ದೆಹಲಿ ಉಪ ಚುನಾವಣೆಯಲ್ಲಿ ಎಎಪಿಗೆ ಭರ್ಜರಿ ಜಯ, ಬಿಜೆಪಿಗೆ ಮುಖಭಂಗ

Subscribe to Oneindia Kannada

ನವದೆಹಲಿ, ಆಗಸ್ಟ್ 28: ದೆಹಲಿಯ ಬವಾನ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಎಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಚುನಾವಣೆಯಲ್ಲಿ ಸೋತು ಬಿಜೆಪಿ ಮತ್ತು ಕಾಂಗ್ರೆಸ್ ಮುಖಭಂಗ ಅನುಭವಿಸಿವೆ.

ಆಮ್ ಆದ್ಮಿ ಪಕ್ಷ ಸಂಘಟನೆ, 'ಮಿಷನ್ - 5000' ಕ್ಕೆ ಚಾಲನೆ

ಎಎಪಿಯ ಅಭ್ಯರ್ಥಿ ರಾಮ್ ಚಂದರ್ 59,886 ಮತಗಳನ್ನು ಪಡೆದು ಭಾರೀ ಗೆಲುವು ಸಾಧಿಸಿದ್ದಾರೆ. ಅವರು 24,052 ಮತಗಳಿಂದ ಬಿಜೆಪಿಯ ವೇದ್ ಪ್ರಕಾಶ್ ವಿರುದ್ಧ ಜಯಗಳಿಸಿದ್ದಾರೆ.

 AAP candidate Ram Chander wins Bawan bi-poll, defeats BJP's Ved Prakash

ಬಿಜೆಪಿಯ ವೇದ ಪ್ರಕಾಶ್ ಕೇವಲ 35,834 ಮತಗಳನ್ನು ಪಡೆದರೆ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್ ನ ಸುರೇಂದರ್ ಕುಮಾರ್ 31,919 ಮತಗಳನ್ನು ಪಡೆಯಲಷ್ಟೇ ಶಕ್ತವಾದರು.

2014ರ ಚುನಾವಣೆಯಲ್ಲಿ ಇಲ್ಲಿ ಎಎಪಿಯಿಂದ ಸ್ಪರ್ಧಿಸಿ ವೇದ ಪ್ರಕಾಶ್ ಗೆಲುವು ಸಾಧಿಸಿದ್ದರು. ಕಳೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ವೇಳೆ ವೇದ ಪ್ರಕಾಶ್ ಎಎಪಿಗೆ ಕೈಕೊಟ್ಟು ಬಿಜೆಪಿ ಸೇರಿದ್ದರು. ಇದೀಗ ಬಿಜೆಪಿಯಿಂದ ಕಣಕ್ಕಿಳಿದು ವೇದ ಪ್ರಕಾಶ್ ಸೋತಿದ್ದಾರೆ. ಇದು ಬಿಜೆಪಿಗೆ ರಾಜಧಾನಿಯಲ್ಲಿ ಭಾರೀ ಮುಖಭಂಗ ಉಂಟು ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AAP candidate Ram Chander wins Delhi’s Bawana bi-poll by defeats BJP's Ved Prakash with the margin of 24052 votes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X