ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರದೇಶ ಬಿಜೆಪಿಯ 116 ಶಾಸಕರ ಅನರ್ಹತೆಗೆ ಎಎಪಿ ಪಟ್ಟು

By Sachhidananda Acharya
|
Google Oneindia Kannada News

ಭೋಪಾಲ್, ಜನವರಿ 23: ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ರಾಷ್ಟ್ರಪತಿಗಳು ದೆಹಲಿಯ 20 ಎಎಪಿ ಶಾಸಕರನ್ನು ಅನರ್ಹಗೊಳಿಸಿರುವ ಬೆನ್ನಲ್ಲೇ ಇದೀಗ ಬೇರೆ ರಾಜ್ಯಗಳತ್ತ ಆಮ್ ಆದ್ಮಿ ಪಕ್ಷದ ನಾಯಕರು ದೃಷ್ಟಿ ನೆಟ್ಟಿದ್ದಾರೆ.

ಉಳಿದ ಯಾವ ಯಾವ ರಾಜ್ಯಗಳಲ್ಲಿ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬುದರ ಮಾಹಿತಿ ಕಲೆಹಾಕಿ ಅಲ್ಲಿನ ಶಾಸಕರನ್ನೂ ಅನರ್ಹಗೊಳಿಸಿ ಎಂಬ ಬೇಡಿಕೆ ಇಡಲು ಮುಂದಾಗಿದ್ದಾರೆ.

ದೆಹಲಿ ಸಮೀಕ್ಷೆ: 20 ಕ್ಷೇತ್ರದ ಚುನಾವಣೆಯಲ್ಲಿ ಕೇಜ್ರಿಗೆ ಭಾರೀ ಮುಖಭಂಗ!ದೆಹಲಿ ಸಮೀಕ್ಷೆ: 20 ಕ್ಷೇತ್ರದ ಚುನಾವಣೆಯಲ್ಲಿ ಕೇಜ್ರಿಗೆ ಭಾರೀ ಮುಖಭಂಗ!

ಈ ನಿಟ್ಟಿನಲ್ಲಿ ಸೋಮವಾರ ಮಧ್ಯಪ್ರದೇಶ ಬಿಜೆಪಿಯ 116 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಇಲ್ಲಿನ ಎಎಪಿ ಘಟಕ ಆಗ್ರಹಿಸಿದೆ. ಈ ಸಂಬಂಧ ಭೋಪಾಲ್ ನಲ್ಲಿರುವ ಚುನಾವಣಾ ಆಯೋಗಕ್ಕೆ ಎಎಪಿ ಮನವಿಯನ್ನೂ ಸಲ್ಲಿಸಿದೆ.

AAP Seeks Disqualification Of 116 BJP MLAs of Madhya Pradesh

ಆರಂಭದಲ್ಲಿ ಭೋಪಾಲ್ ನಲ್ಲಿ ಚುನಾವಣಾ ಆಯೋಗದ ಕಚೇರಿ ಮುಂದೆ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಸಂವಿಧಾನದ ಅನುಚ್ಛೇದ 191(1) ಮತ್ತು 192 ರ ಅಡಿಯಲ್ಲಿ ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಬಿಜೆಪಿಯ 116 ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದರು.

"ದೆಹಲಿಯಲ್ಲಿ ಎಎಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಅತ್ಯುತ್ಸಾಹ ತೋರಿತು. ಇದೇ ಉತ್ಸಾಹವನ್ನು ಮಧ್ಯ ಪ್ರದೇಶದಲ್ಲೂ ತೋರಿಸುತ್ತದೆ ಎಂದು ಭಾವಿಸಿದ್ದೇವೆ. ಒಂದೊಮ್ಮೆ ಶಾಸಕರ ವಿರುದ್ಧ ಕ್ರಮ ಕೈಗೊಂಡಿದ್ದೇ ಆದಲ್ಲಿ ರಾಜ್ಯ ಸರಕಾರ ಅಲ್ಪ ಮತಕ್ಕೆ ಕುಸಿಯಲಿದೆ," ಎಂದು ರಾಜ್ಯ ಎಎಪಿ ಮುಖ್ಯಸ್ಥ ಅಲೋಕ್ ಅಗರ್ವಾಲ್ ಹೇಳಿದ್ದಾರೆ.

230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 165 ಮತ್ತು ಕಾಂಗ್ರೆಸ್ 55 ಸ್ಥಾನಗಳನ್ನು ಹೊಂದಿವೆ.

20 ಎಎಪಿ ಶಾಸಕರ ಅನರ್ಹತೆಗೆ ರಾಷ್ಟ್ರಪತಿಗಳಿಂದ ಅಂಕಿತ20 ಎಎಪಿ ಶಾಸಕರ ಅನರ್ಹತೆಗೆ ರಾಷ್ಟ್ರಪತಿಗಳಿಂದ ಅಂಕಿತ

ಇದೇ ವೇಳೆ ಅಗರ್ವಾಲ್ ತಾವು ಈ ಸಂಬಂಧ ಚುನಾವಣಾ ಆಯೋಗಕ್ಕೆ ಜುಲೈ 4, 2016ರಲ್ಲೇ ದೂರು ನೀಡಿದ್ದೆ. "ಲಾಭದಾಯಕ ಹುದ್ದೆ ನಿಯಮಗಳನ್ನು ಮತ್ತು ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದರೂ ಒಂದೂವರೆ ವರ್ಷದ ಹಿಂದೆ ದೂರು ನೀಡಿಯೂ ಇಲ್ಲಿಯವರೆಗೆ 116 ಶಾಸಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಕಾನೂನಿನ ಗಂಭೀರ ಉಲ್ಲಂಘನೆ," ಎಂದು ಅವರು ಹೇಳಿದ್ದಾರೆ.

ಆದರೆ ಎಎಪಿ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದ್ದು, ಹತಾಷೆಯಿಂದ ಪಕ್ಷ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದೆ.

English summary
The Aam Aadmi Party (AAP) on Monday demanded that the Election Commission disqualify 116 BJP MLAs in the Madhya Pradesh for holding offices of profit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X