'ದಂಗಲ್' ಝೈರಾ ಬೆಂಬಲಕ್ಕೆ ನಿಂತ ಅಮೀರ್ ಖಾನ್

Posted By:
Subscribe to Oneindia Kannada

ಮುಂಬೈ, ಜನವರಿ 17 : ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಯೀದ್ ಅವರನ್ನು ಭೇಟಿಯಾಗಿದ್ದು ಇಷ್ಟೊಂದು ದೊಡ್ಡ ವಿವಾದವಾಗುತ್ತದೆಂದು ಆ 16 ವರ್ಷದ ಬಾಲಕಿ, ದಂಗಲ್ ಚಿತ್ರದ ನಾಯಕಿ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.

ದಂಗಲ್ ಚಿತ್ರದಲ್ಲಿ ಬಾಲ್ಯದ ಗೀತಾ ಫೋಗಟ್ ಪಾತ್ರ ವಹಿಸಿ ಇಡೀ ಜಗತ್ತಿನ ಗಮನ ಸೆಳೆದಿರುವ ಜಮ್ಮು ಮತ್ತು ಕಾಶ್ಮೀರದ ಚೆಲುವೆ ಝೈರಾ ವಾಸಿಮ್ ಕಡೆಗೆ ಟ್ವಿಟ್ಟರ್ ನಲ್ಲಿ ಕ್ಷಮೆ ಕೋರಬೇಕಾಯಿತು. ಮುಖ್ಯಮಂತ್ರಿಯನ್ನು ಭೇಟಿಯಾದ ತಪ್ಪಿಗೆ ಈಪರಿ ಆಕ್ಷೇಪ ಎದುರಿಸಿದ್ದು ನಿಜಕ್ಕೂ ವಿಪರ್ಯಾಸ. [ಉಲ್ಟಾ ಹೊಡೆದ ಅಮೀರ್: ದೇಶ ಬಿಡುತ್ತೇನೆ ಎಂದು ಹೇಳಿಯೇ ಇಲ್ಲ]

Aamir Khan comes to the support of Zaira Khan

ಕುಸ್ತಿಪಟು ಗೀತಾ ಫೋಗಟ್ ಕೂಡ ಝೈರಾ ವಾಸಿಮ್ ಅವರ ಬೆಂಬಲಕ್ಕೆ ಬಂದಿದ್ದಾರೆ. ಈಗ 'ದಂಗಲ್' ಚಿತ್ರದ ನಿರ್ಮಾಪಕ ಮತ್ತು ಆ ಚಿತ್ರದಲ್ಲಿ ನಿಭಾಯಿಸಿದ ಪಾತ್ರಕ್ಕಾಗಿ ಅತ್ಯುತ್ತಮ ನಟ ಫಿಲ್ಮಫೇರ್ ಪ್ರಶಸ್ತಿ ಪಡೆದ ಅಮೀರ್ ಖಾನ್ ಕೂಡ ಝೈರಾ ಬೆಂಬಲಕ್ಕೆ ಧಾವಿಸಿದ್ದಾರೆ.

ಝೈರಾಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ, ನಾವೆಲ್ಲ ನಿನ್ನ ಜೊತೆಗಿದ್ದೇವೆ ಎಂದು ಹೇಳಿ ಅಮೀರ್ ಖಾನ್ ಅವರು ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ನಿನ್ನಂಥ ಕಷ್ಟಪಟ್ಟು ದುಡಿಯುವ, ಧೈರ್ಯವಾನ್ವಿತ ಬಾಲಕರಿಯರು ಇಂದಿನ ಪೀಳಿಗೆಯವರಿಗೆ ರೋಲ್ ಮಾಡೆಲ್ ಎಂದು ಹೊಗಳಿರುವ ಅಮೀರ್ ಅವರ ಹೇಳಿಕೆ ಇಲ್ಲಿದೆ. [ಕುಸ್ತಿಪಟು ಗೀತಾ ಮದುವೆಯಲ್ಲಿ ಅಮೀರ್ ಮಿಂಚಿಂಗ್!]

"ಝೈರಾಳ ಹೇಳಿಕೆಯನ್ನು ನಾನು ಓದಿದ್ದೇನೆ. ಇಂಥ ಹೇಳಿಕೆ ನೀಡುವಾಗಲು ಸೃಷ್ಟಿಯಾದ ಸನ್ನಿವೇಶವನ್ನೂ ನಾನು ಅರ್ಥಮಾಡಿಕೊಳ್ಳಬಲ್ಲೆ ಮತ್ತು ಕಲ್ಪಿಸಿಕೊಳ್ಳಬಲ್ಲೆ. ಝೈರಾ, ಒಂದು ಮಾತು ನಿನಗೆ ಹೇಳಬಯಸುತ್ತೇನೆ. ನಾವೆಲ್ಲ ನಿನ್ನೊಂದಿಗಿದ್ದೇವೆ.

ನಿನ್ನಂಥ ಅತ್ಯಂತ ಪ್ರತಿಭಾವಂತ, ಕಟ್ಟಪಟ್ಟು ಕೆಲಸ ಮಾಡುವ, ಗೌರವಿಸುವ, ಕಾಳಜಿ ಮಾಡುವ, ಧೈರ್ಯವಂತ ಹುಡುಗಿ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಇಂದಿನ ಪೀಳಿಗೆಯ ಮಕ್ಕಳಿಗೆ ಮಾದರಿ. ನೀನು ನನಗೆ ಕೂಡ ರೋಲ್ ಮಾಡೆಲ್. ನಿನಗೆ ಆ ದೇವರು ಒಳ್ಳೆಯದು ಮಾಡಲಿ.

ವಿಶೇಷ ಸೂಚನೆ : ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ. ಹದಿನಾರನೇ ವಯಸ್ಸಿನಲ್ಲಿ ಉತ್ತಮ ಜೀವನ ನಡೆಸಲು ಪ್ರಯತ್ನಿಸುತ್ತಿರುವ ಆಕೆಯನ್ನು ದಯವಿಟ್ಟು ಎಲ್ಲರೂ ಗೌರವಿಸಿ. ಪ್ರೀತಿಯಿಂದ ಅಮೀರ್."

ದಂಗಲ್ ಕುರಿತು : ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿರುವ ದಂಗಲ್ ಸಿನೆಮಾ, ಹರ್ಯಾಣಾದ ಹಳ್ಳಿಯಲ್ಲಿ ಎಲ್ಲ ವೈರುಧ್ಯಗಳ ವಿರುದ್ಧ ಸೆಣಸಿ ತನ್ನಿಬ್ಬರು ಮಕ್ಕಳಾದ ಗೀತಾ ಮತ್ತು ಬಬೀತಾರನ್ನು ಖ್ಯಾತ ಕುಸ್ತಿಪಟುಗಳನ್ನಾಗಿ ಮಾಡಿದ ಮಹಾವೀರ್ ಸಿಂಗ್ ಫೋಗಟ್ ಅವರ ಹೃದಯಮಿಡಿಯುವ ಕಥೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood star and Hindi movie Dangal producer Aamir Khan has come to the support of Zaira Wasim, who played the role of Geeta Phogat, Aamir says Zaira Wasin is talented, respectful 16-year-old girl and everyone should leave her alone.
Please Wait while comments are loading...