ಹರಿಯಾಣದಂತೆ ಮಹಾರಾಷ್ಟ್ರದಲ್ಲಿ ಮಾಡಲ್ಲ ಎಂದ ಎಎಪಿ: ಕಾಂಗ್ರೆಸ್‌ಗೆ ಖುಷಿಯೋ ಖುಷಿ!

ಹರಿಯಾಣದಲ್ಲಿ ಸ್ಪರ್ಧೆ ಮಾಡುವ ಮೂಲಕ ಆಮ್‌ ಆದ್ಮಿ ಪಾರ್ಟಿ ತನ್ನ ಮಿತ್ರ ಪಕ್ಷಗಳಿಗೆ ಪೈಪೋಟಿ ನೀಡಿತ್ತು. ಆ ತಪ್ಪು ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಾಡದೆ ಇರಲು ಆಮ್‌ ಆದ್ಮಿ ಪಾರ್ಟಿ ನಿರ್ಧರಿಸಿದೆ. ಎಎಪಿಯ ಈ ನಿರ್ಧಾರದಿಂದ ಕಾಂಗ್ರೆಸ್‌ಗೆ ಭಾರೀ ಖುಷಿಯಾಗಿದೆ. ಆದರೆ, ಎಎಪಿ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾಂಗ್ರೆಸ್‌ ಕಾರಣವಲ್ಲ!

ಈಚೆಗೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಚುನಾವಣೆ ಪೂರ್ವ ಸಮೀಕ್ಷೆಗಳು ಸಹ ಇದೇ ಭವಿಷ್ಯವನ್ನು ನುಡಿದಿದ್ದವು. ಆದರೆ, ಹರಿಯಾಣದಲ್ಲಿ ಕಾಂಗ್ರೆಸ್‌ ಲೆಕ್ಕಾಚಾರ ತಲೆಕೆಳಗಾಗಿತ್ತು. ಅದಕ್ಕೆ ಕಾರಣವೂ ಇದೆ. ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ.

AAP said it will not be done in Maharashtra like Haryana Happy for Congress

ಇಲ್ಲಿ ಬಿಜೆಪಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ. ಹರಿಯಾಣದಲ್ಲಿ ಆಮ್‌ ಆದ್ಮಿ ಪಾರ್ಟಿಯು ಸ್ವತಂತ್ರವಾಗಿ ಸ್ಪರ್ಧಿಸಿದ್ದು ಸಹ ಕಾಂಗ್ರೆಸ್‌ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಎಎಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದೆ.

ಇದಕ್ಕೆ ಕಾರಣ ಕಾಂಗ್ರೆಸ್‌ ಪಕ್ಷವಲ್ಲ. ಹರಿಯಾಣದಲ್ಲಿ ಮಾಡಿದ ತಪ್ಪನ್ನು ಮಹಾರಾಷ್ಟ್ರದಲ್ಲಿ ಮಾಡದೆ ಇರಲು ಆಮ್‌ ಆದ್ಮಿ ಪಾರ್ಟಿ ನಿರ್ಧರಿಸಿದೆ. ಹರಿಯಾಣದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಬೇಕಿತ್ತು. ಚುನಾವಣೆ ಪೂರ್ವ ಸಮೀಕ್ಷೆಗಳು ಸಹ ಇದೇ ಭವಿಷ್ಯ ನುಡಿದಿದ್ದವು. ಆದರೆ, ಹಲವು ಕಾರಣಗಳಿಂದ ಅದು ಆಗಿರಲಿಲ್ಲ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಹಾಗೂ ವಿರೋಧ ಪಕ್ಷದಲ್ಲಿರುವ ಮಹಾವಿಕಾಸ ಅಘಾಡಿ. ಮಹಾವಿಕಾಸ ಅಘಾಡಿ ಎನ್ನುವುದು ಕಾಂಗ್ರೆಸ್‌, ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಶರದ್‌ ಪವಾರ್‌) ಪಕ್ಷಗಳ ಒಕ್ಕೂಟವಾಗಿದೆ. ಈ ಪಕ್ಷಗಳ ಪರವಾಗಿ ಎಎಪಿ ಪ್ರಚಾರ ಮಾಡುವುದಾಗಿ ಹೇಳಿದೆ.

ಎಎಪಿಯ ಅಧ್ಯಕ್ಷ ಅರವಿಂದ್‌ ಕ್ರೇಜಿವಾಲ್‌ ಅವರನ್ನು ಮನವೊಲಿಸುವಲ್ಲಿ ಈ ಪಕ್ಷಗಳು ಯಶಸ್ವಿಯಾಗಿವೆ. ಈ ಸಂಬಂಧ ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ನಾಯಕ ಸಂಜಯ್‌ ಹೇಳಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಜಾರ್ಖಂಡ್‌ ಚುನಾವಣೆ ಪ್ರಚಾರದಲ್ಲೂ ಭಾವಹಿಸಲು ಎಎಪಿ ಮುಂದಾಗಿದೆ. ಜಾರ್ಖಂಡ್‌ನಲ್ಲಿ ಮುಕ್ತಿ ಮೋರ್ಚಾ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದೆ. ಜಾರ್ಖಂಡ್‌ನಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷ ಅಧಿಕಾರದಲ್ಲಿ ಇದೆ.

ಮಹಾರಾಷ್ಟ್ರದಲ್ಲಿ ಮಹಾ ರಾಜಕೀಯ ತಿರುವು: ಮಹಾರಾಷ್ಟ್ರದಲ್ಲಿ ನವೆಂಬರ್‌ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಹಲವು ಕಾರಣಕ್ಕೆ ಈ ಬಾರಿ ಚುನಾವಣೆ ಮಹತ್ವ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಎರಡು ಪ್ರಮುಖ ಪಕ್ಷಗಳು ಬಣವಾಗಿವೆ. ಒಂದು ಬಣ ಕಾಂಗ್ರೆಸ್‌ನೊಂದಿಗೆ ಇನ್ನೊಂದು ಬಣ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಮಹಾರಾಷ್ಟ್ರ ವಿಧಾನಸಭೆಯ ಮ್ಯಾಜಿಕ್‌ ನಂಬರ್‌ 145 ಆಗಿದೆ.

ಜಿದ್ದಾಜಿದ್ದಿನ ರಾಜಕೀಯ: ಮಹಾರಾಷ್ಟ್ರ ರಾಜಕೀಯ ಈಗ ಜಿದ್ದಾಜಿದ್ದಿನ ಕಣವಾಗಿದೆ. ಪಕ್ಷ ವಿಭಜಿಸಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಅಜಿತ್‌ ಪವಾರ್‌ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕು ಎನ್ನುವ ತವಕದಲ್ಲಿ ಶರದ್‌ ಪವಾರ್‌ ಇದ್ದಾರೆ. ಇದೇ ಕಾರಣಕ್ಕೆ ಅವರ ಸಹೋದರನ ಮಗನನ್ನೇ ಅಜಿತ್‌ ಪವಾರ್‌ಗೆ ವಿರುದ್ಧವಾಗಿ ಚುನಾವಣಾ ಕಣದಲ್ಲಿ ನಿಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+