Delhi Election 2025: ದೆಹಲಿಯಲ್ಲಿ ಗುಜರಾತ್ ಭದ್ರತಾ ಪಡೆ ನಿಯೋಜನೆ: ಈ ನಿರ್ಧಾರ ಪ್ರಶ್ನಿಸಿದ ಕೇಜ್ರಿವಾಲ್
ದೆಹಲಿ, ಜನವರಿ 26: ದೆಹಲಿ ವಿಧಾನಸಭಾ ಚುಣಾವಣೆಯು ರಾಜಕೀಯ ಪ್ರಮುಖ ಕೇಂದ್ರ ಬಿಂದುವಾಗುತ್ತಿದೆ. ದಿನೇ ದಿನೆ ವ್ಯಾಪಕ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ತಮ್ಮ ಮೇಲೆ ಬಿಜೆಪಿ ಹೆಸರು ಹೇಳಿಕೊಂಡು ದಾಳಿಗಳು ಆಗುತ್ತಿವೆ ಎಂದು ಆರೋಪಿಸಿದ್ದ ಎಎಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸದ್ಯ ಗುಜರಾತ್ ಭದ್ರತಾ ಸಿಬ್ಬಂದಿ ನಿಯೋಜನೆ ಕುರಿತು ಧ್ವನಿ ಎತ್ತಿದ್ದಾರೆ. ಈ ಕುರಿತು ಚುನಾವಣೆ ಆಯೋಗಕ್ಕೆ ಪ್ರಶ್ನೆ ಮಾಡಿದ್ದಾರೆ.
ಫೆಬ್ರವರಿ 05ರಂದು ದೆಹಲಿ ವಿಧಾನಸಭಾ ಚುನಾವಣೆ ಸಂಬಂಧ ದೆಹಲಿಯಲ್ಲಿ ಗುಜರಾತ್‌ನಿಂದ ರಾಜ್ಯ ಮೀಸಲು ಪೊಲೀಸ್ ಪಡೆ (SRPF)ಯ ಎಂಟು ತುಕಡಿಗಳನ್ನು ನಿಜೋಜಿಸಲಾಗುತ್ತಿದೆ. ಈ ಕುರಿತು ಕೇಂದ್ರ ಚುನಾವಣೆ ಆಯೋಗ ಹೊರಡಿಸಿದ ಆದೇಶವವನ್ನು ಎಎಪಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಆಯೋಗದ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿ ಚುನಾವಣೆ ಸಂಬಂಧ ಈಗಾಗಲೇ ಕೇಂದ್ರ ಚುನಾವಣಾ ಆಯೋಗ (EC) ನೀಡಿದ ಆದೇಶದ ಮೇರೆಗೆ ಗುಜರಾತ್‌ನಿಂದ SRPF ಘಟಕಗಳು ಕಳೆದ ಜನವರಿ 13 ರಂದೆ ದೆಹಲಿಗೆ ನಿಯೋಜನೆಗೊಂಡಿದೆ. ಈ ನಿಯೋಜನ ಕುರಿತು SRPF ಭಚೌನ ಕಮಾಂಡೆಂಟ್ ತೇಜಸ್ ಪಟೇಲ್ ಮಾಹಿತಿ ನೀಡಿದ್ದಾರೆ.
ಈ ವಿಚಾರವನ್ನು ಅರವಿಂದ್ ಕೇಜ್ರಿವಾಲ್ ಅವರು, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಶಸ್ತ್ರ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (DGP) ಕಚೇರಿಯಿಂದ ಹೊರಡಿಸಲಾದ ಸುತ್ತೋಲೆ ಪ್ರತಿ ಪೋಸ್ಟ್ ಮಾಡಿದ್ದಾರೆ. ಪಂಜಾಬ್ ಪೊಲೀಸರನ್ನು ದೆಹಲಿಯಿಂದ ತೆಗೆದು ಹಾಕಿ, ಗುಜರಾತ್ ಪೊಲೀಸರ ಘಟಕಗಳನ್ನು ದೆಹಲಿ ಚುಣಾವಣೆಗೆ ನಿಯೋಜಿಸಲಾಗಿದೆ. ಇಂತಹ ನಿರ್ಧಾರ ಎಷ್ಟು ಸರಿ. ಆದೇಶವನ್ನು ನೀವು ಓದಿ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ಭದ್ರತೆ ನಿಯೋಜನೆಯಲ್ಲೂ ರಾಜಕೀಯ: ಎಎಪಿ ಕಿಡಿ
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದ್ದ ವೈಯಕ್ತಿಕ ಭದ್ರತೆಯನ್ನು ಇತ್ತೀಚೆಗೆ ಪಂಜಾಬ್ ಪೊಲೀಸ್ ಇಲಾಖೆ ಹಿಂತೆಗೆದುಕೊಂಡಿತು. ಇದಕ್ಕೆ ಎಎಪಿ ನಾಯಕರು, ಸಿಎಂ ಅತಿಶಿ ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದಾದ ಬೆನ್ನಲ್ಲೆ ದೆಹಲಿಯಲ್ಲಿ ಪಂಜಾಬ್ ಪೊಲೀಸರ ಬದಲಿಗೆ ಗುಜರಾತ್ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ.
'ಶುದ್ಧ ರಾಜಕೀಯ' ಎನ್ನುವವರು, ಕನಿಷ್ಠ ವೈಯಕ್ತಿಕ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದೆಷ್ಟರ ಮಟ್ಟಿಗೆ ಶುದ್ಧ ರಾಜಕೀಯ. ಇದಕ್ಕೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನ ಹಾಗೂ ದೆಹಲಿ ಪೊಲೀಸರ ನಿರ್ದೇಶನಗಳ ಮೇರೆಗೆ ತಮಗೆ ನೀಡಲಾದ ವೈಯಕ್ತಿಕ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಈಗಾಗಲೇ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಆದರೆ ಇದರ ಹಿಂದೆ ರಾಜಕೀಯ ಇದೆ. ಚುನಾವಣೆ ವೇಳೆ ಇವೆಲ್ಲವು ನಡೆಯುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ಕೇಂದ್ರ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.
ದೆಹಲಿಯ ಎಲ್ಲ 70 ವಿಧಾನಸಭಾ ಸೀಟುಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದೆ. ಸುಮಾರು ಒಂದೂವರೆಗೆ ಕೋಟಿಗೂ ಅಧಿಕ ಇರುವ ಮತದಾರರ ತಮ್ಮ ನೆಚ್ಚಿನ ನಾಯರಕನ್ನು ಆಯ್ಕೆ ಮಾಡಲಿದ್ದಾರೆ. ಮತದಾನ ನಡೆದ ಮೂರು ದಿನದ ಬಳಿಕ ಅಂದರೆ ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದ್ದು, ಅಂದು ದೆಹಲಿ ರಾಜಕೀಯ ಭವಿಷ್ಯ ನಿರ್ಧಾರಗೊಳ್ಳಲಿದೆ.












Click it and Unblock the Notifications