ಮೋದಿ ವಿರುದ್ದ 25 ಕೋಟಿ ಲಂಚ ಪಡೆದ ಗುರುತರ ಆರೋಪ!

Written By:
Subscribe to Oneindia Kannada

ನವದೆಹಲಿ, ನ 15: ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 25 ಕೋಟಿ ಲಂಚ ಪಡೆದಿದ್ದರು ಎಂದು ಆಮ್ ಆದ್ಮಿ ಪಕ್ಷ, ಮೋದಿ ವಿರುದ್ದ ಗುರುತರ ಆರೋಪ ಮಾಡಿದೆ.

ಆದಿತ್ಯ ಬಿರ್ಲಾ ಗ್ರೂಪಿಗೆ ಸಂಬಂಧಿಸಿದ ಪ್ರಾಜೆಕ್ಟ್ ಒಂದಕ್ಕೆ ಹಸಿರು ನಿಶಾನೆ ತೋರಿಸಲು ಬಿರ್ಲಾ ಸಂಸ್ಥೆಯಿಂದ 25 ಕೋಟಿ ಲಂಚ ಪಡೆದಿದ್ದರು ಎಂದು ಆಪ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಿದೆ.

25.10.2013ರಲ್ಲಿ ನವದೆಹಲಿಯ ಆದಿತ್ಯ ಬಿರ್ಲಾ ಸಂಸ್ಥೆಯ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗ ಲಂಚಾವತಾರ ನಡೆದ ಬಗ್ಗೆ ಲ್ಯಾಪ್ ಟಾಪ್ ನಲ್ಲಿ ದಾಖಲಾಗಿದೆ. ದಿನಾಂಕ 16.11.2012ರಲ್ಲಿನ ಈಮೇಲ್ ನಲ್ಲೂ ಈ ಬಗ್ಗೆ ಉಲ್ಲೇಖವಾಗಿದೆ ಎಂದು ಆಪ್, ಮೋದಿ ವಿರುದ್ದ ಗಂಭೀರ ಆರೋಪ ಮಾಡಿದೆ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ಹಾಲೀ ಪ್ರಧಾನಿಯೊಬ್ಬರ ಹೆಸರು ಕಪ್ಪುಹಣದ ವಹಿವಾಟಿನಲ್ಲಿ ದಾಖಲಾಗಿದೆ ಎಂದು ಕೇಜ್ರಿವಾಲ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಬಗ್ಗೆ ಬಿಜೆಪಿಯಿಂದಾಗಲಿ ಅಥವಾ ಪ್ರಧಾನಮಂತ್ರಿ ಕಚೇರಿಯಿಂದಾಗಲಿ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರ ನಡುವೆ ರಾಷ್ಟ್ರೀಯ ಮಟ್ಟದಲ್ಲಿ #ModiTakesBribes ಟ್ರೆಂಡಿಂಗ್ ನಲ್ಲಿದೆ. ಮುಂದೆ ಓದಿ..

ಎಎನ್ಐ ಸುದ್ದಿಸಂಸ್ಥೆಯ ಟ್ವೀಟ್

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರ ಹೆಸರು ಲಂಚಾವತಾರದಲ್ಲಿ ತುಳುಕು ಹಾಕುತ್ತಿದೆ.

ದಾಖಲೆಯಲ್ಲಿ ರುಜುವಾತು

ಆದಾಯ ತೆರಿಗೆಯ ದಾಖಲೆಯ ಪ್ರಕಾರ ಮೋದಿ ಲಂಚ ತೆಗೆದುಕೊಂಡಿದ್ದು ರುಜುವಾತು.

ಹೀಗೊಂದು ಟ್ವೀಟ್

ಲಂಚ ಪಡೆದದ್ದು 25 ಕೋಟಿ, ಮನ್ನಾ ಮಾಡಿದ್ದು 1.14 ಸಾವಿರ ಕೋಟಿ.

ಆಪ್ ಈ ಅಂಕಿ ಅಂಶವನ್ನೊಮ್ಮೆ ನೋಡಲಿ

ಆಮ್ ಆದ್ಮಿ ಪಕ್ಷ ಈ ಅಂಕಿ ಅಂಶವನ್ನೊಮ್ಮೆ ನೋಡಲಿ.

ನಾಚಿಕೆಯಾಗಬೇಕು

ಈ ವ್ಯಕ್ತಿ ನಮ್ಮ ಪ್ರಧಾನಿ ಮತ್ತು ಹನ್ನೆರಡು ವರ್ಷ ನನ್ನ ರಾಜ್ಯದ ಸಿಎಂ ಆಗಿದ್ದರು ಎನ್ನುವುದಕ್ಕೆ ನಾಚಿಕೆಯಾಗುತ್ತಿದೆ.

ದೆಹಲಿ ಸಿಎಂ

ದೆಹಲಿ ಸಿಎಂ

ಇಡೀ ದೇಶ ಇದನ್ನು ಗಮನಿಸಬೇಕು. ದೇಶಭಕ್ತಿಯ ಹೆಸರಿನಲ್ಲಿ ಏನೇನು ಮಾಡುತ್ತಿದ್ದಾರೆ. ಮೋದಿ ಲಂಚಾವತಾರದ ಬಗ್ಗೆ ನಮ್ಮಲ್ಲಿ ಇನ್ನೂ ದಾಖಲೆಗಳಿವೆ, ಅಗತ್ಯ ಬಿದ್ದರೆ ದೇಶದ ಮುಂದಿಡುತ್ತೇವೆ - ಅರವಿಂದ್ ಕೇಜ್ರಿವಾಲ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aam Aadmi Party on Tuesday (Nov 15) accused Prime Minister Narendra Modi of taking bribe while he was the CM of Gujarat. This accusation came to light with a tweet from the party's official Twitter handle.
Please Wait while comments are loading...