಕೆಲವು ಉಪಕರಣಗಳನ್ನು ಎಎಪಿ ಈ ಹಿಂದೆಯೇ ಖರೀದಿಸಿತ್ತು. ಉಳಿದ ಉಪಕರಣಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಈಗಾಗಲೇ ಇರುವ ಪಕ್ಷಗಳು ಹಣ ಮಧ್ಯ ಹಂಚಿ ಮತದಾರರನ್ನು ಖರೀಸುತ್ತವೆ. ಅದನ್ನು ಪತ್ತೆ ಹಚ್ಚಲು ಈ ತಂತ್ರಕ್ಕೆ ಮೊರೆ ಹೋಗಿದ್ದೇವೆ ಎಂದು ಎಎಪಿ ನಾಯಕರು ಹೇಳಿದ್ದಾರೆ.

ಈಗಾಗಲೇ ಯಾವೆಲ್ಲಾ ಸ್ಥಳಗಳಿಗೆ ಕ್ಯಾಮೆರಾಗಳನ್ನು ಕಳುಹಿಸಬೇಕು, ಯಾವೆಲ್ಲಾ ಪ್ರದೇಶಗಳು ಸೂಕ್ಷ ಎಂಬುದನ್ನು ಪಟ್ಟಿ ಮಾಡಲಾಗಿದೆ. ಈ ಸ್ಥಳಗಳ ಮೇಲೆ ಎಎಪಿ ಕಾರ್ಯಕರ್ತರು ವಿಶೇಷ ಕಣ್ಗಾವಲು ಇಡಲಿದ್ದಾರೆ. ಈಗಾಗಲೇ ಚುನಾವಣಾ ಆಯೋಗ ಕೂಡ ವಾಟ್ಸ್ ಅಪ್ ನಂಬರ್ ಕಳುಹಿಸಿ ಕಂಪ್ಲೆಂಟ್ ನೀಡಲು ಹೇಳಿದ್ದು, ಎಎಪಿ ಅದನ್ನೂ ಬಳಸಿಕೊಳ್ಳಲಿದೆ.

ಈ ಹಿಂದೆ ದೆಹಲಿಯಲ್ಲಿ 2000 ಸ್ಪೈ ಕ್ಯಾಮೆರಾಗಳನ್ನು ಬಳಸಲಾಗಿತ್ತು. ಈ ಮೂಲಕ ಹಣ ಮದ್ಯ ನೀಡಿ ಮತರಾರರನ್ನು ಖರೀದಿಸುವ ಹಲವು ಕೃತ್ಯಗಳನ್ನು ತಡೆಯಲಾಗಿತ್ತು.

(ಚಿತ್ರ ಕೃಪೆ: ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the success of ‘surveillance system’ in Delhi assembly elections, AAP plan to adopt the same thing here in Punjab assembly election 2017.
Please Wait while comments are loading...